ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರಾನಿ ಕಪ್: ಸೌರಾಷ್ಟ್ರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ

Irani Cup 2022: Rest Of India won by 8 wickets against Saurashtra, Day 4 Highlights Rajkot

ಸೌರಾಷ್ಟ್ರ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಇರಾನಿ ಕಪ್‌ಗಾಗಿ ನಡೆದ ಸೆಣೆಸಾಟ ಅಂತ್ಯವಾಗಿದ್ದು ರೆಸ್ಟ್ ಆಫ್ ಇಂಡಿಯಾ ಈ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಸೌರಾಷ್ಟ್ರ ತಂಡದ ವಿರುದ್ಧ ಆರಂಭಿಕ ಹಂತದಲ್ಲಿ ಸಾಧಿಸಿದ ಯಶಸ್ಸನ್ನು ಗಟ್ಟಿಮಾಡಿಕೊಂಡ ರೆಸ್ಟ್ ಆಫ್ ಇಂಡಿಯಾ ಅಂತಿಮ ಹಂತದವರೆಗೂ ಪಟ್ಟು ಸಡಿಲಿಸಲಿಲ್ಲ. ಈ ಮೂಲಕ ಇರಾನಿ ಕಪ್ ಭರ್ಜರಿಯಾಗಿ ಗೆದ್ದುಕೊಂಡಿದೆ ಹನುಮ ವಿಹಾರಿ ನೇತೃತ್ವದ ರೆಸ್ಟ್ ಆಫ್ ಇಂಡಿಯಾ.

ಮೂರನೇ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ ತಂಡ 368 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಈ ಸಂದರ್ಭದಲ್ಲಿ ಕೇವಲ 92 ರನ್‌ಗಳ ಮುನ್ನಡೆಯನ್ನು ಸಾಧಿಸಲು ಮಾತ್ರವೇ ಸಾಧ್ಯವಾಗಿತ್ತು. ನಾಲ್ಕನೇ ದಿನ ಕೇವಲ 12 ರನ್‌ಗಳನ್ನು ಮಾತ್ರವೇ ಪೇರಿಸಲು ಸಾಧ್ಯವಾದ ಸೌರಾಷ್ಟ್ರ ತಂಡ ರೆಸ್ಟ್ ಆಫ್ ಇಂಡಿಯಾಗೆ ಗೆಲ್ಲಲು 105 ರನ್‌ಗಳ ಸುಲಭ ಗುರಿಯನ್ನು ನೆಗದಿಪಡಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರೆಸ್ಟ್ ಆಫ್ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಮೂಲಕ 8 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ರೆಸ್ಟ್ ಆಫ್ ಇಮಡಿಯಾ ಪರ ಅಭಿಮನ್ಯು ಈಶ್ವರನ್ 63 ರನ್‌ಗಳಿಸಿ ಅಜೇಯವಾಗಿಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರಕ್ಕೆ ಕೈಕೊಟ್ಟ ಬ್ಯಾಟರ್‌ಗಳು

ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರಕ್ಕೆ ಕೈಕೊಟ್ಟ ಬ್ಯಾಟರ್‌ಗಳು

ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡದ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ನೂರು ರನ್‌ಗಳ ಗಡಿದಾಟಲೂ ಸಾಧ್ಯವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ಕೇವಲ 98 ರನ್‌ಗಳಿಗೆ ಆಲೌಟ್ ಆಗಿತ್ತು. ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಇದು ಈ ಪಂದ್ಯದಲ್ಲಿ ಸೌರಾಷ್ಟ್ರ ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ಹಿಡಿತ ಸಡಿಲಗೊಳಿಸದ ರೆಸ್ಟ್ ಆಫ್ ಇಂಡಿಯಾ

