ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?

Is Bcci President Sourav Ganguly Will Be The President Of Icc?

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತನ್ನ ಆಡಳಿತದಿಂದ ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾರೆ. ಆದರೆ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಯಲು ಹೆಚ್ಚು ಸಮಯಾವಕಾಶವಿಲ್ಲ. ಅವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್‌ಗೆ ಬಿಸಿಸಿಐ ಮನವಿ ಮಾಡಿಕೊಂಡಿದ್ದರಾದರೂ ಅದಿನ್ನೂ ವಿಚಾರಣೆಗೆ ಬರಬೇಕಾಗಿದೆ.

ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್

ಜುಲೈ ತಿಂಗಳಿಗೆ ಸೌರವ್ ಗಂಗೂಲಿ ಅಧ್ಯಕ್ಷಗಿರಿಯ ಅವಧಿ ಅಂತ್ಯವಾಗಲಿದೆ. ಈಗಿನ ನಿಯಮದ ಪ್ರಕಾರ ಮುಂದಿನ ಮೂರು ವರ್ಷಗಳ ಕಾಲ ಮತ್ತೆ ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವಿಲ್ಲ. ಹೀಗಾಗಿ ಗಂಗೂಲಿ ಅಂರಾತಾಷ್ಟ್ರೀಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕಷ್ಟು ಬೆಂಬಲವೂ ಕೇಳಿ ಬರುತ್ತಿದೆ.

ಐಸಿಸಿ ಅಧ್ಯಕ್ಷ ಸ್ಥಾನವೂ ತೆರವಾಗಲಿದೆ

ಐಸಿಸಿ ಅಧ್ಯಕ್ಷ ಸ್ಥಾನವೂ ತೆರವಾಗಲಿದೆ

ಐಸಿಸಿಯ ಹಾಲಿ ಅಧ್ಯಕ್ಷರಾಗಿ ಭಾರತೀಯರೇ ಆದ ಶಶಾಂಕ್ ಮನೋಹರ್ ಕರ್ತವ್ಯದಲ್ಲಿದ್ದಾರೆ. ಆದರೆ ಜುಲೈ ಅಂತ್ಯಕ್ಕೆ ಶಶಾಂಕ್ ಮನೋಹರ್ ಅವಧ ಅಂತ್ಯವಾಗಲಿದೆ. ಅವರಿಗೆ ಇನ್ನೊಂದು ವರ್ಷ ಈ ಸ್ಥಾನದಲ್ಲಿ ಮುಂದುವರಿಯುವ ಅವಕಾಶವಿದೆ, ಆದರೆ ಸದ್ಯ ಅವರು ಮುಂದುವರಿಯಲು ನಿರಾಸಕ್ತಿ ಹೊಂದಿದ್ದಾರೆ.

ಜುಲೈ ಅಂತ್ಯಕ್ಕೇ ಗಂಗೂಲಿ ಅವಧಿಯೂ ಮುಕ್ತಾಯ

ಜುಲೈ ಅಂತ್ಯಕ್ಕೇ ಗಂಗೂಲಿ ಅವಧಿಯೂ ಮುಕ್ತಾಯ

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಬಿಸಿಸಿಐ ಅಧ್ಯಕ್ಷಗಿರಿಯ ಅವಧಿ ಮುಂದಿನ ಜುಲೈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಮತ್ತು ಬಿಸಿಸಿಐ ಉಪಾಧ್ಯಕ್ಷರಾಗಿ ಜೈ ಶಾ 9 ತಿಂಗಳ ಅವಧಿಗೆ ಆಯ್ಕೆಯಾಗಿದ್ದರು. ಇನ್ನೊಂದು ಅವಧಿಗೆ ಇವರು ಆಯ್ಕೆಯಾಗಬೇಕಾದರೆ ಬಿಸಿಸಿಐ ಸಂವಿದಾನದ 6.4 ನಿಯಮದ ಪ್ರಕಾರ ಮೂರುವರ್ಷದ "ಕೂಲಿಂಗ್ ಅವಧಿ"ಯನ್ನು ಪೂರೈಸಿಕೊಳ್ಳಬೇಕಿದೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ ಗಂಗೂಲಿ ಹೆಸರು

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ ಗಂಗೂಲಿ ಹೆಸರು

ಈ ಮಧ್ಯೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಹೆಸರು ಬಲವಾಗ ಕೇಳಿ ಬರುತ್ತಿದೆ. ಅನೇಕರು ಈಗಾಗಲೇ ಗಂಗೂಲಿ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್ ಸೌಥ್ ಆಫ್ರಿಕಾದ ಮುಖ್ಯಸ್ಥರಾಗಿರುವ ಗ್ರೇಮ್ ಸ್ಮಿತ್ ಬಹಿರಂಗವಾಗಿ ಗಂಗೂಲಿ ಅಧ್ಯಕ್ಷರನ್ನಾಗಿ ಕಾಣುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಬಾಯ್ಬಿಟ್ಟಿಲ್ಲ ಗಂಗೂಲಿ

ಬಾಯ್ಬಿಟ್ಟಿಲ್ಲ ಗಂಗೂಲಿ

ಐಸಿಸಿ ಅಧ್ಯಕ್ಷಗಿರಿಯ ಬಗ್ಗೆ ಸೌರವ್ ಗಂಗೂಲಿ ಯಾವುದೇ ರೀತಿಯ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿಲ್ಲ. ಆದರೆ ಬಿಸಿಸಿಐ ಮೂಲಕ ಕ್ರಿಕೆಟ್ ಆಡಳಿತದಲ್ಲಿ ಗಂಗೂಲಿ ಉತ್ತಮ ಅನುಭವ ಪಡೆದುಕೊಂಡಿದ್ದಾರೆ. ಈ ಅನುಭವವನ್ನು ಐಸಿಸಿ ಅಧ್ಯಕ್ಷರಾಗಿ ಉಪಯೋಗಿಸಿಕೊಳ್ಳುವ ಸಾಧ್ಯತೆ ಇಲ್ಲದ್ದಿಲ್ಲ. ಹೀಗಾಗಿ ಗಂಗೂಲಿಯ ಮನಸಿನಲ್ಲೇನಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Story first published: Sunday, May 24, 2020, 11:55 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X