ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಬೆಂಗಳೂರಿಗೆ ಗೋವಾ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯ!

By Isl Media
isl 2020 21, bengaluru fc vs fc goa, match 101 preview

ಗೋವಾ, ಫೆಬ್ರವರಿ 20: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೆಚ್ಚಿನ ತಂಡಗಳಿಗೆ ಉಳಿದಿರುವುದು ಎರಡು ಪಂದ್ಯಗಳು ಮಾತ್ರ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಬೆಂಗಳೂರು ಎಫ್ ಸಿ ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಎಫ್ ಸಿ ಗೋವಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೇವಲ ಜಯ ಗಳಿಸಿದರೆ ಸಾಲದು ಸ್ಪರ್ಧೆಯಲ್ಲಿರುವ ಇತರ ತಂಡಗಳ ಅಂಕವೂ ಕುಸಿದರೆ ಮಾತ್ರ ಬೆಂಗಳೂರಿನ ಸುಗಮವಾಗಬಹುದು.

ಬೆಂಗಳೂರು ತಂಡದ ಕೋಚ್ ನೌಷಾದ್ ಮೂಸಾ ತಮ್ಮ ತಂಡ ಗೋವಾದ ವಿರುದ್ಧದ ಪಂದ್ಯದ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕಿಲ್ಲ ಎಂದಿದ್ದಾರೆ. "ನಾವು ಪ್ಲೇ ಆಫ್ ಹಂತ ತಲುಪುವುದರ ಬಗ್ಗೆ ಯಾವುದೇ ರೀತಿಯ ಒತ್ತಡಕ್ಕೆ ಸಿಲುಕಿಲ್ಲ. ಜಯ ಗಳಿಸಿದರೆ ನಾವು ಪ್ಲೇ ಆಫ್ ಹತ್ತಿರಕ್ಕೆ ತಲಪುವೆವು. ಕೇವಲ ಜಯ ಗಳಿಸಬೇಕೆಂಬ ಹತಾಶೆಯು ಕೆಲವೊಮ್ಮೆ ಯೋಜನೆಗಳನ್ನು ಹಾಳು ಮಾಡುತ್ತದೆ. ನಾವು ತಾಳ್ಮೆಯಿಂದ ನಮ್ಮ ಆಟದ ಕಡೆಗೆ ಗಮನಹರಿಸಲಿದ್ದೇವೆ," ಎಂದು ಮೂಸಾ ಹೇಳಿದರು.

ಐಎಸ್‌ಎಲ್: ಮೋಹನ್ ಬಾಗನ್ ಎದುರು ಶರಣಾದ ಈಸ್ಟ್ ಬೆಂಗಾಲ್ಐಎಸ್‌ಎಲ್: ಮೋಹನ್ ಬಾಗನ್ ಎದುರು ಶರಣಾದ ಈಸ್ಟ್ ಬೆಂಗಾಲ್

ಬಿಎಫ್ ಸಿ ತಂಡ ನಾಳೆ ಎದುರಿಸಲಿರುವ ತಂಡ ಲೀಗ್ ನಲ್ಲೇ ಉತ್ತಮ ದಾಳಿ ಮಾಡಬಲ್ಲ ತಂಡ. ಗೋವಾ ಗಳಿಸಿರುವ 26 ಗೋಲುಗಳಲ್ಲಿ 16 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿರುವುದು, ಕೊನೆಯ 15 ನಿಮಿಷಗಳಲ್ಲಿ ಗೋವಾ 10 ಗೋಲುಗಳನ್ನು ಗಳಿಸಿದೆ. "ಅವರು ಚೆಂಡನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬಲ್ಲರು. ಅದು ನಮಗೆ ಸುಲಭವಾದುದಲ್ಲ. ಅವರು ಕೊನೆಯ ಕ್ಷಣದಲ್ಲಿ ಗೋಲು ಗಳಿಸುತ್ತಿದ್ದಾರೆ, ಈ ಬಗ್ಗೆ ನಾವು ಎಚ್ಚರವಹಿಸಬೇಕು," ಎಂದು ಮೂಸಾ ಹೇಳಿದರು.

ಒಡಿಶಾ ವಿರುದ್ಧದ ಜಯದ ಮೂಲಕ ಲಯ ಕಂಡುಕೊಂಡ ಗೋವಾ ಅದೇ ರೀತಿಯಲ್ಲಿ ಮುಂದುವರಿಯುವ ಗುರಿ ಹೊಂದಿದೆ. ಇದಕ್ಕೂ ಮುನ್ನ ಗೋವಾ ಸತತ ಆರು ಪಂದ್ಯಗಳಲ್ಲಿ ಡ್ರಾ ಕಂಡಿತ್ತು.ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗ, ಗೋವಾ ತಂಡ ನಾರ್ಥ್ ಈಸ್ಟ್ ಮತ್ತು ಹೈದರಾಬಾದ್ ಜತೆ ಸಮಾನ ರೀತಿಯಲ್ಲಿ ಅಂಕ ಹಂಚಿಕೊಂಡಿದೆ.

ತಂಡದ ಚಿಂತೆಯ ವಿಷಯವೆಂದರೆ ಕಳೆದ ಏಳು ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಜಯಕ್ಕಿಂತ ಬೇರೆ ಯಾವುದೇ ಫಲಿತಾಂಶ ತಂಡದ ಪ್ಲೇ ಆಫ್ ಆಸೆಯನ್ನು ಕಸಿದುಕೊಳ್ಳಲಿದೆ. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿರುವುದರಿಂದ ಗೋವಾದ ಕೋಚ್ ಜುವಾನ್ ಫೆರಾಂಡೋ ಹಲವಾರು ಅಂಶಗಳ ಕಡೆಗೆ ಗಮನ ಹರಿಸಿದ್ದಾರೆ,

"ಅವರಿಗೂ ಮತ್ತು ನಮಗೂ ನಾಳೆಯ ಪಂದ್ಯ ಕಠಿಣವೆನಿಸಿದೆ. ಮೂರು ಅಂಕಗಳನ್ನು ಗಳಿಸುವುದು ಪ್ರಮುಖವಾಗಿದೆ. ಮೂರು ಅಂಕಗಳಿಂದ ನಮಗೆ ಪ್ಲೇ ಆಫ್ ತಲುಪಲು ಸಾಕಷ್ಟು ಅವಕಾಶ ಸಿಗುತ್ತದೆ. ಬೆಂಗಳೂರಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಆರು ಅಂಕ ಬೇಕಾಗಿದೆ. ಸಮಾನ ಮನಸ್ಕ ತಂಡಗಳಾದ ಕಾರಣ ನಾಳೆಯ ಪಂದ್ಯ ಉತ್ತಮ ಪಂದ್ಯವಾಗಲಿದೆ. ಇದೊಂದು ಭಾವನಾತ್ಮಕ ಪಂದ್ಯವಾಗಲಿದೆ," ಎಂದರು.

Story first published: Saturday, February 20, 2021, 20:28 [IST]
Other articles published on Feb 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X