IRE vs IND ಟಿ20 ಸರಣಿ: ಸ್ಕೋರ್‌ಬೋರ್ಡ್‌ನಲ್ಲಿ ರನ್ ಹೆಚ್ಚಿಸುವ ಸಾಮರ್ಥ್ಯ ಈತನಿಗಿದೆ; ರವಿಶಾಸ್ತ್ರಿ

ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಐರ್ಲೆಂಡ್‌ನಲ್ಲಿ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಯುವ ಬ್ಯಾಟರ್ ರಾಹುಲ್ ತ್ರಿಪಾಠಿ ಅವರ ಬ್ಯಾಟಿಂಗ್ ವಿಧಾನವನ್ನು ಶ್ಲಾಘಿಸಿದ್ದಾರೆ.

"ರಾಹುಲ್ ತ್ರಿಪಾಠಿ ಅವರು ಸ್ಕೋರ್‌ಬೋರ್ಡ್ ಅನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಈ ಸಂದರ್ಭದಲ್ಲಿ ಅತ್ಯುತ್ತಮ ಶಾಟ್-ಮೇಕಿಂಗ್ ಸಾಮರ್ಥ್ಯ ಮತ್ತು ಆಲ್‌ರೌಂಡ್ ಆಟವನ್ನು ಆಡುತ್ತಾರೆ," ಎಂದು ರವಿಶಾಸ್ತ್ರಿ ಹೇಳಿದರು.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಆಂಡ್ರ್ಯೂ ಬಲ್ಬಿರ್ನಿ ನಾಯಕತ್ವದ ಐರ್ಲೆಂಡ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಲು ಕರೆ ಬಂದ ನಂತರ ರಾಹುಲ್ ತ್ರಿಪಾಠಿ ಹೆಚ್ಚು ಖುಷಿಯಲ್ಲಿದ್ದಾರೆ. ಬಲಗೈ ಬ್ಯಾಟರ್ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ದೇಶೀಯ ಟೂರ್ನಿಯಲ್ಲಿ ತನ್ನ ಪ್ರದರ್ಶನವನ್ನು ತೋರಿಸುತ್ತಾ ಬಂದಿದ್ದಾನೆ ಮತ್ತು ಅನೇಕ ವರ್ಷಗಳ ಅವರ ಶ್ರಮವು ಅಂತಿಮವಾಗಿ ಫಲ ನೀಡಿದೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಬಣ್ಣಿಸಿದ್ದಾರೆ.

ರಾಹುಲ್ ತ್ರಿಪಾಠಿ 2017ರಲ್ಲಿ ಬೆಳಕಿಗೆ ಬಂದರು

ರಾಹುಲ್ ತ್ರಿಪಾಠಿ 2017ರಲ್ಲಿ ಬೆಳಕಿಗೆ ಬಂದರು

ರಾಹುಲ್ ತ್ರಿಪಾಠಿ 2017ರಲ್ಲಿ ಈಗ ನಿಷ್ಕ್ರಿಯವಾಗಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್‌ಗಾಗಿ ಹೆಚ್ಚು ರನ್ ಗಳಿಸಿದ ನಂತರ ಬೆಳಕಿಗೆ ಬಂದರು. ಅದರ ನಂತರ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದರು.

ಐಪಿಎಲ್ 2022ರಲ್ಲಿ ರಾಹುಲ್ ತ್ರಿಪಾಠಿ 158.24 ಸ್ಟ್ರೈಕ್‌ರೇಟ್‌ನಲ್ಲಿ 413 ರನ್ ಗಳಿಸಿದರು. ಆದಾಗ್ಯೂ ಆರೆಂಜ್ ಆರ್ಮಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಭಾರತ ತಂಡಕ್ಕಾಗಿ ಆಡಲು ಆಯ್ಕೆಯಾದ ನಂತರ ರಾಹುಲ್ ತ್ರಿಪಾಠಿ ತಮ್ಮ ವೃತ್ತಿಜೀವನದ ಏರಿಳಿತಗಳಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳಿದರು.

ಅವನು ಎಡ್ಜ್ಡ್ ಬಾಲ್‌ನ ಹಿಂದೆ ಹೋಗುವುದಿಲ್ಲ

ಅವನು ಎಡ್ಜ್ಡ್ ಬಾಲ್‌ನ ಹಿಂದೆ ಹೋಗುವುದಿಲ್ಲ

"ರಾಹುಲ್ ತ್ರಿಪಾಠಿ ಕ್ರೀಸ್‌ನಲ್ಲಿದ್ದಾಗ ಸ್ಕೋರ್‌ಬೋರ್ಡ್ ಟಿಕ್ ಆಗುತ್ತದೆ. ಅವನು ಎಡ್ಜ್ಡ್ ಬಾಲ್‌ನ ಹಿಂದೆ ಹೋಗುವುದಿಲ್ಲ. ಶಾಟ್ ಮಾಡುವ ಸಾಮರ್ಥ್ಯ, ಅವನಲ್ಲಿರುವ ಆಲ್‌ರೌಂಡ್ ಆಟ, ಅವನು ಯಾವುದೇ ವಿರೋಧದಿಂದ ಅಥವಾ ಯಾವುದೇ ಬೌಲರ್‌ಗಳಿಗೆ ಬೆಚ್ಚಿಬೀಳುವುದಿಲ್ಲ. ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಸ್ಕೋರ್ ಮಾಡುತ್ತಿದ್ದಾರೆ. ನಂ.3ರಲ್ಲಿ ಯಾವುದು ಅದ್ಭುತವಾಗಿದೆ ಎಂದು ನಿಮಗೆ ತಿಳಿದಿದೆ. ಏಕೆಂದರೆ ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ," ಎಂದು ರವಿಶಾಸ್ತ್ರಿ ESPNcricinfo ನೊಂದಿಗೆ ಮಾತನಾಡುತ್ತಾ ಹೇಳಿದರು.

ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ

ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ

"ಇದು ಬಹಳ ದೊಡ್ಡ ಅವಕಾಶ, ಕನಸು ನನಸಾದ ಕ್ಷಣ ಮತ್ತು ನಾನು ಅದನ್ನು ಪ್ರಶಂಸಿಸುತ್ತೇನೆ," ಎಂದು ಇತ್ತೀಚೆಗೆ ರಾಹುಲ್ ತ್ರಿಪಾಠಿ ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ್ದಾರೆ.

"ಭಾರತ ತಂಡದ ಆಯ್ಕೆಗಾರರು ಮತ್ತು ಎಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಮಾಡಿದ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಆಶಾದಾಯಕವಾಗಿ ನನಗೆ ಆಡಲು ಅವಕಾಶ ಸಿಕ್ಕರೆ, ನಾನು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ," ಎಂದು ರಾಹುಲ್ ತ್ರಿಪಾಠಿ ಹೇಳಿದರು.

ಭಾರತ vs ಐರ್ಲೆಂಡ್ ಸಂಭಾವ್ಯ ತಂಡಗಳು

ಭಾರತ vs ಐರ್ಲೆಂಡ್ ಸಂಭಾವ್ಯ ತಂಡಗಳು

ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್ ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್, ಸ್ಟೀಫನ್ ಡೊಹೆನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೇರ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಕ್ರೇಗ್ ಯಂಗ್.

For Quick Alerts
ALLOW NOTIFICATIONS
For Daily Alerts
Story first published: Saturday, June 25, 2022, 9:05 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X