ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ಬಹಳ ಕಷ್ಟಕರ ವರ್ಷ, 6 ತಿಂಗಳಿನಿಂದ ಮನೆಯಲ್ಲಿರಲಿಲ್ಲ: ಹೋಲ್ಡರ್

It has been a tough year, haven’t been home in six months: Jason Holder

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇನ್ನಿಂಗ್ಸ್‌ ಸಹಿತ 12 ರನ್ ಸೋಲನುಭವಿಸಿದೆ. ಈ ಪಂದ್ಯದ ಮುಕ್ತಾಯದೊಂದಿಗೆ ವೆಸ್ಟ್ ಇಂಡೀಸ್‌ ತಂಡದ 2020ರ ಸೀಸನ್ ಮುಕ್ತಾಯಗೊಂಡಿದೆ. ಕೊರೊನಾ ಕಾರಣದಿಂದ ಈ ವರ್ಷ ಬಹಳ ಕಷ್ಟಕರವಾಗಿದ್ದರಿಂದ ಆಟಗಾರರಿಗೆ ಒಂದಿಷ್ಟು ವಿಶ್ರಾಂತಿ ಬೇಕಾಗಿದೆ ಎಂದು ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

ಪೂಜಾರ ಮತ್ತೆ ಲಯಕ್ಕೆ ಮರಳಲು ಸಮಯ ತೆಗೆದುಕೊಳ್ಳಬಹುದು: ಲಕ್ಷ್ಮಣ್ಪೂಜಾರ ಮತ್ತೆ ಲಯಕ್ಕೆ ಮರಳಲು ಸಮಯ ತೆಗೆದುಕೊಳ್ಳಬಹುದು: ಲಕ್ಷ್ಮಣ್

3 ಪಂದ್ಯಗಳ ಟಿ20ಐ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿತ್ತು. ಇದರಲ್ಲಿ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 2-0ಯ ಜಯ ಗಳಿಸಿದ್ದರೆ (1 ಪಂದ್ಯ ಮಳೆಯಿಂದ ರದ್ದು), ಟೆಸ್ಟ್‌ನಲ್ಲೂ ಕಿವೀಸ್ 2-0 ವಿಜಯ ದಾಖಲಿಸಿದೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ.

ಪ್ರವಾಸದ ಎರಡೂ ಸರಣಿಗಳಲ್ಲಿ ತಂಡದ ನೀರಸ ಪ್ರದರ್ಶನದ ಬಗ್ಗೆ ಆಲ್ ರೌಂಡರ್ ಜೇಸನ್ ಹೋಲ್ಡರ್ ಮಾತನಾಡಿದ್ದಾರೆ. 'ಸ್ನೇಹಿತನೆ, ಇದು ಬಹಳ ಕಠಿಣ ವರ್ಷ. ಕೊರೊನಾ ಪಿಡುಗಿನ ಮಧ್ಯೆಯೂ ತನ್ನ ಆರೋಗ್ಯದ ವಿಚಾರದಲ್ಲಿ ಮತ್ತು ವಿಶ್ವದುದ್ದಗಲಕ್ಕೆ ಪ್ರಯಾಣಿಸಿ ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡವರಿಗೆ ಮೆಚ್ಚುಗೆ ಸಲ್ಲಿಸಬೇಕು,' ಎಂದು ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಹೋಲ್ಡರ್ ಹೇಳಿದ್ದಾರೆ.

ಗಾಯಗೊಂಡ ವೇಗಿ ಶಾನ್ ಅಬಾಟ್ ಆಸಿಸ್ ತಂಡದಿಂದ ಹೊರಕ್ಕೆ, ಮೋಯ್ಸಿಸ್ ಸೇರ್ಪಡೆಗಾಯಗೊಂಡ ವೇಗಿ ಶಾನ್ ಅಬಾಟ್ ಆಸಿಸ್ ತಂಡದಿಂದ ಹೊರಕ್ಕೆ, ಮೋಯ್ಸಿಸ್ ಸೇರ್ಪಡೆ

'ಇದು ಕಠಿಣ ವರ್ಷ. ತಂಡಕ್ಕೆ ಮಾತ್ರ ಅಲ್ಲ, ವೈಯಕ್ತಿಕವಾಗಿ ನನಗೂ ಗೊತ್ತಿದೆ. ನಾನು ಇಂದಿಗೆ 6 ತಿಂಗಳಿನಿಂದ ಮನೆಯನ್ನು ನೋಡಿಲ್ಲ. ನಿರಂತರವಾಗಿ ನಾವು ಪಂದ್ಯಗಳನ್ನಾಡುತ್ತಿದ್ದೇವೆ. ನಮಗೆ ವೇತನ ಕಡಿತವೂ ಮಾಡಲಾಗಿದೆ,' ಎಂದು ಹೋಲ್ಡರ್ ಹೇಳಿದ್ದಾರೆ. ಕೊರೊನಾ ಬಳಿಕ ನಡೆದ ಚೊಚ್ಚಲ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಆಡಿತ್ತು. ಆವತ್ತು ವಿಂಡೀಸ್ ಇಂಗ್ಲೆಂಡ್‌ಗೆ ಪ್ರವಾಸ ಹೋಗಿತ್ತು.

Story first published: Monday, December 14, 2020, 16:20 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X