ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಹೆಸರಲ್ಲಿರುವ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯವಿರುವುದು ಆತನೊಬ್ಬನಿಗೆ: ಪಠಾಣ್

Irfan Pathan Believes Virat Kohli Can Break Sachin Tendulkars Record Of 100 International Centuries

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ವ್ಯಕ್ತಿ. ತಮ್ಮ ಅಭಿಪ್ರಾಯಗಳನ್ನು ವಿಶ್ಲೇಷಣೆಗಳನ್ನು ಅಭಿಮಾನಿಗಳ ಮುಂದೆ ವ್ಯಕ್ತಪಡಿಸುತ್ತಾ ಸದಾ ಚಾಲ್ತಿಯಲ್ಲಿರುತ್ತಾರೆ. ಈಗ ಸಚಿನ್ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿಯಬಲ್ಲ ಕ್ರಿಕೆಟಿಗನ ಹೆಸರನ್ನು ಹೇಳಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳು ಲೆಕ್ಕವಿಲ್ಲದಷ್ಟು. ಅದರಲ್ಲಿ ಪ್ರಮುಖವಾಗಿರು ದಾಖಲೆಗಳಲ್ಲಿ ಒಂದು ಶತಕಗಳ ಶತಕ. ಹೌದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿಗೆ ಒಳಗಿದ್ದಾರೆ. ಈ ದಾಖಲೆಯನ್ನು ಸದ್ಯಕ್ಕೆ ಮುರಿಯುವ ಲಕ್ಷಣಗಳು ಯಾವ ಆಟಗಾರನಲ್ಲೂ ಇಲ್ಲ. ಆದರೆ ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಅಧಿಪತ್ಯವನ್ನು ಸ್ಥಾಪಿಸಿರುವ ಕ್ರಿಕೆಟಿಗನಿಗೆ ಮಾತ್ರ ಆ ದಾಖಲೆ ಮುರಿಯುವ ಅವಕಾಶವಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

 ಐಪಿಎಲ್‌ಗೆ ಮತ್ತೊಂದು ಹೊಡೆತ: ಪ್ರಾಯೋಜಕತ್ವಕ್ಕೆ ಕಂಪನಿಯೊಂದು ನಕಾರ! ಐಪಿಎಲ್‌ಗೆ ಮತ್ತೊಂದು ಹೊಡೆತ: ಪ್ರಾಯೋಜಕತ್ವಕ್ಕೆ ಕಂಪನಿಯೊಂದು ನಕಾರ!

ಅನುಮಾನವೇ ಇಲ್ಲ ಅದು ವಿರಾಟ್

ಅನುಮಾನವೇ ಇಲ್ಲ ಅದು ವಿರಾಟ್

ಹೌದು, ಸಚಿನ್ ಹೆಸರಿನಲ್ಲಿರುವ ಅಸಾಧಾರಣ ದಾಖಲೆಯನ್ನು ಮುರಿಯಲು ಸಾಧ್ಯವಿರುವ ಕ್ರಿಕೆಟಿಗ ಎಂದು ಇರ್ಫಾನ್ ಪಠಾಣ್ ಹೆಸರಿಸಿದ್ದು ವಿರಾಟ್ ಕೊಹ್ಲಿಯನ್ನೇ.. ವಿರಾಟ್ ಕೊಹ್ಲಿ ಈ ದಾಖಲೆಯ ಬಗ್ಗೆ ಮಾತನಾಡದೇ ಇರಬಹುದು. ಆದರೆ 100 ಶತಕಗಳ ಸಾಧನೆಯನ್ನು ಮಾಡಲು ಸಾಧ್ಯವಿರುವ ಇನ್ನೊಬ್ಬ ಆಟಗಾರ ಅದು ವಿರಾಟ್ ಕೊಹ್ಲಿ ಮಾತ್ರ. ಕಡಿಮೆ ಅವಧಿಯಲ್ಲಿ ಆತ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಹಾಗಾಗಿ ಆತನಿಖದ ಮಾತ್ರವೇ ಈ ದಾಖಲೆಯನ್ನು ಮುರಿಯಲು ಸಾಧ್ಯ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ವಿರಾಟ್ ಸಾಮರ್ಥ್ಯ ಹಾಗೂ ಫಿಟ್‌ಸೆನ್‌ಗೆ ಇದು ಸಾಧ್ಯ

ವಿರಾಟ್ ಸಾಮರ್ಥ್ಯ ಹಾಗೂ ಫಿಟ್‌ಸೆನ್‌ಗೆ ಇದು ಸಾಧ್ಯ

ತೆಂಡೂಲ್ಕರ್ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಯಲ್ಲಿನ ಸಾಮರ್ಥ್ಯ ಹಾಗೂ ಫಿಟ್‌ಸೆನ್ ಪ್ರಮುಖ ಕಾರಣವಾಗಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ದುದೀರ್ಘ ಕಾಲ ಆಟದಲ್ಲಿ ಉಳಿಯುವ ಸಾಮರ್ಥ್ಯ ಅವರಿಗಿದ್ದು ಸಚಿನ್ ದಾಖಲೆಯನ್ನು ಅವರು ಮುರಿಯಲಿದ್ದಾರೆ ಎಂದು ಇರ್ಫಾನ್ ಪಠಾಣ್ ಹೇಳಿಕೆಯನ್ನು ನೀಡಿದ್ದಾರೆ.

ಭಾರತೀಯನೇ ಮುರಿಯಬೇಕು

ಭಾರತೀಯನೇ ಮುರಿಯಬೇಕು

"ಸಚಿನ್ ತೆಂಡೂಲ್ಕರ್ ಅವರ ವೃತ್ತಿ ಜೀವನದ ಪಯಣದಲ್ಲಿ ನಾನು ಕೂಡ ಭಾಗವಾಗಿದ್ದೆ. ಅವರು ನೂರನೇ ಶತಕವನ್ನು ಭಾರಿಸಿದಾಗ ನಾನೂ ಅವರ ಪಯಣದಲ್ಲಿದ್ದೆ. ಹಾಗಾಗಿ ಯಾರಾದರೂ ಸಚಿನ್ ತೆಂಡೂಲ್ಕರ್ ಸಾಧಿಸಿದ ಈ ಸಾಧನೆಯನ್ನು ಮುರಿಯುವವರಿದ್ದರೆ ಅದು ಭಾರತೀಯರೇ ಆಗಿರಬೇಕು ಎಂಬುದು ನನ್ನ ಆಶಯ" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಶತಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನ

ಶತಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನ

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 70 ಶತಕಗಳು ವಿರಾಟ್ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 71 ಶತಕ ಗಳಿಸಿದ್ದಾರೆ. ಸಚಿನ್ ದಾಖಲೆಯನ್ನು ಮುರಿಯಲಿ ವಿರಾಟ್ ಕೊಹ್ಲಿಗೆ ಇನ್ನು 30 ಶತಕಗಳ ಅಗತ್ಯವಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಬಾರಿಸಿದ 49 ಶತಕಗಳ ಸನಿಹದಲ್ಲಿ ವಿರಾಟ್ ಕೊಹ್ಲಿ ಇದ್ದು ಈಗಾಗಲೇ 43 ಶತಕಗಳನ್ನು ಹೊಂದಿದ್ದಾರೆ.

Story first published: Monday, August 24, 2020, 21:56 [IST]
Other articles published on Aug 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X