ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರಾನಿ ಕಪ್ Day 2: ಸೌರಾಷ್ಟ್ರ 2ನೇ ಇನ್ನಿಂಗ್ಸ್ 49/2, 227ರನ್‌ಗಳ ಹಿನ್ನಡೆ

Irani cup 2022

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ಎರಡನೇ ಇನ್ನಿಂಗ್ಸ್‌ 2 ವಿಕೆಟ್ ನಷ್ಟಕ್ಕೆ 49 ರನ್ ಕಲೆಹಾಕಿದ್ದು, ಇನ್ನೂ 227ರನ್‌ಗಳ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ ದೊಡ್ಡ ಮಟ್ಟಿನ ಹಿನ್ನಡೆಯ ಹೊರತಾಗಿಯೂ ಸೌರಾಷ್ಟ್ರ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು.

ಸೌರಾಷ್ಟ್ರ ಪರ ಸ್ನೆಲ್ ಪಟೇಲ್ 16 ರನ್‌ಗಳಿಸಿ ಔಟಾದ್ರೆ, ಹಾರ್ದಿಕ್ ದೇಸಾಯಿ 20ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ರು. ಎರಡನೇ ದಿನದಾಟದಂತ್ಯಕ್ಕೆ ಚಿರಾಗ್ ಜನಿ ಅಜೇಯ 3ರನ್, ಧರ್ಮೇಂದರ್ ಸಿನ್ನಾ ಜಡೇಜಾ ಅಜೇಯ 8 ರನ್‌ಗಳಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 374ರನ್ ಕಲೆಹಾಕಿದ ರೆಸ್ಟ್ ಆಫ್ ಇಂಡಿಯಾ

ಮೊದಲ ಇನ್ನಿಂಗ್ಸ್‌ನಲ್ಲಿ 374ರನ್ ಕಲೆಹಾಕಿದ ರೆಸ್ಟ್ ಆಫ್ ಇಂಡಿಯಾ

ಹನುಮ ವಿಹಾರಿ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ ಶತಕದ ನೆರವಿನಿಂದ 374ರನ್ ಕಲೆಹಾಕಿದೆ. ಸರ್ಫರಾಜ್ ಖಾನ್ 138ರನ್‌ಗಳ ಭರ್ಜರಿ ಶತಕ ಹಾಗೂ ಜಯಂತ್ ಯಾದವ್ 37, ಸೌರಭ್ ಕುಮಾರ್ 55ರನ್‌ಗಳ ಕೊಡುಗೆಯಿಂದ 10 ವಿಕೆಟ್ ನಷ್ಟಕ್ಕೆ 374ರನ್ ದಾಖಲಿಸಿತು. ಜೊತೆಗೆ ಮೊದಲ ಇನ್ನಿಂಗ್ಸ್‌ನಲ್ಲಿ 276ರನ್‌ಗಳ ಬೃಹತ್ ಲೀಡ್ ಪಡೆಯುವಲ್ಲಿ ಯಶಸ್ವಿಯಾಯಿತು.

ಸೌರಾಷ್ಟ್ರ ಪರ ಚೇತನ್ ಸಕಾರಿಯಾ ಐದು ವಿಕೆಟ್ ಪಡೆದ್ರೆ, ಉನಾದ್ಕಟ್ 2, ಚಿರಾಗ್ ಜನಿ 2 ವಿಕೆಟ್ ಕಬಳಿಸಿದ್ರು.