ಹಿಡಿತ ಸಡಿಲಗೊಳಿಸದ ರೆಸ್ಟ್ ಆಫ್ ಇಂಡಿಯಾ

ಆದರೆ ಇತ್ತ ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಗಳಿಸುವ ಮೂಲಕ ಪಂದ್ಯದ ಮೇಲೆ ಆರಂಭದಿಂದಲೇ ಹಿಡಿತವನ್ನು ಸಾಧಿಸಲುವಲ್ಲಿ ಯಶಸ್ವಿಯಾಗಿತ್ತು. ಸರ್ಫರಾಜ್ ಖಾನ್ ಅವರ ಅಮೋಘ ಶತಕ ಹಾಗೂ ನಾಯಕ ಹನುಮ ವಿಹಾರಿಯವರ 82 ರನ್‌ಗಳ ಕೊಡುಗೆಯ ಕಾರಣದಿಂದಾಗಿ 374 ರನ್‌ಗಳನ್ನು ಗಳಿಸಿ ಉತ್ತಮ ಮೊತ್ತಡ ಮುನ್ನಡೆ ಸಾಧಿಸಲುವಲ್ಲಿ ಯಶಸ್ವಿಯಾಗಿತ್ತು.

2ನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ಕೆಳ ಕ್ರಮಾಂಕದ ಆಟಗಾರರ ಅಬ್ಬರ

2ನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ಕೆಳ ಕ್ರಮಾಂಕದ ಆಟಗಾರರ ಅಬ್ಬರ

ಇನ್ನು 2ನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ಕಠಿಣ ಸ್ಥಿತಿಯಲ್ಲಿದ್ದರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಯಶಸ್ವಿಯಾಯಿತು. ಆದರೆ ಅಗ್ರ ಕ್ರಮಾಂಕದ ಆಟಗಾರರು ಮಾತ್ರ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ ಕೆಳ ಕ್ರಮಾಂಕದ ಆಟಗಾರರಿಂದ ಅಮೋಘ ಹೋರಾಟ ಬಂದಿದೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೆಲ್ಡನ್ ಜಾಕ್ಸನ್, ಅರ್ಪಿತ್ ವಸವಡ, ಪ್ರೇರಕ್ ಮಂಕಡ್ ಹಾಗೂ ನಾಯಕ ಜಯದೇವ್ ಉನಾದ್ಕಟ್ ಅವರಿಂದ ಅದ್ಭುತ ಅರ್ಧ ಶತಕಗಳು ಬಂದಿದ್ದು ತಂಡ ಹೋರಾಟವನ್ನು ಚಾಲ್ತಿಯಲ್ಲಿಡಲು ಕಾರಣವಾದರು. ಆದರೆ ಸವಾಲಿನ ಗುರಿಯನ್ನು ನಿಗದಿಪಡಿಸಲು ಸಾಧ್ಯವಾದ ಕಾರಣ ಸೌರಾಷ್ಟ್ರ ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ಇತ್ತಂಡಗಳ ಆಡುವ ಬಳಗ ಹೀಗಿದೆ

ಇತ್ತಂಡಗಳ ಆಡುವ ಬಳಗ ಹೀಗಿದೆ

ಸೌರಾಷ್ಟ್ರ ಪ್ಲೇಯಿಂಗ್ XI: ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಧರ್ಮೇಂದ್ರಸಿನ್ಹ್ ಜಡೇಜಾ, ಪಾರ್ಥ್ ಭುತ್, ಚೇತನ್ ಸಕರಿಯಾ
ಬೆಂಚ್: ಕಮಲೇಶ್ ಮಕ್ವಾನಾ, ಕುಶಾಂಗ್ ಪಟೇಲ್, ಸಮರ್ಥ ವ್ಯಾಸ್, ಕಿಶನ್ ಪರ್ಮಾರ್, ವಿಶ್ವರಾಜ್ ಜಡೇಜಾ

ರೆಸ್ಟ್ ಆಫ್ ಇಂಡಿಯಾ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಹನುಮ ವಿಹಾರಿ (ನಾಯಕ), ಸರ್ಫರಾಜ್ ಖಾನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಜಯಂತ್ ಯಾದವ್, ಸೌರಭ್ ಕುಮಾರ್, ಮುಖೇಶ್ ಕುಮಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್
ಬೆಂಚ್: ಪ್ರಿಯಾಂಕ್ ಪಾಂಚಾಲ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉಪೇಂದ್ರ ಯಾದವ್, ಅರ್ಜನ್ ನಾಗ್ವಾಸ್ವಾಲಾ, ಯಶಸ್ವಿ ಜೈಸ್ವಾಲ್

Story first published: Tuesday, October 4, 2022, 15:53 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X