ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IRE vs NZ 3ನೇ ಏಕದಿನ: ಐರ್ಲೆಂಡ್‌ಗೆ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್ ಚಿತ್ತ ವೈಟ್‌ವಾಷ್‌ನತ್ತ

IRE vs NZ: Ireland needs 361 runs to win against New Zealand in 3rd ODI

ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಿದ್ದು, ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ ಹಾಗೂ ಈ ಎರಡೂ ಪಂದ್ಯಗಳಲ್ಲಿಯೂ ಪ್ರವಾಸಿ ನ್ಯೂಜಿಲೆಂಡ್ ಐರ್ಲೆಂಡ್ ತಂಡಕ್ಕೆ ಸೋಲುಣಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.

ಇದೀಗ ನ್ಯೂಜಿಲೆಂಡ್ ಐರ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿ ಎದುರಾಳಿ ಐರ್ಲೆಂಡ್ ತಂಡಕ್ಕೆ 361 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಈ ಮೂರನೇ ಏಕದಿನ ಪಂದ್ಯದ ಲೈವ್ ಸ್ಕೋರ್ ಕೆಳಕಂಡಂತಿದೆ.

1
53598
ಗಪ್ಟಿಲ್ ಶತಕ

ಗಪ್ಟಿಲ್ ಶತಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ 126 ಎಸೆತಗಳಲ್ಲಿ 115 ರನ್ ಬಾರಿಸಿ ಶತಕ ಸಿಡಿಸಿದರು. ಮಾರ್ಟಿನ್ ಗಪ್ಟಿಲ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಕೂಡ ಸೇರಿದ್ದವು.

ಅಬ್ಬರಿಸಿದ ಹೆನ್ರಿ ನಿಕೋಲ್ಸ್

ಅಬ್ಬರಿಸಿದ ಹೆನ್ರಿ ನಿಕೋಲ್ಸ್

ಒಂದೆಡೆ ಮಾರ್ಟಿನ್ ಗಪ್ಟಿಲ್ ಶತಕದ ನೆರವಿನಿಂದ ನ್ಯೂಜಿಲೆಂಡ್ ಉತ್ತಮ ಆರಂಭವನ್ನು ಪಡೆದುಕೊಂಡರೆ ಮತ್ತೋರ್ವ ಆರಂಭಿಕ ಆಟಗಾರನಾದ ಫಿನ್ ಅಲೆನ್ 33 ರನ್ ಗಳಿಸಿ ನಿರ್ಗಮಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್ ಯಂಗ್ 3 ರನ್, ನಾಯಕ ಟಾಮ್ ಲಾಥಮ್ 30 ರನ್, ಹೆನ್ರಿ ನಿಕೊಲ್ಸ್ 79 ರನ್ ಮತ್ತು ಗ್ಲೆನ್ ಫಿಲಿಪ್ಸ್ 47 ರನ್ ಬಾರಿಸಿದರು. ಹಾಗೂ ಮೈಕೆಲ್ ಬ್ರೇಸ್ ವೆಲ್ ಅಜೇಯ 21 ಮತ್ತು ಮಿಚೆಲ್ ಸ್ಯಾಂಟ್ನರ್ ಅಜೇಯ 14 ರನ್ ಕಲೆ ಹಾಕಿದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿ ನಿಕೊಲ್ಸ್ 54 ಎಸೆತಗಳಲ್ಲಿ 79 ರನ್ ಚಚ್ಚಿದರೆ, ಗ್ಲೆನ್ ಫಿಲಿಪ್ಸ್ 30 ಎಸೆತಗಳಲ್ಲಿ 47 ರನ್ ಬಾರಿಸಿದರು. ಹೀಗೆ ಮಧ್ಯಮ ಕ್ರಮಾಂಕದಲ್ಲಿ ಈ ಇಬ್ಬರ ಅಬ್ಬರದಿಂದ ನ್ಯೂಜಿಲೆಂಡ್ ರನ್ ವೇಗ ಹೆಚ್ಚಿತು.


ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾದ ಐರ್ಲೆಂಡ್ ಪರ ಜೋಶ್ವಾ ಲಿಟಲ್ 2 ವಿಕೆಟ್ ಪಡೆದರೆ, ಕ್ರೈಗ್ ಯಂಗ್, ಕರ್ಟಿಸ್ ಕ್ಯಾಂಪರ್ ಮತ್ತು ಗ್ಯಾರೆತ್ ಡಿಲಾನಿ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು

ಆಡುವ ಬಳಗಗಳು

ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಆಂಡಿ ಮ್ಯಾಕ್‌ಬ್ರೈನ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್‍ ಕೀಪರ್‌), ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಗರೆಥ್ ಡೆಲಾನಿ, ಗ್ರಹಾಂ ಹ್ಯೂಮ್


ನ್ಯೂಜಿಲೆಂಡ್‌: ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ವಿಲ್ ಯಂಗ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್‌), ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್

Story first published: Friday, July 15, 2022, 19:21 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X