ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IRE vs IND 2nd ಟಿ20: ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್ ನೀಡಿದ್ದೇಕೆ ಎಂದು ವಿವರಿಸಿದ ಪಾಂಡ್ಯ!

IRE vs IND 2nd T20: Captain Hardik Pandya Explains Why Last Over Gave To Umran Malik

ಮಂಗಳವಾರ ಡಬ್ಲಿನ್‌ನ ದಿ ವಿಲೇಜ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 225 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರೂ, ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಐರ್ಲೆಂಡ್ ವಿರುದ್ಧ ನಾಲ್ಕು ರನ್‌ಗಳ ಕಡಿಮೆ ಅಂತರದಿಂದ ಪಂದ್ಯವನ್ನು ಗೆದ್ದಿದೆ. ಅಲ್ಲದೇ ಇದೇ ವೇಳೆ ಸರಣಿಯನ್ನು ಜಯಿಸುವುದರ ಮೂಲಕ ಐರ್ಲೆಂಡ್ ವಿರುದ್ಧ ಭಾರತ ತನ್ನ ಅಜೇಯ ದಾಖಲೆಯನ್ನು ಮುಂದುವರೆಸಿದೆ.

ಭಾರತ vs ಐರ್ಲೆಂಡ್: ಸೊನ್ನೆ ಸುತ್ತಿದ್ದರೂ ದಿನೇಶ್ ಕಾರ್ತಿಕ್‌ಗೆ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ: ಕಾರಣ?ಭಾರತ vs ಐರ್ಲೆಂಡ್: ಸೊನ್ನೆ ಸುತ್ತಿದ್ದರೂ ದಿನೇಶ್ ಕಾರ್ತಿಕ್‌ಗೆ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ: ಕಾರಣ?

ಐರ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸಿಕ್ಸರ್, ಬೌಂಡರಿಗಳ ಮೂಲಕ ಬೃಹತ್ ಮೊತ್ತವನ್ನು ಬೆನ್ನಟ್ಟುವ ಸಮೀಪಕ್ಕೆ ಬಂದರು. ಅಂತಿಮ ಓವರ್‌ನಲ್ಲಿ ಆತಿಥೇಯ ತಂಡಕ್ಕೆ 17 ರನ್‌ಗಳ ಅಗತ್ಯವಿತ್ತು. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಯುವ ವೇಗಿ ಉಮ್ರಾನ್ ಮಲಿಕ್ ಅವರಿಗೆ ಪಂದ್ಯದ ಕೊನೆಯ ನಿರ್ಣಾಯಕ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ನೀಡಿದ ಕಾರಣವನ್ನು ವಿವರಿಸಿದ್ದಾರೆ.

ವೇಗದ ಬೌಲಿಂಗ್‌ನಲ್ಲಿ 18 ರನ್ ಗಳಿಸುವುದು ಯಾವಾಗಲೂ ಕಠಿಣ

ವೇಗದ ಬೌಲಿಂಗ್‌ನಲ್ಲಿ 18 ರನ್ ಗಳಿಸುವುದು ಯಾವಾಗಲೂ ಕಠಿಣ

"ನಾನು ಎಲ್ಲಾ ಒತ್ತಡವನ್ನು ನನ್ನ ಸಮೀಕರಣದಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದೆ. ನಾನು ವಾಸ್ತವದಲ್ಲಿರಲು ಬಯಸುತ್ತೇನೆ ಮತ್ತು ನಾನು ಉಮ್ರಾನ್ ಮಲಿಕ್‌ಗೆ ಬೆಂಬಲ ನೀಡಿದ್ದೇನೆ. ಅವರು ವೇಗದ ಬೌಲಿಂಗ್ ಹೊಂದಿದ್ದು, ಅವರ ವೇಗದ ಬೌಲಿಂಗ್‌ನಲ್ಲಿ 18 ರನ್ ಗಳಿಸುವುದು ಯಾವಾಗಲೂ ಕಠಿಣವಾಗಿರುತ್ತದೆ. ಆದರೂ ಎದುರಾಳಿ ಬ್ಯಾಟ್ಸ್‌ಮನ್‌ಗಳು ಕೆಲವು ಅದ್ಭುತ ಹೊಡೆತಗಳನ್ನು ಬಾರಿಸುವುದರ ಮೂಲಕ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಣ ಮಾಡಿದ ನಮ್ಮ ಬೌಲರ್‌ಗಳಿಗೆ ಗೆಲುವಿನ ಶ್ರೇಯಸ್ಸು ಸಲ್ಲಬೇಕು," ಎಂದು ಪಂದ್ಯದ ನಂತರದ ಪ್ರಶಸ್ತಿ ವಿತರಣಾ ವೇದಿಕೆಯಲ್ಲಿ ಹೇಳಿದರು.

ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು

ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು

28 ವರ್ಷದ ನಾಯಕ ಹಾರ್ದಿಕ್ ಪಾಂಡ್ಯ ಐರ್ಲೆಂಡ್‌ನಲ್ಲಿ ಆಡಿದ ಬಗ್ಗೆ ಮತ್ತು ಭಾರತೀಯ ಅಭಿಮಾನಿಗಳಿಂದ ಭಾರಿ ಬೆಂಬಲ ಪಡೆದ ಬಗ್ಗೆಯೂ ಮಾತನಾಡಿದರು. ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ, ತಮ್ಮ ನೆಚ್ಚಿನ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಜೋರಾಗಿ ಹುರಿದುಂಬಿಸಿದರು ಎಂದು ಹೇಳಿದರು.

