ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IRE vs NZ: ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ, ಐರ್ಲೆಂಡ್‌ಗೆ ಆರಂಭಿಕ ಆಘಾತ; 2ನೇ ಏಕದಿನದ ಲೈವ್ ಸ್ಕೋರ್

IRE vs NZ: Ireland vs NewZealand 2nd ODI toss report and live score

ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋತು ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದ್ದ ನ್ಯೂಜಿಲೆಂಡ್ ಇದೀಗ ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.

ಕಿರಿಕ್ ಮಾಡಿದ ಇಂಗ್ಲೆಂಡ್‌ನ ಆ ಆಟಗಾರನಿಗೆ ಮೈದಾನದಲ್ಲೇ ಗುದ್ದಲು ಪ್ಲಾನ್ ಮಾಡಿದ್ರು ರೋಹಿತ್-ಪಂತ್!ಕಿರಿಕ್ ಮಾಡಿದ ಇಂಗ್ಲೆಂಡ್‌ನ ಆ ಆಟಗಾರನಿಗೆ ಮೈದಾನದಲ್ಲೇ ಗುದ್ದಲು ಪ್ಲಾನ್ ಮಾಡಿದ್ರು ರೋಹಿತ್-ಪಂತ್!

ಮೊದಲನೆಯದಾಗಿ ಏಕದಿನ ಸರಣಿ ಆರಂಭವಾಗಿದ್ದು, ಜುಲೈ 10ರ ಭಾನುವಾರದಂದು ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಐರ್ಲೆಂಡ್ ವಿರುದ್ಧ 1 ವಿಕೆಟ್‌ನ ರೋಚಕ ಜಯವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಗೆಲುವಿನ ಖಾತೆ ತೆರೆದು 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೀಗೆ ಪ್ರಥಮ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿದ್ದ ನ್ಯೂಜಿಲೆಂಡ್ ಅಂತಿಮ ಓವರ್‌ನಲ್ಲಿ ಅಬ್ಬರಿಸುವ ಮೂಲಕ ಗೆಲುವು ಸಾಧಿಸಿದ್ದು ಇದೀಗ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ 4 ಟಿ ಟ್ವೆಂಟಿ ಸರಣಿಯ ಫಲಿತಾಂಶಗಳು; ಕೊಹ್ಲಿ ದರ್ಬಾರ್!ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ 4 ಟಿ ಟ್ವೆಂಟಿ ಸರಣಿಯ ಫಲಿತಾಂಶಗಳು; ಕೊಹ್ಲಿ ದರ್ಬಾರ್!

ಡಬ್ಲಿನ್‌ನ ದ ವಿಲೇಜ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲಾಥಮ್ ಫೀಲ್ಡಿಂಗ್ ಆಯ್ದುಕೊಂಡಿದ್ದು ಎದುರಾಳಿ ಐರ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಪೌಲ್ ಸ್ಟರ್ಲಿಂಗ್ ಅವರ ವಿಕೆಟ್ ಕಳೆದುಕೊಳ್ಳುವುದರ ಮೂಲಕ ಆರಂಭಿಕ ಆಘಾತ ಅನುಭವಿಸಿದೆ. ಪೌಲ್ ಸ್ಟರ್ಲಿಂಗ್ 4 ಎಸೆತಗಳನ್ನು ಎದುರಿಸಿ ಯಾವುದೇ ರನ್ ಕಲೆಹಾಕದೇ ಮ್ಯಾಟ್ ಹೆನ್ರಿ ಎಸೆತದಲ್ಲಿ ಎಲ್ ಬಿಡಬ್ಲ್ಯುಗೆ ಬಲಿಯಾದರು. ಹೀಗೆ ಆರಂಭದಲ್ಲೇ ಆಘಾತ ಅನುಭವಿಸಿದ ಐರ್ಲೆಂಡ್ 3.2 ಓವರ್‌ಗಳವರೆಗೆ ಯಾವುದೇ ರನ್ ಗಳಿಸಿರಲಿಲ್ಲ, ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಜಾಕಬ್ ಡಫೀಗೆ ಐರ್ಲೆಂಡ್ ನಾಯಕ ಆ್ಯಂಡ್ರ್ಯೂ ಬಾಲ್ಬಿರ್ನಿ 1 ರನ್ ಕಲೆ ಹಾಕುವುದರ ಮೂಲಕ ಐರ್ಲೆಂಡ್ ರನ್ ಖಾತೆಯನ್ನು ತೆರೆದಿದೆ. ಈ ಪಂದ್ಯದ ಲೈವ್ ಸ್ಕೋರ್ ಕೆಳಕಂಡಂತಿದೆ.

{cricket_681-2022_53597}

ಐರ್ಲೆಂಡ್ ಆಡುವ ಬಳಗ

ಐರ್ಲೆಂಡ್ ಆಡುವ ಬಳಗ

ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಆಂಡಿ ಮ್ಯಾಕ್‌ಬ್ರೈನ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್‌), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಸಿಮಿ ಸಿಂಗ್, ಕ್ರೇಗ್ ಯಂಗ್, ಜೋಶುವಾ ಲಿಟಲ್

ನ್ಯೂಜಿಲೆಂಡ್ ಆಡುವ ಬಳಗ

ನ್ಯೂಜಿಲೆಂಡ್ ಆಡುವ ಬಳಗ

ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ವಿಲ್ ಯಂಗ್, ಟಾಮ್ ಲ್ಯಾಥಮ್ (ನಾಯಕ ಮತ್ತು ವಿಕೆಟ್‍ ಕೀಪರ್‌), ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್, ಜಾಕೋಬ್ ಡಫ್ಫಿ

ಪ್ರಥಮ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ನ್ಯೂಜಿಲೆಂಡ್

ಪ್ರಥಮ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ನ್ಯೂಜಿಲೆಂಡ್

ಜುಲೈ 10ರಂದು ನಡೆದಿದ್ದ ಪ್ರಥಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ 301 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡ 120 ರನ್‌ಗಳಿಗೆ ತನ್ನ ಪ್ರಮುಖ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನ್ಯೂಜಿಲೆಂಡ್ ತಂಡದ ಮೈಕೆಲ್ ಬ್ರೇಸ್ ವೆಲ್ ಅಂತಿಮ ಹಂತದವರೆಗೂ ಹೋರಾಡಿ ತಂಡಕ್ಕೆ ಜಯವನ್ನು ತಂದಿಟ್ಟರು. ಅದರಲ್ಲಿಯೂ ಪಂದ್ಯದ ಅಂತಿಮ ಓವರ್‌ನಲ್ಲಿ 6 ಎಸೆತಕ್ಕೆ 20 ರನ್ ಬೇಕಿದ್ದ ಸಂದರ್ಭದಲ್ಲಿ ಮೈಕೆಲ್ ಬ್ರೇಸ್ ವೆಲ್ 4,4,6,4&6 ಬಾರಿಸಿ ಇನ್ನೂ 1 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 305 ರನ್ ಕಲೆಹಾಕಿ 1 ವಿಕೆಟ್‍ನ ರೋಚಕ ಜಯವನ್ನು ಸಾಧಿಸಿತು.

Story first published: Tuesday, July 12, 2022, 16:46 [IST]
Other articles published on Jul 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X