ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ 100 ಟೆಸ್ಟ್ ಪಂದ್ಯವನ್ನಾಡುವ ಬಯಕೆ ಇತ್ತು, ಆದ್ರೆ ಇವರಿಂದ ಸಾಧ್ಯವಾಗಿಲ್ಲ: ಯುವರಾಜ್ ಸಿಂಗ್‌

Yuvraj singh

ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಆಟಗಾರರರಲ್ಲಿ ಒಬ್ಬರಾದ ಯುವರಾಜ್ ಸಿಂಗ್‌ ವೈಟ್ ಬಾಲ್ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಹ ಆಟಗಾರ. 2007ರ ಟಿ20 ವಿಶ್ವಕಪ್‌ ಹಾಗೂ 2011ರ ಐಸಿಸಿ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್ 304 ಏಕದಿನ ಪಂದ್ಯವನ್ನಾಡಿದ್ದು, 58 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಜರ್ಸಿ ತೊಟ್ಟಿದ್ದಾರೆ. ತಮ್ಮ ಅಮೋಘ ಬ್ಯಾಟಿಂಗ್‌ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿದ್ದ ಯುವರಾಜ್ ಸಿಂಗ್ ಭಾರತ ಕ್ರಿಕೆಟ್‌ನ ಫ್ಲೇಮ್‌ಬಾಯ್ ಕ್ರಿಕೆಟರ್.

2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪದಾರ್ಪಣೆ

2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪದಾರ್ಪಣೆ

ಯುವರಾಜ್ ಸಿಂಗ್ 2003ರಲ್ಲಿ ಮೊಹಾಲಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. 40 ಟೆಸ್ಟ್ ಪಂದ್ಯಗಳನ್ನಾಡಿರುವ ಯುವಿ 33.92ರ ಬ್ಯಾಟಿಂಗ್ ಸರಾಸರಿಯಲ್ಲಿ 1900 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 11 ಅರ್ಧಶತಕಗಳು ಒಳಗೊಂಡಿವೆ.

ಆದ್ರೆ ಯುವರಾಜ್ ಸಿಂಗ್‌ ಹೇಳುವಂತೆ ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಇನ್ನೂ ಹೆಚ್ಚಿನ ಪಂದ್ಯಗಳನ್ನಾಡಬೇಕಿತ್ತು ಎಂಬ ಬಯಕೆ ಹೊಂದಿದ್ದರು.

''ಪ್ರಸಕ್ತ ಕ್ರಿಕೆಟ್ ಫಾರ್ಮೆಟ್‌ಗಳಲ್ಲಿ ಆಟಗಾರರ ಪ್ರದರ್ಶನ ನೋಡಿದ್ರೆ, ಆಟಗಾರರು 10 ರಿಂದ 15 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಆದ್ರೆ ನಾನು ಆಡುವಾಗ ಭಾರತದ ಮಧ್ಯಮ ಕ್ರಮಾಂಕ ತುಂಬಾನೆ ಸ್ಟ್ರಾಂಗ್ ಆಗಿತ್ತು ಎಂದು ಸ್ಪೋರ್ಟ್ಸ್‌ 18ನಲ್ಲಿ ನಡೆಸುವ ''ಹೋಮ್ ಆಫ್ ಹೀರೋಸ್'' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

'' ಆ ಯುಗವನ್ನು ನೀವು ಗಮನಿಸಿದ್ರೆ, ವೀರೂ ಓಪನಿಂಗ್ ಮಾಡುತ್ತಿದ್ದ ರೀತಿಯಲ್ಲಿ ನೀವು ಕಾಣಬಹುದು. ಆ ನಂತರ ದ್ರಾವಿಡ್, ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಹೀಗೆ ಸಾಲು ಸಾಲು ಘಟಾನುಘಟಿ ಆಟಗಾರರಿದ್ದರು. ನಾನು ಲಾಹೋರ್‌ನಲ್ಲಿ ಶತಕ ಹೊಡೆತ ನಂತರ , ಮುಂದಿನ ಟೆಸ್ಟ್‌ನಲ್ಲಿ ನನಗೆ ಓಪನಿಂಗ್ ಮಾಡಲು ಹೇಳಲಾಯಿತು'' ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

