ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ

Irish skipper Andrew Balbirnie said participating in the IPL is a dream for many Ireland cricketers

ಭಾರತ ಹಾಗೂ ಐರ್ಲೆಂಡ್ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗುತ್ತಿದೆ. ಮುಂದಿನ ಭಾನುವಾರದಿಂದ ಎರಡು ಪಂದ್ಯಗಳ ಈ ಚುಟುಕು ಸರಣಿ ನಡೆಯಲಿದ್ದು ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಈ ಸರಣಿಗೂ ಮುನ್ನ ಐರ್ಲೆಂಡ್ ತಂಡದ ನಾಯಕ ಆಂಡ್ರೋ ಬಲ್ಬರ್ನೈ ಐಪಿಎಲ್ ವಿಚಾರವಾಗಿ ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಫ್ರಾಂಚೈಸಿ ಲೀಗ್‌ಗಳು ಖ್ಯಾತವಾಗುತ್ತಿವೆ. ಅನೇಕ ಭಿನ್ನ ವಿಭಿನ್ನ ಕ್ರಿಕೆಟ್ ಲೀಗ್‌ಗಳು ಕೂಡ ಬರುತ್ತಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯನ್ನು ನೀಡುತ್ತಿದೆ. ಆದರೆ ಯಾವುದೇ ಕ್ರಿಕೆಟ್ ಲೀಗ್ ಬಂದರಲೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ಜನಪ್ರಿಯತೆ, ಅದರ ಮೌಲ್ಯಕ್ಕೆ ಹತ್ತಿರ ಸುಳಿಯಲೂ ಸಾಧ್ಯವಾಗುತ್ತಿಲ್ಲ. ಇತ್ತೀಚೆಗಷ್ಟೇ ನಡೆದ ಮಾಧ್ಯಮ ಹಕ್ಕು ಹರಾಜು ಪ್ರಕ್ರಿಯೆ ಇದನ್ನು ಬತ್ತೊಮ್ಮೆ ಸಾಬೀತುಪಡಿಸಿದೆ. ಐರ್ಲೆಂಡ್ ತಂಡದ ನಾಯಕ ಆಂಡ್ರೋ ಬಲ್ಬರ್ನೈ ಅವರು ಆಡಿದ ಮಾತುಗಳು ಕೂಡ ಈ ಐಪಿಎಲ್‌ನ ಈ ಜನಪ್ರಿಯತೆಗೆ ಮತ್ತೊಂದು ಸಾಕ್ಷಿ ನೀಡುವಂತಿದೆ.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಐರಿಷ್ ಆಟಗಾರರ ಕನಸು ಹಂಚಿಕೊಂಡ ನಾಯಕ ಬಲ್ಬರ್ನೈ

ಐರಿಷ್ ಆಟಗಾರರ ಕನಸು ಹಂಚಿಕೊಂಡ ನಾಯಕ ಬಲ್ಬರ್ನೈ

ಐರ್ಲೆಂಡ್ ಕ್ರಿಕೆಟ್ ತಂಡದ ನಾಯಕ ಆಂಡ್ರೋ ಬಲ್ಬರ್ನೈ ತಮ್ಮ ತಂಡದಲ್ಲಿ ಅನೇಕ ಅತ್ಯುತ್ತಮ ಟಿ20 ಆಟಗಾರರಿದ್ದರೂ ಅವರೆಲ್ಲರಿಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶ ದೊರೆತಿಲ್ಲ. ತಂಡದ ಬಹುತೇಕ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವುದು ದೊಡ್ಡ ಕನಸಾಗಿದೆ ಎಂದಿದ್ದಾರೆ. ಐಪಿಎಲ್ ಎಂಬುದು ಐರ್ಲೆಂಡ್ ಆಟಗಾರರಿಗೆ ಇನ್ನು ಕೂಡ ಕನಸಾಗಿಯೇ ಉಳಿದುಕೊಂಡಿದೆ ಎಂದಿದ್ದಾರೆ ಆಂಡ್ರೋ ಬಲ್ಬರ್ನೈ.

