ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯಿಂದ ನಿಮ್ಮ ಕ್ರಿಕೆಟ್ ಜೀವನ ಅಂತ್ಯವಾಯಿತು ಎಂದ ಅಭಿಮಾನಿಗೆ ಇರ್ಫಾನ್ ಕೊಟ್ಟ ಉತ್ತರವೇನು ಗೊತ್ತಾ?

Irfan Pathan Give Gem Reply To A Fan Who Blame MS Dhoni For Pathan Short White-Ball Career

ಇರ್ಫಾಣ್ ಪಠಾಣ್ 2007ರಲ್ಲಿ ಭಾರತ ಮೊದಲನೇ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ ಆಟಗಾರ. ಫೈನಲ್ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ ಇರ್ಫಾನ್ ಪಠಾಣ್ ಪಾಕಿಸ್ತಾನ ಮಧ್ಯಮ ಕ್ರಮಾಂಕದ ಪ್ರಮುಖ ಮೂವರು ಬ್ಯಾಟರ್ ಗಳನ್ನು ಔಟ್ ಮಾಡಿ ಪಂದ್ಯದ ಗತಿಯನ್ನು ಬದಲಿಸಿದರು. ತಮ್ಮ ಪ್ರದರ್ಶನಕ್ಕಾಗಿ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ಇರ್ಫಾನ್ ಪಠಾಣ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾಗ, ಎಡಗೈ ವೇಗಿಯ ಅತ್ಯುತ್ತಮ ಆಟಕ್ಕೆ ಎಲ್ಲರೂ ಮನಸೋತಿದ್ದರು. ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕುತ್ತಿದ್ದ ಇರ್ಫಾನ್ ಪಠಾಣ್ ಬಹುಬೇಗನೆ ಭಾರತದ ಪ್ರಮುಖ ಬೌಲರ್ ಎನಿಸಿಕೊಂಡರು.

ಈತ ವಿಶ್ವದ ದಿಗ್ಗಜ ಆಟಗಾರರನ್ನೂ ಮೀರಿಸಲಿದ್ದಾನೆ ಎಂದ ಡ್ಯಾನಿಶ್ ಕನೇರಿಯಾಈತ ವಿಶ್ವದ ದಿಗ್ಗಜ ಆಟಗಾರರನ್ನೂ ಮೀರಿಸಲಿದ್ದಾನೆ ಎಂದ ಡ್ಯಾನಿಶ್ ಕನೇರಿಯಾ

ಅವರು 2003 ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಶೀಘ್ರದಲ್ಲೇ ಭಾರತೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಆದರು. ನಂತರ, ಇರ್ಫಾನ್ ಪಠಾಣ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿದರು. ಟೆಸ್ಟ್ ಪಂದ್ಯಗಳಲ್ಲಿ ಕೂಡ ಎಡಗೈ ವೇಗಿ ಇರ್ಫಾನ್ ಪಠಾಣ್ ಅತ್ಯುತ್ತಮ ಪ್ರದರ್ಶನ ನೀಡಿದರು. ಟೀಂ ಇಂಡಿಯಾದಲ್ಲಿ ಪ್ರಮುಖ ಸ್ಥಾನ ವಹಿಸುತ್ತಿದ್ದ ಇರ್ಫಾನ್ ಪಠಾಣ್ ಕಡಿಮೆ ಸಮಯದಲ್ಲೇ ನೇಪಥ್ಯಕ್ಕೆ ಸರಿದರು.

ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವರಿಂದ ಆಲ್ ರೌಂಡರ್ ಎಂದು ಪರಿಗಣಿಸಲ್ಪಟ್ಟ ಇರ್ಪಾನ್ ಪಠಾಣ್, ಭಾರತದ ಪರವಾಗಿ 29 ಟೆಸ್ಟ್‌ಗಳು, 120 ಏಕದಿನ ಪಂದ್ಯಗಳು ಮತ್ತು 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಅನುಭವಿ ಇರ್ಫಾನ್ ಪಠಾಣ್ ಅವರನ್ನು 2012 ರ ನಂತರ ಭಾರತ ತಂಡಕ್ಕೆ ಪರಿಗಣಿಸಲಾಗಿಲ್ಲ.

ಇರ್ಫಾನ್ ಪಠಾಣ್ ಪ್ರಸ್ತುತ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಿಲ್ವಾರಾ ಕಿಂಗ್ಸ್ ಪರ ಆಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಇರ್ಫಾನ್ ಪಠಾಣ್ ಆಯ್ಕೆಯಾಗದಿರುವ ಬಗ್ಗೆ ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Irfan Pathan Give Gem Reply To A Fan Who Blame MS Dhoni For Pathan Short White-Ball Career

ಯಾರನ್ನೂ ದೂಷಿಸಬೇಡಿ ಎಂದ ಇರ್ಫಾನ್ ಪಠಾಣ್

"ಈ ಲೀಗ್‌ಗಳಲ್ಲಿ ನಾನು ಇರ್ಫಾನ್ ಪಠಾಣ್ ಅವರನ್ನು ನೋಡಿದಾಗಲೆಲ್ಲಾ, ನಾನು ಎಂಎಸ್ ಧೋನಿ ಮತ್ತು ಅವನ ನಿರ್ವಹಣೆಯನ್ನು ಇನ್ನಷ್ಟು ಶಪಿಸುತ್ತೇನೆ. ನನಗೆ ನಂಬಲು ಸಾಧ್ಯವಾಗುತ್ತಿಲ್ಲ, ಇರ್ಫಾನ್ ಪಠಾಣ್ ಕೇವಲ 29 ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಕೊನೆಯ ಏಕದಿನ ಮತ್ತು ಟಿ20 ಆಟವನ್ನು ಆಡಿದರು. ಪರಿಪೂರ್ಣ ಸಂಖ್ಯೆ 7, ಯಾವುದೇ ತಂಡ ಅದಕ್ಕಾಗಿ ಸಾಯುತ್ತದೆ. ಆದರೆ ಭಾರತ ರವೀಂದ್ರ ಜಡೇಜಾ, ಸ್ಟುವರ್ಟ್‌ ಬಿನ್ನಿಯಂತವರು ಸ್ಥಾನ ಪಡೆದರು." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಇರ್ಫಾನ್ ಪಠಾಣ್, "ಯಾರನ್ನೂ ದೂಷಿಸಬೇಡಿ, ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಹೇಳಿದರು.

29 ಟೆಸ್ಟ್‌ಗಳಲ್ಲಿ ಪಠಾಣ್ 100 ವಿಕೆಟ್ ಹಾಗೂ 1105 ರನ್ ಗಳಿಸಿದ್ದಾರೆ. 120 ಏಕದಿನ ಪಂದ್ಯಗಳಲ್ಲಿ, ಅವರು 1544 ರನ್ ಬಾರಿಸಿದರು ಮತ್ತು 173 ವಿಕೆಟ್‌ ಪಡೆದರು. 24 ಟಿ20 ಪಂದ್ಯಗಳಲ್ಲಿ 28 ವಿಕೆಟ್ ಪಡೆದು 172 ರನ್ ಗಳಿಸಿದ್ದಾರೆ. ಪಠಾಣ್ ಅವರು ಭಾರತ ಪಂದ್ಯಗಳ ಕಾಮೆಂಟರಿ ಪ್ಯಾನೆಲ್‌ನಲ್ಲಿ ಖಾಯಂ ಆಗಿದ್ದಾರೆ.

Story first published: Tuesday, September 27, 2022, 17:14 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X