ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರಾನಿ ಕಪ್ 2022: ರೆಸ್ಟ್ ಆಫ್ ಇಂಡಿಯಾಗೆ ಮಯಾಂಕ್ ಸೇರ್ಪಡೆ, ಸಂಪೂರ್ಣ ಸ್ಕ್ವಾಡ್ ಇಲ್ಲಿದೆ

Rest of india

ಮೂರು ವರ್ಷಗಳ ಬಳಿಕ ಇರಾನಿ ಕಪ್‌ಗೆ ವೇದಿಕೆ ಸಿದ್ಧಗೊಂಡಿದ್ದು, ಅಕ್ಟೋಬರ್ ತಿಂಗಳಿನಲ್ಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ಮತ್ತು ರೆಸ್ಟ್ ಆಫ್ ಇಂಡಿಯಾ ಮುಖಾಮುಖಿಯಾಗುತ್ತಿವೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 1) ಇರಾನಿ ಕಪ್ 2022ರ ಫೈನಲ್ ಪಂದ್ಯಕ್ಕೆ ವೇದಿಕೆಯಾಗಲಿದೆ.

ಐದು ದಿನಗಳ ಕಾಲ ನಡೆಯುವ ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಸೌರಾಷ್ಟ್ರ ತಂಡವನ್ನ ಜಯದೇವ್ ಉನಾದ್ಕಟ್ ಮುನ್ನಡೆಸಲಿದ್ದಾರೆ. ಇನ್ನು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್, ಉಮ್ರಾನ್ ಮಲ್ಲಿಕ್ ಸೇರಿದಂತೆ ಪ್ರಮುಖ ಆಟಗಾರರಿದ್ದು, ಹನುಮ ವಿಹಾರಿ ತಂಡದ ನಾಯಕತ್ವ ವಹಿಸಲಿದ್ದಾರೆ.

2019ರ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಟೂರ್ನಿ

2019ರ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಟೂರ್ನಿ

ಕೋವಿಡ್-19 ಸೋಂಕಿನ ಕಾರಣದಿಂದಾಗಿ ಖ್ಯಾತ ಇರಾನಿ ಕಪ್ 2019-20ರ ಸೀಸನ್‌ ರದ್ದುಗೊಂಡಿತ್ತು. ಇದರ ಜೊತೆಗೆ 2020-21ರ ಎಲ್ಲಾ ದೇಶೀಯ ಟೂರ್ನಿಗಳು ವಾಶ್ ಔಟ್ ಆದವು. ಹೀಗಾಗಿ ಮೂರು ವರ್ಷಗಳ ಬಳಿಕ ಇರಾನಿ ಟ್ರೋಫಿಗೆ ವೇದಿಕೆ ಸಿದ್ಧಗೊಂಡಿದೆ.

ಈ ಬಾರಿಯ ವಿಶೇಷ ಅಂದ್ರೆ , ಎರಡು ಇರಾನಿ ಟ್ರೋಫಿ ಟೂರ್ನಿಗಳನ್ನ ಈ ಬಾರಿ ಆಡಿಸಲಾಗುತ್ತದೆ. 2019-20ರ ರಣಜಿ ಚಾಂಪಿಯನ್ ಸೌರಾಷ್ಟ್ರ ತಂಡವು ಅಕ್ಟೋಬರ್ 1ರಂದು ರೆಸ್ಟ್ ಆಫ್ ಇಂಡಿಯಾವನ್ನ ಎದುರಿಸಲಿದ್ದು, ಎರಡನೇಯದು 2021-22ರ ಚಾಂಪಿಯನ್ ಮಧ್ಯಪ್ರದೇಶ ತಂಡವು ರೆಸ್ಟ್ ಆಫ್ ಇಂಡಿಯಾ ತಂಡದ ಸವಾಲು ಸ್ವೀಕರಿಸಲಿದೆ.

ಮಧ್ಯಪ್ರದೇಶ ಮತ್ತು ರೆಸ್ಟ್ ಆಫ್ ಇಂಡಿಯಾದ ನಡುವಿನ ಇರಾನ್ ಕಪ್ ಪಂದ್ಯವು ಮುಂದಿನ ವರ್ಷದಲ್ಲಿ ನಡೆಯಲಿದೆ.

ಟೆಸ್ಟ್ ಸ್ಪೆಷಲಿಸ್ಟ್‌ಗಳನ್ನ ಹೊಂದಿರುವ ಸೌರಾಷ್ಟ್ರ

ಟೆಸ್ಟ್ ಸ್ಪೆಷಲಿಸ್ಟ್‌ಗಳನ್ನ ಹೊಂದಿರುವ ಸೌರಾಷ್ಟ್ರ

ಸೌರಾಷ್ಟ್ರ ತಂಡವು ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಚೇತೇಶ್ವರ ಪೂಜಾರ, ಜಯದೇವ್ ಉನಾದ್ಕಟ್, ಶೆಲ್ಡನ್ ಜಾಕ್ಸನ್‌ ಮತ್ತು ಚೇತನ್ ಸಕಾರಿಯಾರಂತಹ ಆಟಗಾರರನ್ನ ಹೊಂದಿದೆ.

