ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಇಶಾನ್ ಕಿಶಾನ್

ಐಪಿಎಲ್ 2020ರಲ್ಲಿ ಹೆಚ್ಚು ಗಮನ ಸೆಳೆದ ಆಟಗಾರರ ಪೈಕಿ ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶಾನ್ ಒಬ್ಬರು. ಸೌರಭ್ ತಿವಾರಿ ಗಾಯಗೊಂಡು ಹೊರಗುಳಿದ ವೇಳೆ ತಂಡದಲ್ಲಿ ಅವಕಾಶ ಪಡೆದ ಇಶಾನ್ ಕಿಶಾನ್ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದರು.

ಕೀಪರ್ ಸ್ಥಾನಕ್ಕಾಗಿ ರಿಷಭ್ ಪಂತ್ ಮತ್ತು ಇಶನ್ ಕಿಶನ್ ನಡುವಿನ ಸ್ಪರ್ಧೆ ಸಖತ್ತಾಗಿದೆ: ಸಂಜಯ್ ಮಂಜ್ರೇಕರ್ಕೀಪರ್ ಸ್ಥಾನಕ್ಕಾಗಿ ರಿಷಭ್ ಪಂತ್ ಮತ್ತು ಇಶನ್ ಕಿಶನ್ ನಡುವಿನ ಸ್ಪರ್ಧೆ ಸಖತ್ತಾಗಿದೆ: ಸಂಜಯ್ ಮಂಜ್ರೇಕರ್

ರೋಹಿತ್ ಶರ್ಮಾ ಗಾಯದಿಂದ ಹೊರಬಂದಾಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕನಾಗಿ ಅದ್ಭುತ ಆಟ ಪ್ರದರ್ಶಿಸಿದರು. 14 ಪಂದ್ಯಗಳಲ್ಲಿ 516 ರನ್ ಕಲೆ ಹಾಕಿರುವ ಇಶಾನ್ ಕಿಶಾನ್ ಈ ಆವೃತ್ತಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಸರ್ಪ್ರೈಸ್ ಎಂಬಂತೆ ಈ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಸಹ ಆಗಿದ್ದಾರೆ. ಇದರಲ್ಲೂ ಇಶಾನ್ ಕಿಶಾನ್ ವಿಶೇಷ ದಾಖಲೆ ಮಾಡಿದ್ದಾರೆ. ಈ ರೆಕಾರ್ಡ್ ಬರೆದ ಮೊದಲ ಭಾರತೀಯ ಆಟಗಾರ. ಏನದು? ಮುಂದೆ ಓದಿ....

ಈ ಆವೃತ್ತಿಯಲ್ಲಿ ಇಶಾನ್ ಕಿಶಾನ್ 'ಸಿಕ್ಸರ್ ಸಿಂಗ್'

ಈ ಆವೃತ್ತಿಯಲ್ಲಿ ಇಶಾನ್ ಕಿಶಾನ್ 'ಸಿಕ್ಸರ್ ಸಿಂಗ್'

ಐಪಿಎಲ್ 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಇಶಾನ್ ಕಿಶಾನ್ (30 ಸಿಕ್ಸರ್). ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಪೊಲ್ಲಾರ್ಡ, ಮ್ಯಾಕ್ಸ್ ವೆಲ್, ರಸೆಲ್, ಹಾರ್ದಿಕ್ ಪಾಂಡ್ಯ ಅಂತಹ ಆಟಗಾರರನ್ನು ಹಿಂದಿಕ್ಕಿ ಇಶಾನ್ ಕಿಶಾನ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಮೊದಲ ಅನ್‌ಕ್ಯಾಪ್ ಆಟಗಾರ

ಐಪಿಎಲ್ ಇತಿಹಾಸದಲ್ಲಿ ಮೊದಲ ಅನ್‌ಕ್ಯಾಪ್ ಆಟಗಾರ

2008 ರಿಂದ 2020ರವರೆಗೂ ಐಪಿಎಲ್ ಇತಿಹಾಸದಲ್ಲಿ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಅನ್‌ಕ್ಯಾಪ್ ಆಟಗಾರ ಇಶಾನ್ ಕಿಶಾನ್. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ ಮೊದಲ ಸಲ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇಶಾನ್ ಕಿಶಾನ್ ನಂತರದಲ್ಲಿ ಯಾರು?

ಇಶಾನ್ ಕಿಶಾನ್ ನಂತರದಲ್ಲಿ ಯಾರು?

- 30 ಸಿಕ್ಸರ್ ಮೂಲಕ ಇಶಾನ್ ಕಿಶಾನ್ (ಮುಂಬೈ ಇಂಡಿಯನ್ಸ್) ಮೊದಲ ಸ್ಥಾನದಲ್ಲಿ ಇದ್ದಾರೆ.

- 26 ಸಿಕ್ಸರ್ ಮೂಲಕ ಸಂಜು ಸ್ಯಾಮ್ಸನ್ ( ರಾಜಸ್ಥಾನ ರಾಯಲ್ಸ್) ಎರಡನೇ ಸ್ಥಾನದಲ್ಲಿದ್ದಾರೆ.

- 25 ಸಿಕ್ಸರ್ ಬಾರಿಸಿರುವ ಹಾರ್ದಿಕ ಪಾಂಡ್ಯ (ಮುಂಬೈ ಇಂಡಿಯನ್ಸ್) ಮೂರನೇ ಸ್ಥಾನದಲ್ಲಿದ್ದಾರೆ.

- 25 ಸಿಕ್ಸರ್ ಮೂಲಕ ನಿಕೋಲಸ್ ಪೂರನ್ (ಕಿಂಗ್ಸ್ ಪಂಜಾಬ್) ನಾಲ್ಕನೇ ಸ್ಥಾನದಲ್ಲಿದ್ದಾರೆ.

- 24 ಸಿಕ್ಸರ್ ಮೂಲಕ ಇಯನ್ ಮಾರ್ಗನ್ (ಕೊಲ್ಕತ್ತಾ ನೈಟ್ ರೈಡರ್ಸ್) ಐದನೇ ಸ್ಥಾನದಲ್ಲಿದ್ದಾರೆ.

ಒಂದು ಆವೃತ್ತಿಯಲ್ಲಿ ಗರಿಷ್ಠ ಸಿಕ್ಸ್ ಬಾರಿಸಿದ ಆಟಗಾರ

ಒಂದು ಆವೃತ್ತಿಯಲ್ಲಿ ಗರಿಷ್ಠ ಸಿಕ್ಸ್ ಬಾರಿಸಿದ ಆಟಗಾರ

ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿರುವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ.

- 2012ರ ಆವೃತ್ತಿಯಲ್ಲಿ ಗೇಲ್ (ಆರ್‌ಸಿಬಿ) 59 ಸಿಕ್ಸರ್ ಬಾರಿಸಿದ್ದರು.

- 2019ರಲ್ಲಿ ರಸೆಲ್ (ಕೆಕೆಆರ್) 52 ಸಿಕ್ಸರ್ ಬಾರಿಸಿದ್ದರು.

- 2013 ರಲ್ಲಿ ಗೇಲ್ (ಆರ್‌ಸಿಬಿ) 51 ಸಿಕ್ಸರ್ ಬಾರಿಸಿದ್ದರು.

- 2011ರಲ್ಲಿ ಗೇಲ್ (ಆರ್‌ಸಿಬಿ) 44 ಸಿಕ್ಸರ್ ಬಾರಿಸಿದ್ದರು.

Story first published: Wednesday, November 11, 2020, 14:43 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X