ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ವರ್ಣಭೇದ: ಸಾಮಿ ಆರೋಪಕ್ಕೆ ಬಾಯ್ತೆರೆದ ಪಾರ್ಥಿವ್, ಪಠಾಣ್

Irfan Pathan, Parthiv Patel open up on Darren Sammy’s racism allegations in IPL

ನವದೆಹಲಿ, ಜೂನ್ 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಆಡುತ್ತಿದ್ದಾಗ ತಾನು ಮತ್ತು ಶ್ರೀಲಂಕಾ ಆಲ್ ರೌಂಡರ್ ತಿಸರ ಪೆರೆರ ವರ್ಣಭೇದ ನೀತಿ ಎದುರಿಸಬೇಕಾಗಿ ಬಂದಿತ್ತು ಎಂದು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಡ್ಯಾರೆನ್ ಸಾಮಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

ಎಸ್‌ಆರ್‌ಎಚ್‌ನಲ್ಲಿದ್ದಾಗ ನನ್ನನ್ನು ಮತ್ತು ಪೆರೆರ ಅವರನ್ನು 'ಕಾಲು' ಅಂತ ಕರೆಯುತ್ತಿದ್ದರು. ಅದರ ಅರ್ಥವೇನೆಂದು ಗೊತ್ತಾದಾಗ ನನಗೆ ತುಂಬಾ ಕೋಪ ಬಂದಿತ್ತು ಎಂದು ಕೆರಿಬಿಯನ್ ಆಟಗಾರ ಸಮಿ ಮಾಡಿರುವ ಆರೋಪವನ್ನು ಸಾಮಿಯ ಜೊತೆ ಎಸ್‌ಆರ್‌ಎಚ್ ತಂಡದಲ್ಲಿದ್ದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ ಮತ್ತು ವೇಣುಗೋಪಾಲ್ ರಾವ್ ನಿರಾಕರಿಸಿದ್ದಾರೆ.

ನೆಚ್ಚಿನ ನಾಯಕನನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ಆದರೆ ಅದು ವಿರಾಟ್ ಕೊಹ್ಲಿ ಅಲ್ಲ!ನೆಚ್ಚಿನ ನಾಯಕನನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ಆದರೆ ಅದು ವಿರಾಟ್ ಕೊಹ್ಲಿ ಅಲ್ಲ!

'ಇಂಥ (ಅವಹೇಳನಕಾರಿ) ಪದಗಳನ್ನು ಬಳಸಿ ಸಾಮಿಯನ್ನು ಕರೆಯುತ್ತಿದ್ದುದನ್ನು ನಾನು ಕೇಳಿಲ್ಲ,' ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಈಗ ಆಂಧ್ರ ಕ್ರಿಕೆಟ್ ನಿರ್ದೇಶಕರಾಗಿರುವ ವೇಣುಗೋಪಾಲ್ ಕೂಡ, 'ನನಗಿದರ ಬಗ್ಗೆ ಗೋತ್ತೇ ಇಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ.

ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್

ಎಸ್‌ಆರ್‌ಎಚ್‌ನಲ್ಲಿ ಇಂಥ ಸಂಗತಿಗಳ ಬಗ್ಗೆ ಚರ್ಚೆ ನಡೆದಿರುವುದರ ಬಗ್ಗೆ ನನಗೂ ಗೊತ್ತಿಲ್ಲ ಎಂದು ಇರ್ಫಾನ್ ಪಠಾಣ್ ಕೂಡ ಹೇಳಿದ್ದಾರೆ. ಆದರೆ ದೇಸಿ ಕ್ರಿಕೆಟ್‌ನಲ್ಲಿ ಕೆಲ ಆಟಗಾರರ ಮೇಲೆ ಜನಾಂಗೀಯ ನಿಂದನೆ ಮಾಡುತ್ತಿದ್ದುದನ್ನು ಕೇಳಿರುವುದಾಗಿ ಪಠಾಣ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ವರ್ಣಬೇಧ ನೀತಿಯ ಬಗ್ಗೆ ಆರೋಪಿಸಿರುವ ಸಾಮಿ, ಎಸ್‌ಆರ್‌ಎಚ್‌ ಪರ 2013-14ರಲ್ಲಿ 26 ಪಂದ್ಯಗಳನ್ನಾಡಿದ್ದರು.

Story first published: Tuesday, June 9, 2020, 10:42 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X