"ಇಲ್ಲಿ ನೆರೆದಿದ್ದ ಜನಸಮೂಹದ ನೆಚ್ಚಿನ ಹುಡುಗರು ದಿನೇಶ್ ಮತ್ತು ಸಂಜು ಸ್ಯಾಮ್ಸನ್. ಪ್ರಪಂಚದ ಈ ಭಾಗವನ್ನು ಅನುಭವಿಸಲು ಉತ್ತಮ ಅನುಭವವಾಗಿದೆ. ನಮಗೆ ಸಾಕಷ್ಟು ಬೆಂಬಲ ಬಂದಿದೆ, ನಾವು ಅವರನ್ನು ಮನರಂಜಿಸಲು ಪ್ರಯತ್ನಿಸುತ್ತೇವೆ ಮತ್ತು ನಾವು ಅದನ್ನು ಮಾಡಿದ್ದೇವೆ ಎಂದು ಭಾವಿಸುತ್ತೇನೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು," ಎಂದು ಭಾರತ ತಂಡದ ನಾಯಕ ತಿಳಿಸಿದರು.

ದೀಪಕ್ ಹೂಡಾ ಮತ್ತು ಉಮ್ರಾನ್ ಮಲಿಕ್‌ಗೆ ಹೆಚ್ಚು ಸಂತೋಷ

ದೀಪಕ್ ಹೂಡಾ ಮತ್ತು ಉಮ್ರಾನ್ ಮಲಿಕ್‌ಗೆ ಹೆಚ್ಚು ಸಂತೋಷ

"ಬಾಲ್ಯದಿಂದಲೇ ದೇಶಕ್ಕಾಗಿ ಆಡುವುದು ಯಾವಾಗಲೂ ಕನಸಾಗಿರುತ್ತದೆ. ನಾಯಕತ್ವ ಮತ್ತು ಮೊದಲ ಗೆಲುವು ಪಡೆಯುವುದು ವಿಶೇಷವಾಗಿತ್ತು, ಈಗ ಸರಣಿಯನ್ನು ಗೆದ್ದಿರುವುದು ಇನ್ನೂ ವಿಶೇಷವಾಗಿದೆ. ದೀಪಕ್ ಹೂಡಾ ಮತ್ತು ಉಮ್ರಾನ್ ಮಲಿಕ್‌ಗೆ ಹೆಚ್ಚು ಸಂತೋಷವಾಗಿದೆ," ಎಂದು ಹಾರ್ದಿಕ್ ಪಾಂಡ್ಯ ವಿವರಿಸಿದರು.

ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನಿ (60), ಪಾಲ್ ಸ್ಟಿರ್ಲಿಂಗ್ (40) ಮತ್ತು ಹ್ಯಾರಿ ಟೆಕ್ಟರ್ (39) ಅವರ ಅತ್ಯುತ್ತಮ ಬ್ಯಾಟಿಂಗ್ ವ್ಯರ್ಥವಾಯಿತು. ಭಾರತದ ಬೌಲರ್‌ ಉಮ್ರಾನ್ ಮಲಿಕ್ ಕೊನೆಯ ಓವರ್‌ನಲ್ಲಿ ಐರ್ಲೆಂಡ್‌ನಿಂದ ಪಂದ್ಯವನ್ನು ಕಸಿದುಕೊಂಡಿತು, ಕೊನೆಯ ಎಸೆತದಲ್ಲಿ ಆರು ರನ್‌ಗಳ ಅವಶ್ಯಕತೆ ಇದ್ದಾಗ ಕೇವಲ ಒಂದು ರನ್ ನೀಡಿದರು. ಹೀಗಾಗಿ ರೋಚಕ ನಾಲ್ಕು ರನ್‌ಗಳಿಂದ ಗೆದ್ದಿತು.

ದೀಪಕ್ ಹೂಡಾ 104 ಮತ್ತು ಸ್ಯಾಮ್ಸನ್ 77 ರನ್

ದೀಪಕ್ ಹೂಡಾ 104 ಮತ್ತು ಸ್ಯಾಮ್ಸನ್ 77 ರನ್

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ದೀಪಕ್ ಹೂಡಾ 104 ಮತ್ತು ಸ್ಯಾಮ್ಸನ್ 77 ರನ್ ಗಳಿಸಿದರ ಫಲವಾಗಿ, ಭಾರತ ಒಟ್ಟು 225/7 ಸ್ಕೋರ್ ಮಾಡಿತ್ತು. ದೀಪಕ್ ಹೂಡಾ ಆಡಿದ ಎರಡನೇ ಪಂದ್ಯದಲ್ಲಿಯೇ ಚೊಚ್ಚಲ ಟಿ20 ಶತಕ ಬಾರಿಸಿ ಪಂದ್ಯ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದರು.

ಈ ಮೂಲಕ ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಐರ್ಲೆಂಡ್ ಕೊನೆಯ ಎಸೆತದವರೆಗೂ ಪಂದ್ಯದಲ್ಲಿ ಇದ್ದುದರಿಂದ ಬಹಳಷ್ಟು ಧನಾತ್ಮಕ ಅಂಶಗಳೊಂದಿಗೆ ಹೊರನಡೆಯುತ್ತದೆ ಮತ್ತು ಅವರ ಬ್ಯಾಟಿಂಗ್‌ನಿಂದ ಭಾರತಕ್ಕೆ ಭವಿಷ್ಯದಲ್ಲಿ ಭಯವನ್ನು ತುಂಬಿದೆ.

Story first published: Wednesday, June 29, 2022, 14:32 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X