IPL 2022: ಅಂಪೈರ್‌ ತೀರ್ಪಿನ ವಿರುದ್ಧ ಸಂಜು ಸ್ಯಾಮ್ಸನ್ ಪ್ರತಿಭಟನೆ, ವೈಡ್‌ಗೂ DRS ರಿವೀವ್

ಓಪನಿಂಗ್‌ನಲ್ಲಿ ಅಷ್ಟು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ

ಓಪನಿಂಗ್‌ನಲ್ಲಿ ಅಷ್ಟು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ

ಯುವರಾಜ್ ಸಿಂಗ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಕ್ರಿಕೆಟ್ ಕೆರಿಯ್ ಆರಂಭಿಸಿದ್ರು. ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮುಲ್ತಾನ್‌ನಲ್ಲಿ 59 ರನ್ ಕಲೆಹಾಕಿದೆ. ನಂತರದ ಪಂದ್ಯದಲ್ಲಿ ಲಾಹೋರ್‌ನಲ್ಲಿ 112 ರನ್ ಕಲೆಹಾಕಿದೆ.

2004ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿ ರಾವಲ್ಪಿಂಡಿಯಲ್ಲಿ 119 ಎಸೆತಗಳಲ್ಲಿ 47 ರನ್‌ ಕಲೆಹಾಕಿದೆ. ಅದಾಗಿ ಂದು ವರ್ಷದಲ್ಲಿ ಶ್ರೀಲಂಕಾ ವಿರುದ್ಧ 70, ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ 122 ರನ್ ಸಿಡಿಸಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಹಿಂದೂ ಎಂಬ ಕಾರಣಕ್ಕೆ ಪಾಕ್ ತಂಡದಲ್ಲಿ ಕೆಟ್ಟದಾಗಿ ನಡೆಸಿಕೊಂಡರು: ಅಫ್ರಿದಿ ಬಣ್ಣ ಬಯಲು ಮಾಡಿದ ಸಹ ಆಟಗಾರ!

ಉತ್ತಮ ಆರಂಭವನ್ನ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲಿಲ್ಲ: ಯುವಿ

ಉತ್ತಮ ಆರಂಭವನ್ನ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲಿಲ್ಲ: ಯುವಿ

ಟೀಂ ಇಂಡಿಯಾದಲ್ಲಿದ್ದ ಬಲಿಷ್ಠ ಮಧ್ಯಮ ಕ್ರಮಾಂಕದ ಸ್ಪರ್ಧೆಯ ನಡುವೆ ನಾನು ಉತ್ತಮ ಆರಂಭವನ್ನ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗದೇ ಇದ್ದಿದ್ದು, ನನ್ನ ಟೆಸ್ಟ್ ಕೆರಿಯರ್‌ಗೆ ಹೊಡೆತ ನೀಡಿತು ಎಂದು ಯುವರಾಜ್ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಹುಬೇಗ ಟೆಸ್ಟ್‌ನಲ್ಲಿ ಅವಕಾಶ ಮುಗಿಯಿತು ಎಂದರು.

''ಅಂತಿಮವಾಗಿ, ದಾದಾ ನಿವೃತ್ತಿಯ ನಂತರ ನಾನು ಟೆಸ್ಟ್ ಕ್ರಿಕೆಟ್ ಆಡಲು ಅವಕಾಶಗಳನ್ನು ಪಡೆದಾಗ, ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು" ಎಂದು ಅವರು ಹೇಳಿದರು.

''ಇದು ನನ್ನ ಬ್ಯಾಡ್ ಲಕ್ ಆಗಿತ್ತು. 24*7 ರೀತಿಯಲ್ಲಿ ನಾನು ಪ್ರಯತ್ನಿಸಿದೆ. ನಾನು 100 ಟೆಸ್ಟ್ ಪಂದ್ಯಗಳನ್ನಾಡಬೇಕಿತ್ತು. ಆ ಫಾಸ್ಟ್‌ ಬೌಲರ್‌ಗಳನ್ನ ಎದುರಿಸಿ ಎರಡು ದಿನಗಳ ಕಾಲ ಬ್ಯಾಟ್‌ ಮಾಡಬೇಕಿತ್ತು. ನಾನು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದೆ. ಆದ್ರೆ ಸಾಧ್ಯವಾಗಲಿಲ್ಲ'' ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಯುವರಾಜ್ ಸಿಂಗ್ ಕೊನೆಯ ಬಾರಿಗೆ ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದು 2012ರಲ್ಲಿ , ಇದು ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಬ್ಲ್ಯೂ ಜರ್ಸಿ ಪಂದ್ಯವನ್ನಾಡುವುದಕ್ಕೂ ಐದು ವರ್ಷ ಮೊದಲು.

Story first published: Saturday, May 7, 2022, 18:37 [IST]
Other articles published on May 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X