ಸೂರ್ಯಕುಮಾರ್ ಅಬ್ಬರ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ 1000 ರನ್‌ ದಾಖಲೆ

ಕೇವಲ 98ರನ್‌ಗೆ ಆಲೌಟ್ ಆಗಿದ್ದ ಸೌರಾಷ್ಟ್ರ

ಕೇವಲ 98ರನ್‌ಗೆ ಆಲೌಟ್ ಆಗಿದ್ದ ಸೌರಾಷ್ಟ್ರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಜಯದೇವ್ ಉನಾದ್ಕಟ್ ನಾಯಕತ್ವದ ಸೌರಾಷ್ಟ್ರ ಅಕ್ಷರಶಃ ಎದುರಾಳಿ ದಾಳಿಗೆ ನಲುಗಿ ಹೋಯಿತು. ಸೌರಾಷ್ಟ್ರ ಪರ ವಸವದ 22, D ಜಡೇಜಾ 28, ಚೇತನ್ ಸಕಾರಿಯಾ 13ರನ್‌ಗಳಿಸಿದ್ದೇ ಹೆಚ್ಚು. ರೆಸ್ಟ್ ಆಫ್ ಇಂಡಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಸೌರಾಷ್ಟ್ರ ಕೇವಲ 24.5 ಓವರ್‌ಗಳಲ್ಲಿ 98ರನ್‌ಗಳಿಗೆ ಆಲೌಟ್‌ ಆಯಿತು,

ರೆಸ್ಟ್ ಆಫ್ ಇಂಡಿಯಾ ಪರ ಮುಕೇಶ್ ಕುಮಾರ್ 4, ಕುಲ್‌ದೀಪ್ ಸೇನ್ 3, ಉಮ್ರಾನ್ ಮಲ್ಲಿಕ್ 3 ವಿಕೆಟ್ ಕಬಳಿಸಿದ್ರು.

ಇದಾದ ಬಳಿಕ ಬ್ಯಾಟಿಂಗ್‌ಗೆ ಇಳಿದ ರೆಸ್ಟ್ ಆಫ್‌ ಇಂಡಿಯಾಗೆ ಅದ್ಭುತ ಫಾರ್ಮ್‌ನಲ್ಲಿರುವ ಸರ್ಫರಾಜ್ ಆಧಾರವಾದ್ರು. ಶತಕ ದಾಖಲಿಸಿ ತಂಡದ ಸ್ಕೋರ್ ಅನ್ನು 300ರ ಗಡಿದಾಟಿಸಿದ್ರು. ರೆಸ್ಟ್ ಆಫ್ ಇಂಡಿಯಾ ಕೇವಲ 374ರನ್‌ಗಳಿಗೆ ಆಲೌಟ್ ಆಗಿದೆ.

IND vs SA T20: ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು

ಉಭಯ ತಂಡಗಳ ಪ್ಲೇಯಿಂಗ್ 11

ಸೌರಾಷ್ಟ್ರ: ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾದ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಧರ್ಮೇಂದ್ರಸಿನ್ಹ್ ಜಡೇಜಾ, ಪಾರ್ಥ್ ಭುತ್, ಚೇತನ್ ಸಕರಿಯಾ

ಬೆಂಚ್: ಕಮಲೇಶ್ ಮಕ್ವಾನಾ, ಕುಶಾಂಗ್ ಪಟೇಲ್, ಸಮರ್ಥ ವ್ಯಾಸ್, ಕಿಶನ್ ಪರ್ಮಾರ್, ವಿಶ್ವರಾಜ್ ಜಡೇಜಾ

ರೆಸ್ಟ್ ಆಫ್ ಇಂಡಿಯಾ: ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಹನುಮ ವಿಹಾರಿ (ನಾಯಕ), ಸರ್ಫರಾಜ್ ಖಾನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಜಯಂತ್ ಯಾದವ್, ಸೌರಭ್ ಕುಮಾರ್, ಮುಖೇಶ್ ಕುಮಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್

ಬೆಂಚ್: ಪ್ರಿಯಾಂಕ್ ಪಾಂಚಾಲ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉಪೇಂದ್ರ ಯಾದವ್, ಅರ್ಜನ್ ನಾಗ್ವಾಸ್ವಾಲ್ಲಾ, ಯಶಸ್ವಿ ಜೈಸ್ವಾಲ್

Story first published: Sunday, October 2, 2022, 22:31 [IST]
Other articles published on Oct 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X