ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

361 ರನ್ ಟಾರ್ಗೆಟ್‌: ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್‌ಗೆ 1ರನ್‌ಗಳ ವೀರೋಚಿತ ಸೋಲು

New zealand

ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಐರ್ಲೆಂಡ್ ಬೃಹತ್ ಗುರಿಯನ್ನ ಬೆನ್ನತ್ತಿ ಗೆಲುವಿನಂಚಿಗೆ ಬಂದು ಎಡವಿದೆ. ನ್ಯೂಜಿಲೆಂಡ್ ನೀಡಿದ್ದ 361ರನ್‌ಗಳ ಗುರಿ ಬೆನ್ನತ್ತಿದ್ದ ಐರ್ಲೆಂಡ್‌ ಕೇವಲ 1ರನ್‌ಗಳಿಂದ ವೀರೋಚಿತ ಸೋಲನ್ನ ಅನುಭವಿಸಿದೆ.

ವೆಸ್ಟ್ ಇಂಡೀಸ್ ಸರಣಿ ಬಳಿಕ ವಿಭಿನ್ನ ಕೊಹ್ಲಿಯನ್ನ ನೋಡುತ್ತೇವೆ ಎಂದು ಭಾವಿಸೋಣ: ಆಶಿಶ್ ನೆಹ್ರಾವೆಸ್ಟ್ ಇಂಡೀಸ್ ಸರಣಿ ಬಳಿಕ ವಿಭಿನ್ನ ಕೊಹ್ಲಿಯನ್ನ ನೋಡುತ್ತೇವೆ ಎಂದು ಭಾವಿಸೋಣ: ಆಶಿಶ್ ನೆಹ್ರಾ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟಾಮ್ ಲಥಾಮ್ ನಾಯಕತ್ವದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿತು. ಮಾರ್ಟಿನ್ ಗಪ್ಟಿಲ್ ಅಮೋಘ ಶತಕ (115), ಫಿನ್ ಅಲೆನ್ 33, ಟಾಮ್ ಲಥಾಮ್ 30, ಹೆನ್ರಿ ನಿಕೋಲ್ಸ್ ಸ್ಫೋಟಕ 79 ರನ್, ಗ್ಲೆನ್ ಫಿಲಿಪ್ಸ್‌ 47 ರನ್, ಎಂ ಬ್ರೇಸ್‌ವೆಲ್ ಅಜೇಯ 21ರನ್‌ಗಳ ನೆರವಿನಿಂದ ಹಾಗೂ ಸ್ಯಾಂಟ್ನರ್ ಅಜೇಯ 14ರನ್ ಕೊಡುಗೆಯಿಂದ 360ರನ್ ಕಲೆಹಾಕಿತು.

ಅದಾಗಲೇ ಎರಡು ಪಂದ್ಯ ಸೋತಿದ್ದ ಐರ್ಲೆಂಡ್ ಸರಣಿ ಆಸೆ ಕೈ ಬಿಟ್ಟಿತ್ತು. ಆದ್ರೆ ಅಂತಿಮ ಪಂದ್ಯವನ್ನಾದ್ರೂ ಗೆಲ್ಲಬೇಕೆಂದು ಪಣತೊಟ್ಟಿದ್ದ ಆತಿಥೇಯರು 361ರನ್ ಗುರಿ ಬೆನ್ನತ್ತುವ ಸಾಹಸಕ್ಕೆ ಕೈ ಹಾಕಿದ್ರು. ಆದ್ರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ನಾಯಕ ಆ್ಯಂಡ್ರ್ಯೂ ಬಲ್ಬಿರೈನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ಸರಣಿಯಲ್ಲಿ ಎರಡನೇ ಶತಕ ಸಿಡಿಸಿದ ಹ್ಯಾರಿ ಟೆಕ್ಟರ್

ಐರ್ಲೆಂಡ್ ಓಪನರ್ ಪೌಲ್ ಸ್ಟಿರ್ಲಿಂಗ್ 120 ರನ್‌ಗಳ ಜವಾಬ್ದಾರಿಯುತ ಆಟದ ಬಳಿಕ , ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ 108ರನ್‌ಗಳ ಶತಕದ ನೆರವಿನಿಂದ ಐರ್ಲೆಂಡ್ ಗುರಿ ಬೆನ್ನತ್ತುವ ವಿಶ್ವಾಸ ಹುಟ್ಟುಹಾಕಿತು. ಸರಣಿಯಲ್ಲಿ ಎರಡನೇ ಶತಕ ಸಿಡಿಸಿದ ಹ್ಯಾರಿ 106 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಕಲೆಹಾಕಿದರು.

ಈ ಜೋಡಿಗಳ ವೈಯಕ್ತಿಕ ಶತಕದ ಜೊತೆಗೆ ಐರ್ಲೆಂಡ್‌ 300ರ ಗಡಿದಾಟಲು ಸಾಧ್ಯವಾಯಿತು. ಆದ್ರೆ ನಂತರದಲ್ಲಿ ಗ್ಯಾರೆತ್ 22ರನ್‌ ಗಳಿಸಿದ್ದು ಬಿಟ್ರೆ, ಕೆಳಕ್ರಮಾಂಕದ ಬ್ಯಾಟರ್‌ಗಳು ತಂಡಕ್ಕೆ ನೆರವಾಗುವಲ್ಲಿ ವಿಫಲಗೊಂಡರು. ಜಾರ್ಜ್ ಡಾಕ್ರೆಲ್ 22ರನ್‌ಗಳಿಸಿ ಹೋರಾಟದ ಪ್ರಯತ್ನ ನಡೆಸಿದ್ರೂ ಸಹ ಐರ್ಲೆಂಡ್‌ಗೆ ಗೆಲುವಿನ ದಡ ತಲುಪಲು ಸಾಧ್ಯವಾಗಲಿಲ್ಲ.

