ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸ್ ಚಚ್ಚಿ ಕಾರಿನ ಗಾಜು ಪುಡಿ ಮಾಡಿದ್ದ ಕೆವಿನ್ ಓಬ್ರಿಯನ್ ಏಕದಿನಕ್ಕೆ ನಿವೃತ್ತಿ

Ireland all-rounder Kevin OBrien announces retirement from ODIs

ಡಬ್ಲಿನ್: ಐರ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಕೆವಿನ ಓಬ್ರಿಯನ್ ಶುಕ್ರವಾರ (ಜೂನ್ 18) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ (ಒಡಿಐ)ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿ ಟಿ20 ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ಕೆವಿನ್ ಹೇಳಿದ್ದಾರೆ.

ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!

'ಐರ್ಲೆಂಡ್ ಕ್ರಿಕೆಟ್‌ ತಂಡದ ಪರ ಸುಮಾರು 15 ವರ್ಷ ಆಡಿದ ಬಳಿಕ ಇದು ಏಕದಿನ ಕ್ರಿಕೆಟ್‌ನಿಂದ ದೂರ ಸರಿಯಲು ಮತ್ತು ಓಡಿಐಗೆ ನಿವೃತ್ತಿ ಘೋಷಿಸಲು ಇದು ಸಕಾಲ ಎಂದು ನನಗನ್ನಿಸುತ್ತಿದೆ. 153 ಬಾರಿ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಅತೀವ ಹೆಮ್ಮೆ ಅನ್ನಿಸುತ್ತಿದೆ,' ಎಂದು ಕೆವಿನ್ ಓಬ್ರಿಯನ್ ಅಧಿಕೃತ ಹೇಳಿಕೆ ನೀಡಿದ್ದಾರೆ.

'ಈ ನಿರ್ಧಾರ ತೆಗೆದುಕೊಳ್ಳಲು ಸುಲಭನಿಸಲಿಲ್ಲ. ಆದರೆ ನಾನು ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ ತಂಡದಲ್ಲಿ ಹೆಚ್ಚು ಕೊಡುಗೆ ನೀಡಬಲ್ಲೆ ಎಂದು ನನಗನ್ನಿಸುತ್ತಿಲ್ಲ. ಏಕದಿನ ಕ್ರಿಕೆಟ್ ಎಡೆಗಿನ ನನ್ನ ಹಸಿವು, ಪ್ರೀತಿ ಕಡಿಮೆಯಾಗಿದೆ,' ಎಂದು ನಿವೃತ್ತಿ ಘೋಷಣೆ ವೇಳೆ ಓಬ್ರಿಯನ್ ಹೇಳಿದ್ದಾರೆ.

ಭಾರತ ಟಾಸ್ ಸೋಲಬೇಕು ಎಂದ ಸಂಜಯ್ ಮಂಜ್ರೇಕರ್, ಕಾರಣ ಏನ್ ಗೊತ್ತಾ?!ಭಾರತ ಟಾಸ್ ಸೋಲಬೇಕು ಎಂದ ಸಂಜಯ್ ಮಂಜ್ರೇಕರ್, ಕಾರಣ ಏನ್ ಗೊತ್ತಾ?!

ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ 37ರ ಹರೆಯದ ಕೆವಿನ್ ಓಬ್ರಿಯನ್, ಐರ್ಲೆಂಡ್ ರಾಷ್ಟ್ರೀಯ ತಂಡದ ಪರ 3 ಟೆಸ್ಟ್‌ ಪಂದ್ಯಗಳಲ್ಲಿ 258 ರನ್, 152 ಏಕದಿನ ಪಂದ್ಯಗಳಲ್ಲಿ 3619 ರನ್, 114 ವಿಕೆಟ್, 95 ಟಿ20ಐ ಪಂದ್ಯಗಳಲ್ಲಿ 1672 ರನ್, 58 ವಿಕೆಟ್ ಸಾಧನೆ ಮಾಡಿದ್ದಾರೆ.

ಡಬ್ಲಿನ್‌ನಲ್ಲಿ 2020ರಲ್ಲಿ ನಡೆದಿದ್ದ ದೇಸಿ ಟ್ವೆಂಟಿ ಟ್ವೆಂಟಿ ಟೂರ್ನಿಯೊಂದರಲ್ಲಿ ಕೆವಿನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆ ವೇಳೆ ಲೀನ್‌ಸ್ಟರ್ ಲೈಟ್ನಿಂಗ್ ಪ್ರತಿನಿಧಿಸಿದ್ದ ಕೆವಿನ್ ಎದುರಾಳಿ ತಂಡ ನಾರ್ತ್‌ವೆಸ್ಟ್ ವಾರಿಯರ್ಸ್ ಬೌಲರ್‌ಗೆ ಬಿರುಸಿನ ಹೊಡೆತಗಳನ್ನು ನೀಡಿದ್ದರು. ಆ ಸಂದರ್ಭ ಕೆವಿನ್ ಅವರ ಒಂದು ಸಿಕ್ಸ್ ತನ್ನ ಕಾರಿನ ಗಾಜನ್ನೇ ಪುಡಿಗೊಳಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Story first published: Saturday, June 19, 2021, 9:39 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X