ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ

ISL 2021-22: match 49 SCEB vs BFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನ 49ನೇ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಹಾಗೂ ಬೆಂಗಳೂರು ಎಫ್‌ಸಿ ತಮಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ 1-1 ಗೋಲುಗಳನ್ನು ಗಳಿಸಿದ್ದು ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ ಗೆಲುವಿನ ಲಯಕ್ಕೆ ಮರಳಿದ ವಿಶ್ವಾಸ ಮೂಡಿಸಿದ್ದ ಬಿಎಫ್‌ಸಿ ಮತ್ತೆ ನಿರಾಸೆ ಅನುಭವಿಸಿದೆ.

ಬೆಂಗಳೂರು ಎಫ್‌ಸಿ ಹಾಗೂ ಎಸ್‌ಸಿ ಈಸ್ಟ್ ಬೆಂಗಾಲ್ ಎರಡು ತಂಡಗಳ ಪಾಲಿಗೂ ಈ ಬಾರಿಯ ಆವೃತ್ತಿ ಅತ್ಯಂತ ಕಳಪೆಯಾಗಿದೆ. ಅದರಲ್ಲೂ ಈಸ್ಟ್ ಬೆಂಗಾಲ್ 9 ಪಂದ್ಯಗಳನ್ನು ಆಡಿದ್ದರೂ ಈವರೆಗೆ ಒಂದೇ ಒಂದು ಗೆಲುವು ಸಾಧಿಸಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಮತ್ತೊಂದೆಡೆ ಬೆಂಗಳೂರು ಎಫ್‌ಸಿ ಪಾಲಿಗೆ ಕೂಡ ಈ ಬಾರಿಯ ಟೂರ್ನಿ ಹಿಣದಿನ ಎಲ್ಲಾ ಆವೃತ್ತಿಗಳಿಗೆ ಹೋಲಿಸಿದರೂ ಕಳಪೆಯಾಗಿದೆ. ಅಂಕಪಟ್ಟಿಯಲ್ಲಿ ತಳದಲ್ಲಿ ಇತರ ತಂಡಗಳೊಂದಿಗೆ ಬಿಎಫ್‌ಸಿ ಪೈಪೋಟಿ ನಡೆಸುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದರಲ್ಲೂ ದುರ್ಬಲ ತಂಡದ ವಿರುದ್ಧವೂ ಬಿಎಫ್‌ಸಿ ಗೆಲುವು ಸಾಧಿಸಲು ವಿಫಲವಾಗುತ್ತಿರುವುದು ಆಘಾತ ಮೂಡಿಸಿದೆ.

ಕೊಹ್ಲಿ, ಪೂಜಾರ, ರಹಾನೆಗೆ ಬಿಗ್‌ ಸ್ಕೋರ್ ಏಕೆ ಸಾಧ್ಯವಾಗುತ್ತಿಲ್ಲ? ಈ ಸಮಸ್ಯೆಯನ್ನ ಪತ್ತೆಹಚ್ಚಿದ ರಾಹುಲ್ ದ್ರಾವಿಡ್!ಕೊಹ್ಲಿ, ಪೂಜಾರ, ರಹಾನೆಗೆ ಬಿಗ್‌ ಸ್ಕೋರ್ ಏಕೆ ಸಾಧ್ಯವಾಗುತ್ತಿಲ್ಲ? ಈ ಸಮಸ್ಯೆಯನ್ನ ಪತ್ತೆಹಚ್ಚಿದ ರಾಹುಲ್ ದ್ರಾವಿಡ್!

ಈ ಪಂದ್ಯದಲ್ಲಿ ಮೊದಲಿಗೆ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ 28ನೇ ನಿಮಿಷದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಥೋಂಗ್‌ಖೋಸಿಮ್ ಹಾಕಿಪ್ ತಂಡಕ್ಕೆ ಈ ಗೋಲು ಸಿಡಿಸಿ ಮುನ್ನಡೆಯನ್ನು ಒದಗಿಸಿದರು. ಹೀಗೆ ಮೊದಲಾರ್ಧದಲ್ಲಿ ಬಿಎಫ್‌ಸಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿತು. ನಂತರ ದ್ವಿತಿಯಾರ್ಧದಲ್ಲಿ ಬೆಂಗಳೂರು ತಂಡದ ಪರವಾಗಿ ಕೂಡ ಒಂದು ಗೋಲು ಸಿಡಿಯಿತು. ಈ ಗೋಲು ಕೂಡ ಎದುರಾಳಿ ತ,ಡದ ಸೌರವ್ ದಾಸ್ ಅವರ ಎಡವಟ್ಟಿನಿಂದ ಓನ್ ಗೋಲಾಗಿದೆ. ಈ ಮೂಲಕ ಬೆಂಗಳೂರು 1-1 ಅಂತರದ ಸಮಬಲ ಸಾಧಿಸಿದೆ.

ವಾಂಡರರ್ಸ್ ಕ್ರೀಡಾಂಗಣ: ತವರಿಗಿಂತ ಆಚೆ ಭಾರತದ ಭದ್ರಕೋಟೆ ಎನಿಸಿಕೊಂಡಿದ್ದು ಹೇಗೆ?ವಾಂಡರರ್ಸ್ ಕ್ರೀಡಾಂಗಣ: ತವರಿಗಿಂತ ಆಚೆ ಭಾರತದ ಭದ್ರಕೋಟೆ ಎನಿಸಿಕೊಂಡಿದ್ದು ಹೇಗೆ?

ಇನ್ನು ಈ ಪಂದ್ಯದ ಡ್ರಾ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿಯೇ ಮುಂದಿವರಿದಿದೆ. ಇನ್ನು ಬೆಂಗಳೂರು ಎಫ್‌ಸಿ ತಂಡ 8ನೇ ಸ್ಥಾನದಲ್ಲಿಯೇ ಮುಂದಿವರಿದಿದೆ.

ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜಾ (ಗೋಲ್‌ ಕೀಪರ್/ ನಾಯಕ), ಟೊಮಿಸ್ಲಾವ್ ಮರ್ಸೆಲಾ, ಆದಿಲ್ ಖಾನ್, ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ವಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ನವೋರೆಮ್ ಸಿಂಗ್, ಥೋಂಗ್‌ಖೋಸಿಮ್ ಹಾಕಿಪ್, ಡೇನಿಯಲ್ ಚುಕ್ವು.

ಮತ್ತೆ RCB ಗೆ ಬರ್ತಾರಂತೆ ಎ ಬಿ ಡಿವಿಲಿಯರ್ಸ್: 2022ಕ್ಕೆ ಕಪ್ ನಮ್ದೇ | Oneindia Kannada

ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್‌ ಕೀಪರ್/ ನಾಯಕ), ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ಪರಾಗ್ ಶ್ರೀವಾಸ್, ರೋಷನ್ ನವೋರೆಮ್, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್, ಪ್ರಿನ್ಸ್ ಇಬಾರಾ, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ.

Story first published: Tuesday, January 4, 2022, 22:24 [IST]
Other articles published on Jan 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X