ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನುಚಿತ ವರ್ತನೆ: ಇಶಾಂತ್ ಶರ್ಮಾಗೆ ದಂಡ ವಿಧಿಸಿದ ಐಸಿಸಿ

Ishant Sharma fined 15% match fees for animated celebrations

ಬರ್ಮಿಂಗ್ ಹ್ಯಾಮ್, ಆಗಸ್ಟ್ 4: ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ಪಂದ್ಯದ ವೇಳೆ ಅನುಚಿತ ವರ್ತನೆ ಮೂಲಕ ನೀತಿ ಉಲ್ಲಂಘಿಸಿದ ಕಾರಣಕ್ಕಾಗಿ ಭಾರತದ ವೇಗಿ ಇಶಾಂತ್ ಶರ್ಮಾಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ.

ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಅಂಕಿ ಅಂಶಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಅಂಕಿ ಅಂಶ

ಶನಿವಾರ (ಆ.4) ನಡೆದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರ ದಾವಿದ್ ಮಲಾನ್ ಅವರು 20 ರನ್ ನೊಂದಿಗೆ 26.2ನೇ ಓವರ್ ನಲ್ಲಿ ಇಶಾಂತ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಶಾಂತ್ ಸಂಭ್ರಮಾಚರಣೆ ಕೊಂಚ ಎಲ್ಲೆ ಮೀರಿದಂತಿತ್ತು. ಎದುರಾಳಿ ಆಟಗಾರ ಸಿಟ್ಟಿಗೊಳಗಾಗುವ ರೀತಿಯಲ್ಲಿ ಇಶಾಂತ್ ವರ್ತಿಸಿದ್ದರು. ಇಶಾಂತ್ ಈ ವರ್ತನೆ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.1.7ನ್ನು ಉಲ್ಲಂಘಿಸಿತ್ತು.

https://kannada.mykhel.com/cricket/india-england-first-test-statistics-005770.html

'ಎದುರಾಳಿ ಬ್ಯಾಟ್ಸ್ಮನ್ ಔಟಾದಾಗ ಬೌಲರ್ ತನ್ನ ಭಾಷೆ, ವರ್ತನೆ ಅಥವಾ ಭಂಗಿಯ ಮೂಲಕ ಎದುರಾಳಿಯನ್ನು ಸಿಟ್ಟಿಗೆ ಪ್ರೇರೇಪಿಸುವಂತಿದ್ದರೆ ಅದು ಐಸಿಸಿ ನಿಯಮ ಉಲ್ಲಂಘನೆಯಾಗುತ್ತದೆ. ಇಶಾಂತ್ ಅವರು ಮಲಾನ್ ವಿಕೆಟ್ ಪತನವಾದಾಗ ಇದೇ ರೀತಿಯ ವರ್ತನೆ ತೋರಿದ್ದರು. ಅದಕ್ಕಾಗಿ ದಂಡ ವಿಧಿಸಲಾಗಿದೆ' ಎಂದು ಐಸಿಸಿ ತಿಳಿಸಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಸವಾಲು ಸ್ವೀಕರಿಸಿರುವ ಭಾರತ, ಶನಿವಾರ (ಆ.4) ಮುಕ್ತಾಯಗೊಂಡ ಮೊದಲ ಟೆಸ್ಟ್ ನಲ್ಲಿ (ಎರಡೂ ಇನ್ನಿಂಗ್ಸ್ ಸೇರಿಸಿ) 274+162 ರನ್ ಪೇರಿಸಿತ್ತು. ಇಂಗ್ಲೆಂಡ್ ತಂಡ 287+180 ರನ್ ನೊಂದಿಗೆ ಭಾರತಕ್ಕೆ ಸೋಲಿನ ಕಹಿಯುಣಿಸಿತ್ತು.

Story first published: Saturday, August 4, 2018, 19:22 [IST]
Other articles published on Aug 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X