ಟಿ20 ಕ್ರಿಕೆಟ್‌ನ ಕಿರೀಟ ಐಪಿಎಲ್

ಟಿ20 ಕ್ರಿಕೆಟ್‌ನ ಕಿರೀಟ ಐಪಿಎಲ್

"ನಮ್ಮಲ್ಲಿ ಸಾಕಷ್ಟು ಅತ್ಯುತ್ತಮ ಟಿ20 ಆಟಗಾರರಿದ್ದಾರೆ. ಐಪಿಎಲ್‌ನಲ್ಲಿ ಅವಕಾಶ ಪಡೆಯಲು ಎಷ್ಟು ಸ್ಪರ್ಧೆಗಳಿದೆ ಎಂಬುದರ ಬಗ್ಗೆ ನಮಗೆ ಅರಿವಿದೆ. ಹಾಗಾಗಿಯೇ ನಮ್ಮಲ್ಲಿರುವ ಸಾಕಷ್ಟು ಆಟಗಾರರಿಗೆ ಈ ಟೂರ್ನಿಯಲ್ಲಿ ಆಡುವುದು ದೊಡ್ಡ ಕನಸಾಗಿದೆ. ಐಪಿಎಲ್ ಟಿ20 ಕ್ರಿಕೆಟ್‌ನ ಕಿರೀಟವಾಗಿದೆ. ಇಂಥಾ ಲೀಗ್‌ನಲ್ಲಿ ಆಡುವ ಅವಕಾಶ ದೊರೆತಾಗ ಆಟಗಾರರ ಬೆಳವಣಿಗೆ ಮತ್ತಷ್ಟು ಹೆಚ್ಚಾಗುತ್ತದೆ. ನಮ್ಮಲ್ಲಿ ಸಾಕಷ್ಟು ಆಟಗಾರರು ಬೇರೆ ಬೇರೆ ಲೀಗ್‌ಗಳಲ್ಲಿ ಆಡುತ್ತಿದ್ದಾರೆ ಆದರೆ ಐಪಿಎಲ್‌ನಲ್ಲಿ ಆಡುವ ಅವಕಾಶ ಯಾರಿಗೂ ದೊರೆತಿಲ್ಲ" ಎಂದಿದ್ದಾರೆ ಆಂಡ್ರೋ ಬಲ್ಬರ್ನೈ.

ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ

ಭಾರತದ ವಿರುದ್ಧ ಆಡುವುದು ಉತ್ತಮ ಅವಕಾಶ

ಭಾರತದ ವಿರುದ್ಧ ಆಡುವುದು ಉತ್ತಮ ಅವಕಾಶ

ಇನ್ನು ಮುಂದುವರಿದು ಮಾತನಾಡಿದ ಐರಿಷ್ ನಾಯಕ ಆಂಡ್ರೋ ಬಲ್ಬರ್ನೈ ಭಾರತ ವಿರುದ್ಧಧ ಟಿ20 ಸರಣಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ನಡೆಯಲಿರುವ ಭಾರತ ವಿರುದ್ಧಧ ಟಿ20 ಸರಣಿ ನಮಗೆ ಉತ್ತಮವಾದ ಅವಕಾಶವಾಗಿದೆ ಎಂದಿದ್ದಾರೆ. ಇನ್ನು ಮುಂಬರುವ ಟಿ20 ವಿಶ್ವಕಪ್‌ನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡದ ಹೆಚ್ಚಿನ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡಿರುತ್ತಾರೆ, ಹೀಗಾಗಿ ಅವರ ಮೇಲೆ ಹೆಚ್ಚಿನ ಒತ್ತಡಗಳಿದ್ದು ಅದು ಐರ್ಲೆಂಡ್ ತಂಡಕ್ಕೆ ಲಾಭವಾಗಬಹುದು ಎಂದಿದ್ದಾರೆ.

'Fab-4' ಪೈಕಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸುವ ಆಟಗಾರ ಈತ: ಭವಿಷ್ಯ ನುಡಿದ ಆಸಿಸ್ ದಿಗ್ಗಜ

ಜೋ ರೂಟ್ ನ Copy ಮಾಡೋಕೆ ಹೋಗಿ Troll ಆದ ವಿರಾಟ್ !! | *Cricket | OneIndia Kannada
ಐರ್ಲೆಂಡ್ ವಿರುದ್ಧ ಸೆಣೆಸಲಿದೆ ಹಾರ್ದಿಕ್ ಪಡೆ

ಐರ್ಲೆಂಡ್ ವಿರುದ್ಧ ಸೆಣೆಸಲಿದೆ ಹಾರ್ದಿಕ್ ಪಡೆ

ಇನ್ನು ಭಾರತ ತಂಡದ ಪ್ರಮುಖ ಆಟಗಾರರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿವ ನಿಟ್ಟಿಯಲ್ಲಿ ಯುಕೆಯಲ್ಲಿದ್ದಾರೆ. ಹೀಗಾಗಿ ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದಿದೆ. ಹಾರ್ದಿಕ್ ಪಾಂಡ್ಯ ಈ ತಂಡದ ನಾಯಕತ್ವ ವಹಿಸಿಕೊಂಡಿದ್ದು ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಉಪನಾಯಕನಾಗಿದ್ದರೆ ಯುಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್ ಮುಂತಾದ ಆಟಗಾರರು ಕೂಡ ಈ ತಂಡದಲ್ಲಿದ್ದಾರೆ.

Story first published: Friday, June 24, 2022, 16:30 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X