ಇನ್ನು ಹನುಮ ವಿಹಾರಿ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಯಶ್ ದುಬೆ, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್‌, ಆರ್. ಸಾಯಿ ಕಿಶೋರ್‌ರಂತಹ ದೇಶಿಯ ಕ್ರಿಕೆಟ್ ಸ್ಟಾರ್‌ಗಳನ್ನ ಒಳಗೊಂಡಿದೆ.

ಸರ್ಫರಾಜ್ ಖಾನ್ ಈ ವರ್ಷದ ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದರು. ಇನ್ನು ಯಶಸ್ವಿ ಜೈಸ್ವಾಲ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸೌತ್ ಜೋನ್ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದ್ದರು

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ರಹಾನೆ ನೇತೃತ್ವದ ಬಲಿಷ್ಠ ಮುಂಬೈ ತಂಡ ಪ್ರಕಟ: ಪೃಥ್ವಿ ಶಾ, ಶಾರ್ದೂಲ್‌ಗೆ ಸ್ಥಾನ

ರೆಸ್ಟ್ ಆಫ್ ಇಂಡಿಯಾ ಸಂಪೂರ್ಣ ಸ್ಕ್ವಾಡ್

ರೆಸ್ಟ್ ಆಫ್ ಇಂಡಿಯಾ ಸಂಪೂರ್ಣ ಸ್ಕ್ವಾಡ್

ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್, ಉಪೇಂದ್ರ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್, ಆರ್. ಸಾಯಿ ಕಿಶೋರ್, ಮುಕೇಶ್ ಕುಮಾರ್, ಉಮ್ರಾನ್ ಮಲ್ಲಿಕ್, ಕುಲ್‌ದೀಪ್ ಸೇನ್, ಅರ್ಜಾನ್ ನಾಗ್ವಾಸ್ವಾಲ್ಲಾ

ಇರಾನಿ ಕಪ್ 2022: ಸೌರಾಷ್ಟ್ರ ತಂಡಕ್ಕೆ ಪೂಜಾರ ಆಯ್ಕೆ, ಜಯದೇವ್ ಉನಾದ್ಕಟ್‌ಗೆ ನಾಯಕತ್ವ, ಸಂಪೂರ್ಣ ಸ್ಕ್ವಾಡ್‌

 ಸೌರಾಷ್ಟ್ರ ಸ್ಕ್ವಾಡ್

ಸೌರಾಷ್ಟ್ರ ಸ್ಕ್ವಾಡ್

ಜಯದೇವ್ ಉನಾದ್ಕತ್ (ನಾಯಕ), ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಚಿರಾಗ್ ಜಾನಿ, ಕಮಲೇಶ್ ಮಕ್ವಾನಾ, ಧರ್ಮೇಂದ್ರಸಿನ್ಹ್ ಜಡೇಜಾ, ಪ್ರೇರಕ್ ಮಂಕಡ್, ಚೇತನ್ ಸಕರಿಯಾ, ಸ್ನೆಲ್ ಪಟೇಲ್, ವಿಶ್ವರಾಜ್‌ಸಿನ್ಹ್ ಜಡೇಜಾ, ಕುಶಾಂಗ್ ಪಟೇಲ್, ಹಾರ್ವಿಕ್ ದೇಸಾತಿ, ಸಮರ್ಥ್‌ ವ್ಯಾಸ್, ಪಾರ್ತ್ ಬುಟ್, ಕಿಶನ್ ಪರ್ಮಾರ್

ಇರಾನಿ ಕಪ್ 2022: ಸೌರಾಷ್ಟ್ರ ತಂಡಕ್ಕೆ ಪೂಜಾರ ಆಯ್ಕೆ, ಜಯದೇವ್ ಉನಾದ್ಕಟ್‌ಗೆ ನಾಯಕತ್ವ, ಸಂಪೂರ್ಣ ಸ್ಕ್ವಾಡ್‌

ಪಂದ್ಯದ ಪ್ರಸಾರ ಮತ್ತು ಬ್ರಾಡ್‌ಕಾಸ್ಟ್‌ ಮಾಹಿತಿ

ಪಂದ್ಯದ ಪ್ರಸಾರ ಮತ್ತು ಬ್ರಾಡ್‌ಕಾಸ್ಟ್‌ ಮಾಹಿತಿ

ಇರಾನಿ ಕಪ್ ಟೂರ್ನಿ 2022ರ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಬರಲಿದೆ. ಇನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನ ವೀಕ್ಷಿಸಬಹುದಾಗಿದೆ.

Story first published: Friday, September 30, 2022, 16:14 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X