ಕೊನೆಯ 3 ಓವರ್‌ನಲ್ಲಿ 25ರನ್ ಡಿಫೆಂಡ್ ಮಾಡಿಕೊಂಡ ಕಿವೀಸ್

ಕೊನೆಯ ಮೂರು ಓವರ್‌ಗಳಲ್ಲಿ 25ರನ್‌ಗಳು ಬೇಕಿದ್ದ ವೇಳೆಯಲ್ಲಿ ಐರ್ಲೆಂಡ್ ಸತತ ವಿಕೆಟ್ ಕಳೆದುಕೊಂಡ ಪರಿಣಾಮ ಸೋಲಿಗೆ ಶರಣಾಗಬೇಕಾಯಿತು. 49 ನೇ ಓವರ್‌ನಲ್ಲಿ ಏಕೈಕ ಭರವಸೆಯಾಗಿದ್ದ ಜಾರ್ಜ್ ಡಾಕ್ರೆಲ್ ಔಟಾಗುತ್ತಿದ್ದಂತೆ ಐರ್ಲೆಂಡ್‌ ಮನದಲ್ಲಿ ಸೋಲಿನ ಚಾಯೆ ಆವರಿಸಿತು. ಕೊನೆಯ ಓವರ್‌ನಲ್ಲಿ 10 ರನ್‌ಗಳು ಬೇಕಿತ್ತು. ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ ಒಂದು ರನ್‌ ಬಂದಿದ್ದು, ಮೂರನೇ ಎಸೆತದಲ್ಲಿ ಯಂಗ್ ಬೌಂಡರಿ ಸಿಡಿಸಿ ಗೆಲುವಿನ ಆಸೆ ಜೀವಂತವಾಗಿರಿಸಿದ್ರು.

ಆದ್ರೆ ಬ್ಲೇರ್ ಟಿಕ್ನರ್ ನ ನಾಲ್ಕನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ರನೌಟ್‌ ಯಂಗ್ ರನೌಟ್ ಆದ್ರು. ಈ ವೇಳೆಯಲ್ಲಿಯೂ ಐರ್ಲೆಂಡ್‌ಗೆ ಗೆಲ್ಲುವ ಅವಕಾಶವಿತ್ತು. ಕೊನೆಯ ಎರಡು ಎಸೆತಗಳಲ್ಲಿ ನಾಲ್ಕು ರನ್‌ಗಳಷ್ಟೇ ಬೇಕಿತ್ತು. ಆದ್ರೆ ಕಿವೀಸ್ ಬೌಳರ್ ಬ್ಲೇರ್ ಟಿಕ್ನರ್ ಅನುಭವದ ಮುಂದೆ ಐರ್ಲೆಂಡ್ ಆಟ ನಡೆಯಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಸಿಂಗಲ್ ಬಂದ ಪರಿಣಾಮ ನ್ಯೂಜಿಲೆಂಡ್ ಕೇವಲ 1ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿತು.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3-0 ಅಂತರದಲ್ಲಿ ಏಕದಿನ ಸರಣಿಯನ್ನ ಗೆದ್ದು ವೈಟ್‌ವಾಶ್ ಮಾಡಿದೆ. ಗೆಲ್ಲೋ ಪಂದ್ಯ ಸೋತ ಐರ್ಲೆಂಡ್ ವಿರೋಚಿತ ಹೋರಾಟ ಪ್ರದರ್ಶಿಸಿ ಅಭಿಮಾನಿಗಳ ಮನ ಗೆದ್ದಿದೆ. ಉಭಯ ತಂಡಗಳು ಜುಲೈ 18ರಿಂದ ಮೂರು ಪಂದ್ಯಗಳ T20 ಸರಣಿಯಲ್ಲಿ ಭಾಗಿಯಾಗಲಿವೆ.

ವೆಸ್ಟ್ ಇಂಡೀಸ್ ಸರಣಿ ಬಳಿಕ ವಿಭಿನ್ನ ಕೊಹ್ಲಿಯನ್ನ ನೋಡುತ್ತೇವೆ ಎಂದು ಭಾವಿಸೋಣ: ಆಶಿಶ್ ನೆಹ್ರಾ

ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ಮೈಕಲ್ ಬ್ರೇಸ್‌ವೆಲ್

ಸರಣಿಯುದ್ದಕ್ಕೂ ಆಲ್‌ರೌಂಡರ್ ಪ್ರದರ್ಶನ ನೀಡಿದ ಕೆಳಕ್ರಮಾಂಕದ ಬ್ಯಾಟರ್ ಹಾಗೂ ಬೌಲರ್ ಮೈಕಲ್ ಬ್ರೇಸ್‌ವೆಲ್‌ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು. ಮೂರು ಪಂದ್ಯಗಳಲ್ಲಿ ಅಜೇಯ 127, ಅಜೇಯ 42, ಅಜೇಯ 21 ರನ್‌ಗಳನ್ನ ಕಲೆಹಾಕುವುದರ ಜೊತೆಗೆ 2 ವಿಕೆಟ್ ಸಹ ಪಡೆದಿದ್ದಾರೆ. ಜೊತೆಗೆ 3 ಕ್ಯಾಚ್ ಹಿಡಿದು ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ.

ಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್‌ಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಸಿಕ್ಕಿದೆ.

Story first published: Saturday, July 16, 2022, 7:56 [IST]
Other articles published on Jul 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X