ನವದೆಹಲಿ, ಜೂನ್ 20: ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟರ್ ಮದುವೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಆಲ್ ರೌಂಡರ್ ಯುವರಾಜ್ ಸಿಂಗ್ ನಿಶ್ಚಿತಾರ್ಥದ ಸುದ್ದಿ ನಂತರ ಈಗ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮ ಅವರು ಭಾನುವಾರ ಉಂಗುರ ಬದಲಾಯಿಸಿಕೊಂಡಿದ್ದಾರೆ.[ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ]
ಭಾರತದ ಬಾಸ್ಕೆಟ್ಬಾಲ್ ತಂಡದ ಪರ ಆಡಿದ್ದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ಅವರು ಟೀಂ ಇಂಡಿಯಾದ ವೇಗಿ ಇಶಾಂತ್ ಅವರ ಮದುವೆ ನಿಶ್ಚಿತಾರ್ಥ ಸಮಾರಂಭ ದೆಹಲಿಯ ಉಪ್ಪಲ್ ಆರ್ಕಿಡ್ ನಲ್ಲಿ ಭಾನುವಾರ ನಡೆದಿದೆ. ಈ ಸುದ್ದಿಯನ್ನು ಕ್ರಿಕೆಟರ್ ರೋಹಿತ್ ಶರ್ಮ ಅವರು ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.[ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ]
ವಾರಣಾಸಿಯ ಶಿವ್ ಪುರದ ನಿವಾಸಿ ಪ್ರತಿಮಾ ಸಿಂಗ್ ಅವರದ್ದು ದೊಡ್ಡ ಕುಟುಂಬ ಐವರು ಸೋದರಿಯರ ಪೈಕಿ ಈಕೆಯೇ ಕಿರಿಯವಳು, ಅಥ್ಲೀಟ್ ಗಳ ಕುಟುಂಬದಲ್ಲಿ ಬೆಳೆದ ಪ್ರತಿಮಾ ಅವರು ಭಾರತ ತಂಡವನ್ನು ಬಾಸ್ಕೆಟ್ ಬಾಲ್ ಆಟದಲ್ಲಿ ಪ್ರತಿನಿಧಿಸಿದ್ದಾರೆ.[ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]
ಪ್ರತಿಮಾ ಅವರ ಸೋದರಿಯರ ಪೈಕಿ ಪ್ರಶಾಂತಿ, ದಿವ್ಯಾ ಹಾಗೂ ಆಕಾಂಕ್ಷ ಕೂಡಾ ಬಾಸ್ಕೆಟ್ಬಾಲ್ ಆಟಗಾರ್ತಿಯರು, ಮತ್ತೊಬ್ಬರು ಪ್ರಿಯಾಂಕಾ ಬಾಸ್ಕೆಟ್ಬಾಲ್ (ಎನ್ ಐಎಚ್) ಕೋಚ್. 2006ರಲ್ಲಿ ಟೀಂ ಇಂಡಿಯಾ ಜ್ಯೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದ ಪ್ರತಿಮಾ ಅವರು 2008ರಲ್ಲಿ ತಂಡದ ನಾಯಕಿಯಾದರು. 2010ರಲ್ಲಿ 'ಸಿಂಗ್ ಸಿಸ್ಟರ್ಸ್' ಏಷ್ಯನ್ ಗೇಮ್ಸ್ನಲ್ಲೂ ಆಡಿದರು.[ರೈನಾ ಪುತ್ರಿ ಹೆಸರು ಶ್ರೇಯಾಂಶಿ ಅಲ್ಲ ಗ್ರೇಸಿಯಾ!]
Welcome to the club @ImIshant congratulations you two. Lekin aaj ke din toh baal katva leta bhai 😂 pic.twitter.com/yDEE4GhhBf
— Rohit Sharma (@ImRo45) June 19, 2016