ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪುನರಾರಂಭದತ್ತ ಮೊದಲ ಹೆಜ್ಜೆಯಿಟ್ಟ ಐರ್ಲೆಂಡ್ ಕ್ರಿಕೆಟ್ ತಂಡ

Ireland cricket team takes first step towards resumption of training

ಡಬ್ಲಿನ್, ಜೂನ್ 8: ಕಟ್ಟುನಿಟ್ಟಾದ ಆರೋಗ್ಯ ಮಾರ್ಗಸೂಚಿಗಳೊಂದಿಗೆ ಐರ್ಲೆಂಡ್ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ಪುನರಾರಂಭಿಸಿದ್ದಾರೆ. ಇದರಿಂದ ಐರ್ಲೆಂಡ್‌ ತಂಡದ ಇಂಗ್ಲೆಂಡ್ ಪ್ರವಾಸ ಸಾಧ್ಯತೆಯೂ ಹೆಚ್ಚಾಗಿದೆ. ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಐರ್ಲೆಂಡ್, ಅಲ್ಲಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿದೆ.

ಐಪಿಎಲ್‌ನಲ್ಲಿ ವರ್ಣಬೇಧ: ಸ್ಯಮಿ ಆರೋಪಕ್ಕೆ ಬಾಯ್ತೆರೆದ ಪಾರ್ಥಿವ್, ಪಠಾಣ್ಐಪಿಎಲ್‌ನಲ್ಲಿ ವರ್ಣಬೇಧ: ಸ್ಯಮಿ ಆರೋಪಕ್ಕೆ ಬಾಯ್ತೆರೆದ ಪಾರ್ಥಿವ್, ಪಠಾಣ್

ಐರ್ಲೆಂಡ್ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ಸರಣಿ ಅಸಲಿಗೆ ಜುಲೈ 30ರಂದು ಆರಂಭಗೊಳ್ಳುವುದರಲ್ಲಿತ್ತು. ಆದರೆ ಕ್ರಿಕೆಟ್ ಐರ್ಲೆಂಡ್ ಮತ್ತು ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಬೋರ್ಡ್, 3 ಪಂದ್ಯಗಳ ಈ ಏಕದಿನ ಸರಣಿಯನ್ನು ಸೆಪ್ಟೆಂಬರ್‌ಗೆ ಮುಂದೂಡಲು ಚಿಂತನೆ ನಡೆಸುತ್ತಿದೆ.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

'ನಾವು ಇಂಗ್ಲೆಂಡ್-ಐರ್ಲೆಂಡ್ ಸರಣಿಯ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿದ್ದೇವೆ,' ಎಂದು ಕ್ರಿಕೆಟ್ ಐರ್ಲೆಂಡ್‌ನ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕ ರಿಚರ್ಡ್ ಹೋಲ್ಡ್ಸ್‌ವರ್ಥ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧವಾಗಲು ಹೆಚ್ಚು ಕಾಲಾವಕಾಶ ಅಗತ್ಯವಿದೆ. ಹೀಗಾಗಿ ಅಭ್ಯಾಸ ಪುನರಾರಂಭಿಸುವತ್ತ ನಿರ್ಧಾರ ತಾಳಿದ್ದೇವೆ ಎಂದು ರಿಚರ್ಡ್ ತಿಳಿಸಿದ್ದಾರೆ.

ಪಂತ್ & ನಾನು ಒಳ್ಳೆಯ ಫ್ರೆಂಡ್ಸ್, ಸ್ಪರ್ಧೆಯಾಗಿ ಆತನ ನೋಡಲಾರೆ: ಸ್ಯಾಮ್ಸನ್ಪಂತ್ & ನಾನು ಒಳ್ಳೆಯ ಫ್ರೆಂಡ್ಸ್, ಸ್ಪರ್ಧೆಯಾಗಿ ಆತನ ನೋಡಲಾರೆ: ಸ್ಯಾಮ್ಸನ್

'ಆ ಪಂದ್ಯಗಳಿಗೆ ತಯಾರಾಗಬೇಕಾದರೆ ಅನುಮೋದನೆ ಬರಬೇಕು, ಆರರಿಂದ ಎಂಟು ವಾರಗಳ ಅವಧಿಯು ಲಾಕ್‌ಡೌನ್ ಪ್ರಾರಂಭದಿಂದ ಹಿಡಿದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧವಾಗಲು ಅಗತ್ಯವೆಂದು ನಮಗನ್ನಿಸುತ್ತಿದೆ. ಮುಖ್ಯವಾಗಿ ನಮ್ಮ ಬೌಲರ್‌ಗಳಿಗೆ ಸಿದ್ಧವಾಗಲು ಹೆಚ್ಚು ಕಾಲಾವಕಾಶ ಬೇಕಿದೆ. ಇಂಗ್ಲೆಂಡ್ ತಂಡ ಈಗಾಗಲೇ ಅಭ್ಯಾಸ ಆರಂಭಿಸಿರುವುದರಿಂದ ನಮ್ಮ ತಂಡ ಅದರೆದುರು ಸೋಲಬಾರದು,' ಎಂದು ಹೋಲ್ಡ್ಸ್‌ವರ್ಥ್ ಹೇಳಿದ್ದಾರೆ.

Story first published: Monday, June 8, 2020, 23:52 [IST]
Other articles published on Jun 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X