ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಆರಂಭಿಕ ಜೋಡಿಯ ಯಶಸ್ಸಿಗೆ ಕಾರಣ ಹೇಳಿದ ಇರ್ಫಾನ್ ಪಠಾಣ್

Irfan Pathan On Indian Opening Pairs Success

ಟೀಮ್ ಇಂಡಿಯಾದ ಬ್ಯಾಟಿಂಗ್ ಯಶಸ್ಸಿಗೆ ಬಲಿಷ್ಠ ಆರಂಭಿಕ ಆಟಗಾರರ ಕೊಡುಗೆ ಪ್ರಮುಖವಾದದ್ದು. 2013ನೇ ಇಸವಿಯಿಂದ ಟೀಮ್ ಇಂಡಿಯಾದ ಆರಂಭಿಕ ಜೋಡಿಯಾಗಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ದೊಡ್ಡ ಯಶಸ್ಸನ್ನು ಕಂಡಿದ್ದಾರೆ. ಎದುರಾಳಿಗಳಿಗೆ ಟೀಮ್ ಇಂಡಿಯಾದ ಈ ಸ್ಪೋಟಕ ಜೋಡಿಯನ್ನು ಬೇರ್ಪಡಿಸುವುದು ಎದುರಾಳಿಗಳಿಗೆ ದೊಡ್ಡ ಸವಾಲೇ ಆಗಿದೆ.

ಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿ

ಭಾರತ ತಂಡದ ಈ ಆರಂಭಿಕ ಜೋಡಿಯ ಯಶಸ್ಸಿಗೆ ಕಾರಣವೇನು ಎಂಬ ಬಗ್ಗೆ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮಾತನಾಡಿದ್ದಾರೆ. ಇಬ್ಬರೂ ಆಟಗಾರರು ತಮ್ಮ ಜೊತೆಗಾರನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಏನು ಎಂಬುದನ್ನು ತಿಳಿದುಕೊಂಡಿದ್ದಾರೆ. ಇದು ಅತ್ಯುತ್ತಮ ಸಂಗತಿ ಎಂದಿದ್ದಾರೆ.

ಆರಂಭದಿಂದಲೇ ಶಿಖರ್ ಅಬ್ಬರದಾಟ

ಆರಂಭದಿಂದಲೇ ಶಿಖರ್ ಅಬ್ಬರದಾಟ

ಶಿಖರ್ ಧವನ್ ಆರಂಭದಿಂದಲೇ ಸರಾಗವಾಗಿ ಬ್ಯಾಟ್ ಬೀಸಬಲ್ಲ ಆಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ರೋಹಿತ್ ಶರ್ಮಾ ಅವರಿಗೆ ಆರಂಭದಲ್ಲಿ ಸಮಯಾವಕಾಶವನ್ನು ನೀಡುತ್ತಾರೆ. ರೋಹಿತ್ ಶರ್ಮಾ ಬೇಗನೆ ಗೇರ್ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಆರಂಭದಲ್ಲಿ ಸ್ವಲ್ಪ ಸಮಯಾವಕಾಶವನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಶಿಖರ್ ಉತ್ತಮವಾಗಿ ಸಹಕಾರವನ್ನು ನಿಡುತ್ತಾರೆ ಎಂದು ಪಠಾಣ್ ಹೇಳಿದರು.

ಜೊತೆಗಾರನ ಬಲ ದೌರ್ಬಲ್ಯದ ಅರಿವು ಮುಖ್ಯ

ಜೊತೆಗಾರನ ಬಲ ದೌರ್ಬಲ್ಯದ ಅರಿವು ಮುಖ್ಯ

ಕ್ರಿಕೆಟ್‌ನಲ್ಲಿ ನಿಮ್ಮ ಜೊತೆಗಾರನ ಬಲ ಮತ್ತು ದೌರ್ಬಲ್ಯವನ್ನು ಅರಿತು ಕೊಳ್ಳುವುದು ಬಹಳ ಮುಖ್ಯ. ರೋಹಿತ್ ಶರ್ಮಾಗೆ ಸಮಯಾವಕಾಶಬೇಕು ಎಂಬುದನ್ನು ಶಿಖರ್ ಧವನ್ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಆಗ ಕೆಲ ಓವರ್‌ಗಳ ಕಾಲ ತಾವೇ ಬ್ಯಾಟ್ ಬೀಸಲು ಆರಂಭಿಸುತ್ತಾರೆ. ಹೀಗೆ ರೋಹಿತ್‌ಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಪಠಾಣ್ ಹೇಳಿದರು.

ಹೊಂದಾಣಿಕೆಯ ಆಟ ಉಪಯುಕ್ತ

ಹೊಂದಾಣಿಕೆಯ ಆಟ ಉಪಯುಕ್ತ

ಇನ್ನು ಸ್ಪಿನ್ನರ್‌ಗಳು ದಾಳಿಗೆ ಬರುವ ವೇಳೆಗೆ ಶರ್ಮಾ ಕ್ರೀಸ್‌ನಲ್ಲಿ ನೆಲೆಯೂರಿರುತ್ತಾರೆ. ಬಳಿಕ ತಾವು ಚಾರ್ಜ್ ತೆಗೆದುಕೊಳ್ಳಲು ಆರಂಭಿಸುತ್ತಾರೆ. ಆ ಮೂಲಕ ಶಿಖರ್ ಧವನ್ ಒತ್ತಡವನ್ನು ಕಡಿಮೆ ಮಾಡುತ್ತಾರೆ. ಈ ಹೊಂದಾಣಿಕೆಯ ಆಟ ಟೀಮ್ ಇಂಡಿಯಾಗೆ ಬಹಳ ಉಪಯುಕ್ತಾಗಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ದಿಗ್ಗಜ ಜೋಡಿಯ ದಾಖಲೆ ಬೆನ್ನತ್ತಿದ ಶಿಖರ್-ರೋಹಿತ್

ದಿಗ್ಗಜ ಜೋಡಿಯ ದಾಖಲೆ ಬೆನ್ನತ್ತಿದ ಶಿಖರ್-ರೋಹಿತ್

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ 107 ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು 4802 ರನ್‌ಗಳನ್ನು 45.30ರ ಸರಾಸರಿಯಲ್ಲಿ ಪೇರಿಸಿದ್ದಾರೆ. ಈ ಮೂಲಕ ಆರಂಭಿಕ ಜೋಡಿಯ ದಾಖಲೆ ಹೊಂದಿರುವ ದಿಗ್ಗಜ ಜೋಡಿಯಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ದಾಖಲೆಯನ್ನು ಬೆನ್ನಟ್ಟಿದ್ದಾರೆ.

Story first published: Tuesday, June 30, 2020, 10:16 [IST]
Other articles published on Jun 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X