ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

173 ರನ್ ಸಿಡಿಸಿದ ಇಶಾನ್ ಕಿಶನ್: ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಜಾರ್ಖಂಡ್

Ishan Kishan hits 173 Jharkhand post highest total by an Indian domestic side

ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆಗೆ ಭರ್ಜರಿ ಆರಂಭ ದೊರೆತಿದೆ. ಮಧ್ಯ ಪ್ರದೇಶ ಹಾಗೂ ಜಾರ್ಖಂಡ್ ನಡುವೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಜಾರ್ಖಂಡ್ ತಂಡ ದಾಖಲೆಯ ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. 422 ರನ್ ಗಳಿಸುವ ಮೂಲಕ ದೇಶೀಯ ಕ್ರಿಕೆಟ್‌ನ ಅತಿ ಹೆಚ್ಚಿನ ರನ್ ಗಳಿಸಿದ ದಾಖಲೆ ಬರೆದಿದೆ. ನಾಯಕ ಇಶಾನ್ ಕಿಶನ್ ಸ್ಪೋಟಕ ಆಟ ಪ್ರದರ್ಶಿಸಿ ಅದ್ಭತ ಶತಕವನ್ನು ದಾಖಲಿಸಿದ್ದಾರೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡದ ಪರವಾಗಿ ನಾಯಕ ಇಶಾನ್ ಕಿಶನ್ ಕೇವಲ 94 ರನ್ ಎಸೆತಗಳಲ್ಲಿ ಭರ್ಜರಿ 173 ರನ್ ಪೇರಿಸಿದ್ದಾರೆ. 28ನೇ ಓವರ್‌ನಲ್ಲಿ ಔಟಾಗುವ ಮುನ್ನ ಇಶಾನ್ ಕಿಶನ್ ದ್ವಿಶತಕವನ್ನು ಬಾರಿಸುವ ಅವಕಾಶವನ್ನು ಹೊಂದಿದ್ದರು. ಆದರೆ 19 ಬೌಂಡರಿ ಹಾಗು 11 ಸಿಕ್ಸರ್‌ಗಳನ್ನು ಸಿಡಿಸಿದ ಬಳಿಕ ಇಶಾನ್ ಕಿಶನ್ ಫೆವಿಲಿಯನ್ ಸೇರಿದರು.

ಭಾರತ vs ಇಂಗ್ಲೆಂಡ್: ಉಮೇಶ್ ಯಾದವ್‌ಗೆ ಶೀಘ್ರ ಫಿಟ್ನೆಸ್ ಟೆಸ್ಟ್ಭಾರತ vs ಇಂಗ್ಲೆಂಡ್: ಉಮೇಶ್ ಯಾದವ್‌ಗೆ ಶೀಘ್ರ ಫಿಟ್ನೆಸ್ ಟೆಸ್ಟ್

ಇಶಾನ್ ಕಿಶನ್ ಔಟಾಗುವ ವೇಳೆಗೆ ತಮ್ಮ ದ್ವಿಶತಕಕ್ಕಾಗಿ ಕೇವಲ 27 ರನ್‌ಗಳಷ್ಟು ಹಿಂದಿದ್ದರು. ಇನ್ನಿಂಗ್ಸ್‌ನಲ್ಲಿ ಇನ್ನೂ ಕೂಡ 22 ಓವರ್‌ಗಳು ಬಾಕಿಯಿತ್ತು. ಈ ಮೂಲಕ ಈ ಬಾರಿಯ ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ನ ಈ ಸ್ಟಾರ್ ಆಟಗಾರ ಭರ್ಜರಿ ಫಾರ್ಮ್‌ಅನ್ನು ಪ್ರದರ್ಶಿಸಿದ್ದಾರೆ.

ಇಶಾನ್ ಕಿಶನ್ ನಿರ್ಗಮನದ ಬಳಿಕವೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಸಿಂಗ್ 68 ರನ್, ಸುಮಿತ್ ಕುಮಾರ್ 52 ರನ್ ಹಾಗೂ ಅನುಕುಲ್ ರಾಯ್ 72 ರನ್ ಗಳಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.

ಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕ

ಜಾರ್ಖಂಡ್ ತಂಡದ ಆರಂಭಿಕ ಆಟಗಾರ ಉತ್ಕರ್ಷ್ ಸಿಂಗ್ ಗುರುವಾರ ನಡೆದ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೂಲ ಬೆಲೆ 20 ಲಕ್ಷಕ್ಕೆ ಹರಾಜಾಗಿದ್ದರು. ಆದರೆ ಅವರನ್ನು ಕೇವಲ 6 ರನ್ ಗಳಿಸಿದ್ದಾಗ ಔಟ್ ಮಾಡುವಲ್ಲಿ ಬೌಲರ್ ಈಶ್ವರ್ ಪಾಂಡೆ ಯಶಸ್ವಿಯಾದರು.

Story first published: Sunday, February 21, 2021, 0:19 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X