ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!

ireland won final match against england

ಐರಿಷ್ ಹುಡುಗರು ವಿಶ್ವಚಾಂಪಿಯನ್ನರಿಗೆ ಮತ್ತೊಮ್ಮೆ ದೊಡ್ಡ ಆಘಾತವನ್ನು ನೀಡಿದ್ದಾರೆ. ಈ ಬಾರಿ ಐರ್ಲೆಂಡ್ ತಂಡ ಬೆನ್ನಟ್ಟಿದ್ದು ಬರೊಬ್ಬರಿ 329 ರನ್‌ಗಳನ್ನು. ಈ ಮೂಲಕ ವಿಶ್ವ ಕ್ರಿಕೆಟ್ ಮತ್ತೊಂದು ಬೃಹತ್ ಚೇಸ್‌ಗೆ ಸಾಕ್ಷಿಯಾಯಿತು. 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಮಾಡಿದ ಸಾಧನೆಯನ್ನು ಮರುಕಳಿಸಿತು

ಇಂಗ್ಲೆಂಡ್ ನೀಡಿದ 329 ರನ್‌ಗಳ ಗುರಿಯನ್ನು ಚೇಸ್ ಮಾಡಿದ ಐರ್ಲೆಂಡ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಭರ್ಜರಿ 7 ವಿಕೆಟ್‌ಗಳ ಗೆಲುವನ್ನು ಆಚರಿಸಿತು. ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ ಹಾಗೂ ಆಂಡ್ರ್ಯೂ ಬಲ್ಬಿರ್ನೈ ದ್ವಿಶತಕದ ಜೊತೆಯಾಟ ಇಂಗ್ಲೆಂಡ್‌ ವಿರುದ್ಧದ ಈ ಗೆಲುವಿಗೆ ಪ್ರಮುಖ ಕಾರಣವಾಯಿತು.

ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕ್ಲಿಕ್

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕ್ಲಿಕ್

ಮೊದಲ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮನ್‌ಗಳು ಸಂಪೂರ್ಣವಾಗಿ ವಿಫಲರಾಗಿದ್ದರು. ಆದರೆ ಕೆಲ ಕ್ರಮಾಂಕದ ಆಟಗಾರರ ಸಮಯೋಚಿತ ಪ್ರದರ್ಶನ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದಾರೆ. ಪಾಲ್ ಸ್ಟಿರ್ಲಿಂಗ್(142ರನ್, 128ಎಸೆತ) ಹಾಗೂ ಆಂಡ್ರ್ಯೂ ಬಲ್ಬಿರ್ನೈ(113ರನ್ 112ಎಸೆತ) ಶತಕ ಸಿಡಿಸಿದರೆ ಬಳಿಕ ಬಂದ ಹೆರಿ ಟೆಕ್ಟರ್(29* ರನ್) ಹಾಗೂ ಕೆವಿನ್ ಒಬ್ರಿಯಾನ್(21ರನ್) ಗೆಲುವನ್ನು ತಂದಿತ್ತರು.

ಮಾರ್ಗನ್ ಹೋರಾಟ ವಿಫಲ

ಮಾರ್ಗನ್ ಹೋರಾಟ ವಿಫಲ

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ಆರಂಭದಲ್ಲಿ ಯಶಸ್ಸು ಗಳಿಸಿತು. 14ರನ್‌ಗೆ ಇಂಗ್ಲೆಂಡ್‌ನ ಎರಡು ಪ್ರಮುಖ ವಿಕೆಟ್ ಪಡೆಯುವಲ್ಲಿ ಐರ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಬೇಗನೆ ಕಟ್ಟಿಹಾಕುವ ಉತ್ಸಾಹದಲ್ಲಿ ಐರಿಷ್ ಪಡೆಯಿತ್ತು. ಆದರೆ ಇಯಾನ್ ಮಾರ್ಗನ್ ಎಲ್ಲಾ ಪ್ರಯತ್ನವನ್ನು ಬುಡಮೇಲು ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಮಾರ್ಗನ್ ಕೇವಲ 84 ಎಸೆತಗಳಲ್ಲಿ 106 ರನ್ ಸಿಡಿಸಿ ಮಿಂಚುಹರಿಸಿದರು.

ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡಿದ ಐರ್ಲೆಂಡ್

ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡಿದ ಐರ್ಲೆಂಡ್

ಮಾರ್ಗನ್ ಶತಕ ಟಾಮ್ ಬಾಂಟನ್ ಹಾಗೂ ವಿಲ್ಲೇ ಅರ್ಧ ಶತಕದ ಸಹಾಯದಿಂದ ಇಂಗ್ಲೆಂಡ್ 328 ರನ್‌ಗಳಿಸಿ ಬೃಹತ್ ಗುರಿಯನ್ನು ನೀಡಿತ್ತು. ಮೊದಲೆರಡು ಪಂದ್ಯಗಳಲ್ಲಿ ಐರ್ಲೆಂಡ್ ಆಟಗಾರರು ಪರದಾಡಿದ್ದನ್ನು ನೋಡಿ ಈ ಬೃಹತ್ ಮೊತ್ತವನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಐರ್ಲೆಂಡ್ ದೊಡ್ಡ ಬೇಟೆಯಾಡಿದೆ.

ಈ ಹಿಂದೆಯೂ ಇಂಗ್ಲೆಂಡ್‌ಗೆ ಆಘಾತ

ಈ ಹಿಂದೆಯೂ ಇಂಗ್ಲೆಂಡ್‌ಗೆ ಆಘಾತ

ಐರ್ಲೆಂಡ್ ಇಂಗ್ಲೆಂಡ್ ತಂಡವನ್ನು ಬೇಟೆಯಾಡಿದ್ದು ಇದು ಮೊದಲೇನಲ್ಲ. ಈ ಹಿಂದೆ 2011ರ ವಿಶ್ವಕಪ್ ಪಂದ್ಯದಲ್ಲೂ ಇಷ್ಟೇ ಗುರಿಯನ್ನು ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲೂ 329 ರನ್‌ಗಳನ್ನು ಗಳಿಸಿ ಯಶಸ್ವಿಯಾಗಿ ಬೆನ್ನಟ್ಟಿತ್ತು. ಮಾತ್ರವಲ್ಲ ಈ ಗೆಲುವು ಇಂಗ್ಲೆಂಡ್ ವಿರುದ್ಧದ ಭಾರತದ ನಾಟ್‌ವೆಸ್ಟ್ ಗೆಲುವನ್ನು ಕೂಡ ನೆನಪಿಸಿದೆ.

Story first published: Wednesday, August 5, 2020, 10:13 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X