ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಡ್ರಾದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದ ಹೈದರಾಬಾದ್

ISL 2021: hyderabad fc vs east bengal fc,highlights of match 91

ಗೋವಾ, ಫೆಬ್ರವರಿ 12: ಹೀರೋ ಇಂಡಿಯನ್ ಸೂಪರ್ ಲೀಗ್ 91ನೇ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಈಸ್ಟ್ ಬೆಂಗಾಲ್ ಪರ ಬ್ರೈಟ್ ಎನೊಬಾಖರೆ (59ನೇ ನಿಮಿಷ) ಹಾಗೂ ಹೈದರಾಬಾದ್ ಪರ ನಾಯಕ ಅರಿದಾನೆ ಸ್ಯಾಂಟನಾ (90ನೇ ನಿಮಿಷ) ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಹೈದರಾಬಾದ್ ಸೋಲುವ ಅಂಚಿನಲ್ಲಿತ್ತು, ಆದರೆ ಸ್ಯಾಂಟನಾ ಗಳಿಸಿದ ಗೋಲು ತಂಡಕ್ಕೆ ಅಂಕ ಹಂಚಿಕೊಳ್ಳಲು ನೆರವಾಯಿತು. ಇದರೊಂದಿಗೆ ಹೈದರಾಬದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಈಸ್ಟ್ ಬೆಂಗಾಲ್ ತನ್ನ ಮುನ್ನಡೆಯ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಂತಿಮ ಕ್ಷಣದಲ್ಲಿ ಹೈದರಾಬಾದ್ ನ ಮೊಹಮ್ಮದ್ ಯಾಸಿರ್ ತಪ್ಪಿನ ತುಳಿತಕ್ಕೆ ಮುಂದಾಗಿ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದರು.

ಗೋಲಿಲ್ಲದ ಪ್ರಥಮಾರ್ಧ: ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಲು ಗೋಲನ್ನೇ ಗುರಿಯಾಗಿಸಿಕೊಂಡ ಹೈದರಾಬದ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಪ್ರಥಮಾರ್ಧವನ್ನು ಗೋಲಿಲ್ಲದೆ ಪೂರ್ಣಗೊಳಿಸಿದವು. ಹೈದರಾಬಾದ್ ಆರಂಭದಲ್ಲಿ ಉತ್ತಮ ಅವಕಾಶಗಳನ್ನು ನಿರ್ಮಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಅಲ್ಪವಿರಾಮದ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಎರಡೂ ತಂಡಗಳ ಗೋಲ್ ಕೀಪರ್ ಗಳು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು ಎಂದರೆ ತಪ್ಪಾಗಲಾರದು.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!

ದ್ವಿತೀಯಾರ್ಧದಲ್ಲಿ ಮತ್ತಷ್ಟು ಕುತೂಹಲ

ದ್ವಿತೀಯಾರ್ಧದಲ್ಲಿ ಮತ್ತಷ್ಟು ಕುತೂಹಲ

ಲಕ್ಷ್ಮೀಕಾಂತ್ ಕಟ್ಟಿಮನಿ ಎರಡು ಬಾರಿ ಗೋಲನ್ನು ತಡೆದು ಹೈದರಾಬಾದ್ ಗೆ ನೆರವಾದರೆ, ಈಸ್ಟ್ ಬೆಂಗಾಲ್ ನ ಸುಬ್ರತಾ ಪಾಲ್ ನೇರವಾಗಿ ದಾಖಲಾಗುತ್ತಿದ್ದ ಗೋಲನ್ನು ತಡೆದು ತಂಡವನ್ನು ಅಪಾಯದಿಂದ ಪಾರು ಮಾಡಿದರು. ಹೈದರಾಬಾದ್ ತಂಡ ದ್ವಿತಿಯಾರ್ಧದಲ್ಲಿ ಗೋಲು ಗಳಿಸಿದ್ದೇ ಹೆಚ್ಚು, ಆದ್ದರಿಂದ ದ್ವಿತಿಯಾರ್ಧದ ಪಂದ್ಯ ಇನ್ನಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು.

ಜಯವೊಂದೇ ಮಂತ್ರ

ಜಯವೊಂದೇ ಮಂತ್ರ

ಹೀರೋ ಇಂಡಿಯನ್ ಸೂಪರ್ ಲೀಗ್ ಅಂತಿಮ ಹಂತ ತಲುಪುತ್ತಿದ್ದಂತೆ ಪ್ರತಿಯೊಂದು ತಂಡವೂ ಜಯವನ್ನೇ ಮಂತ್ರವಾಗಿರಿಸಿಕೊಂಡಿದೆ. 91ನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ಹಾಗೂ ಎಸ್ ಸಿ ಈಸ್ಟ್ ಬೆಂಗಾಲ್ ತಂಡಗಳು ಮುಖಾಮುಖಿಯಾದವು. ಎರಡೂ ತಂಡಗಳಿಗೂ ಈಗ ಸೆಮಿಫೈನ್ ಗುರಿ. ಹೈದರಾಬಾದ್ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಪಿಚ್ ಎರಡೂ ಕಡೆಗಳಲ್ಲಿ ಗುಣಮಟ್ಟದ ಆಟಟ ಪ್ರದರ್ಶಿಸುವ ಆಟಗಾರರಿದ್ದಾರೆ.

ಹೈದರಾಬಾದ್‌ ಅದ್ಭುತ ಪ್ರದರ್ಶನ

ಹೈದರಾಬಾದ್‌ ಅದ್ಭುತ ಪ್ರದರ್ಶನ

ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಹೈದರಾಬಾದ್ ಇದುವರೆಗೂ 20 ಗೋಲುಗಳನ್ನು ಗಳಿಸಿದೆ. ಕಳೆದ ಆರು ಪಂದ್ಯಗಳಲ್ಲಿ ನಾಲ್ಕು ಕ್ಲೀನ್ ಶೀಟ್ ಗಳಿಕೆ ಕಂಡಿದೆ. ಈಸ್ಟ್ ಬೆಂಗಾಲ್ ತಂಡ ಕಳೆದ ಪಂದ್ಯದಲ್ಲಿ ಅಪೂರ್ವ ಜಯವನ್ನು ಕಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮ್ಯಾಟಿ ಸ್ಟೈನ್ಮನ್, ಆಂಥೋನಿ ಪಿಲ್ಕಿಂಗ್ಟನ್, ಬ್ರೈಟ್ ಎನೊಬಾಖರೆ ಮತ್ತು ಜಾಕ್ಬೆಸ್ ಮಗೋಮಾ ಅವರ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ನಾಲ್ಕು ಪಂದ್ಯಗಳಿಗೆ ಅಮಾನತುಗೊಂಡಿರುವ ರಾಬಿ ಫ್ಲವರ್ ಇಂದು ತಂಡವನ್ನು ಹುರಿದುಂಬಿಸಿದ್ದಾರೆ.

Story first published: Friday, February 12, 2021, 23:26 [IST]
Other articles published on Feb 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X