ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಂಡಿ ಬಾಲ್ಬಿರ್ನಿ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್‌ಗೆ ಜಯ

Ireland vs South Africa: 2nd ODI, Ireland won by 43 runs

ಡಬ್ಲಿನ್: ಡಬ್ಲಿನ್‌ನಲ್ಲಿರುವ ದ ವಿಲ್ಲೇಜ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 13) ನಡೆದ ಐರ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ 43 ರನ್ ಜಯ ಗಳಿಸಿದೆ. ನಾಯಕ ಆ್ಯಂಡಿ ಬಾಲ್ಬಿರ್ನಿ ಶತಕದ ನೆರವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಐರ್ಲೆಂಡ್ 1-0ಯ ಜಯ ಗಳಿಸಿದೆ.

ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಐರ್ಲೆಂಡ್ ತಂಡ, ಪೌಲ್ ಸ್ಟಿರ್ಲಿಂಗ್ 27, ಆ್ಯಂಡಿ ಬಾಲ್ಬಿರ್ನಿ 102 (117), ಆಂಡಿ ಮೆಕ್‌ಬ್ರೈನ್ 30, ಹ್ಯಾರಿ ಟೆಕ್ಟರ್ 79, ಜಾರ್ಜ್ ಡೊಕ್ರೆಲ್ 45 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 290 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ಜನ್ನೆಮನ್ ಮಲನ್ 84, ತೆಂಬ ಬಾವುಮ 10, ರಾಸ್ಸಿ ವ್ಯಾನ್ ಡೆರ್ ಡುಸೆನ್ 49, ಕೈಲ್ ವೆರೆನ್ನೆ 13, ಡೇವಿಡ್ ಮಿಲ್ಲರ್ 24, ಕೇಶವ್ ಮಹಾರಾಜ್ 17, ಕಾಗಿಸೊ ರಬಾಡ 16 ರನ್‌ನೊಂದಿಗೆ 48.3 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 247 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‌ಗೆ ತಂಡ ಆಲ್ ಔಟ್!ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‌ಗೆ ತಂಡ ಆಲ್ ಔಟ್!

ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದ KL Rahul | Oneindia Kannada

ಐರ್ಲೆಂಡ್ ಇನ್ನಿಂಗ್ಸ್‌ನಲ್ಲಿ ಕಾಗಿಸೊ ರಬಾಡ 1, ಆಂಡಿಲೆ ಫೆಹ್ಲುಕ್ವಾಯೊ 2, ಕೇಶವ್ ಮಹಾರಾಜ್ ಮತ್ತು ತಬ್ರೈಝ್ ಶಂಸಿ 1 ವಿಕೆಟ್‌ ಪಡೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಕ್ರೇಗ್ ಯಂಗ್ 1, ಮಾರ್ಕ್ ಅಡೈರ್ 2, ಜೋಶುವಾ ಲಿಟ್ಲ್ 2, ಸಮಿ ಸಿಂಗ್ 1, ಜಾರ್ಜ್ ಡೊಕ್ರೆಲ್ 1, ಆಂಡಿ ಮೆಕ್‌ಬ್ರೈನ್ 2 ವಿಕೆಟ್‌ನಿಂದ ಗಮನ ಸೆಳೆದರು. ಅಂದ್ಹಾಗೆ, ಸರಣಿಯ ಆರಂಭಿಕ ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು.

Story first published: Wednesday, July 14, 2021, 14:45 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X