ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್‌ 2019: ಗೋವಾ ವಿರುದ್ಧ ಎಟಿಕೆಗೆ ಜಯವೊಂದೇ ಗುರಿ

By Isl Media
ISL: With backs to the wall, ATK plan to strike back against Goa

ಗೋವಾ, ಫೆಬ್ರವರಿ 13: ಹೀರೋ ಇಂಡಿಯನ್ ಸೂಪರ್ ಲೀಗ್ ಪ್ಲೇ ಆಫ್ ಹಂತವನ್ನು ತಲುಪಬೇಕಾದರೆ ಗೋವಾದಲ್ಲಿ ನಡೆಯಲಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಎಟಿಕೆ ತಂಡಕ್ಕೆ ಜಯವಲ್ಲದೆ ಬೇರೇನೂ ಅಗತ್ಯವಿಲ್ಲ. ಗುರುವಾರ (ಫೆಬ್ರವರಿ 14) ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದೆ.

ರಾಹುಲ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್ ಎದುರು ಭಾರತ 'ಎ' ಉತ್ತಮ ರನ್ರಾಹುಲ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್ ಎದುರು ಭಾರತ 'ಎ' ಉತ್ತಮ ರನ್

ಈ ಋತುವಿನಲ್ಲಿ ಸ್ಟೀವ್ ಕೊಪ್ಪೆಲ್ ತಂಡ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡಗಳಲ್ಲಿ ಎರಡನೇ ಸ್ಥಾನದಲ್ಲಿದೆ. 15 ಪಂದ್ಯಗಳಲ್ಲಿ ಈ ತಂಡ ಕೇವಲ 15 ಗೋಲುಗಳನ್ನು ನೀಡಿದೆ. ಅದೇ ರೀತಿ ಅಂತಿಮ ಹಂತದಲ್ಲಿ ಗೋಲು ನೀಡಿದ ತಂಡಗಳಲ್ಲೂ ಎಟಿಕೆ ಕಳಪೆ ಹಂತದಲ್ಲಿದೆ. ಕೇವಲ 15 ಗೋಲುಗಳನ್ನು ಗಳಿಸಿವೆ.

1
1042962

21 ಅಂಕಗಳನ್ನು ಗಳಿಸಿರುವ ಕೋಲ್ಕೊತಾದ ತಂಡ ಗೋವಾ ವಿರುದ್ಧ ಜಯ ಗಳಿಸಿದರೆ, ನಾರ್ತ್ ಈಸ್ಟ್ ಯುನೈಟೆಡ್ ತಂಡದೊಂದಿಗೆ ಸಮಬಲ ಸಾಧಿಸಲಿದೆ. ಆದರೆ ಸರ್ಗಿಯೋ ಲೊಬೆರಾ ಅವರ ತಂಡ ಡಿಫೆನ್ಸ್ ವಿಭಾಗದಲ್ಲಿ ಬಲಿಷ್ಠವಾಗಿರುವುದರಿಂದ ಎಟಿಕೆ ಕಠಿಣ ಹೋರಾಟ ನಡೆಸಬೇಕಾಗಿದೆ.

ಇತ್ತಂಡಗಳ ನಡುವಿನ ಹಿಂದಿನ ಪಂದ್ಯ ಗೋಲಿಲ್ಲದೆ ಅಂತ್ಯಗೊಂಡಿತ್ತು. ಆದರೆ ಇದೇ ಫಲಿತಾಂಶ ಪುನರಾವರ್ತನೆಗೊಂಡರೆ ಇತ್ತಂಡಗಳಿಗೂ ಉತ್ತಮವಾದುದಲ್ಲ. ಅಂತಿಮ ಹಂತದಲ್ಲಿ ಎಟಿಕೆ ತಂಡದ ಬ್ಯಾಕ್‌ಲೇನ್ ವಿಭಾಗ ದುರ್ಬಲಗೊಳ್ಳುವುದು ಸಾಮಾನ್ಯವಾಗಿದೆ. ಇದರ ಪ್ರಯೋಜನವನ್ನು ಗೋವಾ ಬಳಸಿಕೊಳ್ಳಲು ಸಜ್ಜಾಗಿದೆ.

ಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗ

'ಗೋವಾಕ್ಕೆ ಬಂದು ಆ ತಂಡದಲ್ಲಿರುವ ಆಟಗಾರರನ್ನು ನೋಡಿ. ಅವರಲ್ಲಿ ಉತ್ತಮ ಆಟಗಾರರಿದ್ದಾರೆ. ಉತ್ತಮ ತರಬೇತುದಾರರಿಂದ ಕೂಡಿದ ಸಂಘಟಿತ ತಂಡ. ನಮ್ಮ ಗುರಿ ಹೆಚ್ಚು ಕಡಿಮೆ ಅವರ ರಕ್ಷಣಾ ಕೋಟೆಯನ್ನು ಮುರಿಯುವುದು. ನಮಗೆ ಇಲ್ಲಿ ಅದೃಷ್ದ ಅಗತ್ಯವೂ ಬೇಕು. ನಮಗೆ ಏನೇ ಆದರೂ ಇಲ್ಲಿ ಜಯ ಬೇಕು. ಋತುವಿನ ಆರಂ'ದಲ್ಲಿ ಆಗಿದ್ದರೆ ಡ್ರಾ ಸಾಧನೆ ಉತ್ತಮ ಲಿತಾಂಶ ಎನ್ನಬಹುದಾಗಿತ್ತು, ಆದರೆ ನಾಳೆಯ ಪಂದ್ಯದಲ್ಲಿ ಡ್ರಾ ಉತ್ತಮ ಫಲಿತಾಂಶವಲ್ಲ, ' ಎಂದು ಕೊಪ್ಪೆಲ್ ಹೇಳಿದರು.

ಗೋವಾ ವಿರುದ್ಧ ಈ ಹಿಂದೆ ನಡೆದ ಪಂದ್ಯದಲ್ಲಿ 2-2 ಗೋಲುಗಳಿಂದ ಎಟಿಕೆ ಡ್ರಾ ಸಾಧಿಸಿತ್ತು. ಆದರೆ ಇದು ನಿರಾಶದಾಯಕ ಲಿತಾಂಶ. ಪಂದ್ಯದ ಕೊನೆಯ ಕ್ಷಣದಲ್ಲಿ ನೀಡಿದ ಗೋಲು ಲಿತಾಂಶವನ್ನು ಸಮಬಲಗೊಳಿಸಿತ್ತು. ಅಂತಿಮ ಹಂತದಲ್ಲಿ ಎದುರಾಳಿಗೆ ಗೋಲು ನೀಡುವುದನ್ನು ಎಟಿಕೆ ತಪ್ಪಿಸಬೇಕಾಗಿದೆ.

ಅಭಿಮಾನಿಗಳಿಗೆ ಗಾಬರಿ ಬೇಡ, ಕ್ರಿಕೆಟಿಗ ಸುರೇಶ್ ರೈನಾಗೆ ಏನೂ ಆಗಿಲ್ಲಅಭಿಮಾನಿಗಳಿಗೆ ಗಾಬರಿ ಬೇಡ, ಕ್ರಿಕೆಟಿಗ ಸುರೇಶ್ ರೈನಾಗೆ ಏನೂ ಆಗಿಲ್ಲ

ಎಡು ಗಾರ್ಸಿಯಾ ಹಾಗೂ ಮೆನ್ವೆಲ್ ಲಾನ್ಜೆರೋಟ್ ಅವರ ಹೊಂದಾಣಿಕೆಯ ಆಟ ಎಟಿಕೆ ತಂಡದ ಶಕ್ತಿ ಎನಿಸಿದೆ. ಕೋಲ್ಕೊತಾದಲ್ಲಿ ಜೆಮ್ಷೆಡ್ಪುರ ವಿರುದ್ಧ ನಡೆದ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದರು. ಆದರೆ ಗೋವಾ ವಿರುದ್ಧ ಅದೇ ಪ್ರದರ್ಶನ ತೋರುವಲ್ಲಿ ವಿಫಲರಾದರು. ತನ್ನ ಹಳೆಯ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಲು ಲಾನ್ಜೆರೋಟ್ ಉತ್ಸುಕರಾಗಿದ್ದಾರೆ. ಆದರೆ ಲಾನ್ಜೆರೋಟ್ ಅವರಿಗಿಂತ ಗಾರ್ಸಿಯಾ ಅವರು ಅತ್ಯಂತ ಅಪಾಯಕಾರಿ ಆಟಗಾರ ಎಂದು ಲೊಬೆರಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

'ನಾವು ಉತ್ತಮವಾದ ತಂಡವೊಂದನ್ನು ಎದುರಿಸುತ್ತಿದ್ದೇವೆ ಎಂದೆನಿಸುತ್ತಿದೆ. ಆದರೆ ನಾನು ನನ್ನ ತಂಡದ ಆಟಗಾರರ ಬಗ್ಗೆ ಮಾತ್ರ ಮಾತನಾಡಬಲ್ಲೆ, ಯಾವುದೇ ವೈಯಕ್ತಿಕ ಆಟಗಾರನನ್ನು ಸೋಲಿಸುವುದು ನಮ್ಮ ಗುರಿಯಲ್ಲ, ಬದಲಾಗಿ ತಂಡವೊಂದನ್ನು ಸೋಲಿಸುವುದು ನಮ್ಮ ಗುರಿ. ಆ ತಂಡದಲ್ಲಿ ಎಡುಗಾರ್ಸಿಯಾ ಉತ್ತಮವಾಗಿ ಆಡುತ್ತಿದ್ದಾರೆ,' ಎಂದು ಲೊಬೆರಾ ಹೇಳಿದ್ದಾರೆ.

Story first published: Wednesday, February 13, 2019, 22:02 [IST]
Other articles published on Feb 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X