ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಣಬೇಧದ ವಿರುದ್ಧ ಧ್ವನಿಯೆತ್ತಿ, ಯಾಕಂದ್ರೆ ಅದು ತಪ್ಪು: ಜೋಫ್ರಾ ಆರ್ಚರ್

It Is Not Okay, Speak Out Athletes, Says England Fast Bowler Jofra Archer

ಇಂಗ್ಲೆಂಡ್‌ನ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಜನಾಂಗೀಯ ನಿಂದನೆ ಅನುಭವಿಸಿದ ಕ್ರೀಡಾಪಟುಗಳು ಧ್ವನಿ ಎತ್ತಬೇಕು ಎಂದಿದ್ದಾರೆ. ಅಮೆರಿಕಾದಲ್ಲಿ ವರ್ಣಬೇಧದ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಪೊಲೀಸ್ ಅಧಿಕಾರಿ ಮೊಣಕಾಲಿನಿಂದ ಉಸಿರುಗಟ್ಟಿಸಿ ಕೊಂದ ಬಳಿಕ ಈ ಬಗ್ಗೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಚರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಡೈಲಿ ಮೇಲ್‌ಗೆ ಬರೆದಿರುವ ಅಂಕಣದಲ್ಲಿ ಈ ವಿಚಾರವನ್ನು ಆರ್ಚರ್ ಪ್ರಸ್ತಾಪಿಸಿದ್ದಾರೆ. 'ಬ್ಲಾಕ್ ಲೈವ್ಸ್ ಮ್ಯಾಟರ್' ಅಭಿಯಾನ ಸಾಕಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದಕ್ಕಾಗಿ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ ಜೋಫ್ರಾ ಆರ್ಚರ್.

ನೆಚ್ಚಿನ ನಾಯಕನನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ಆದರೆ ಅದು ವಿರಾಟ್ ಕೊಹ್ಲಿ ಅಲ್ಲ!ನೆಚ್ಚಿನ ನಾಯಕನನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ: ಆದರೆ ಅದು ವಿರಾಟ್ ಕೊಹ್ಲಿ ಅಲ್ಲ!

ಜೋಫ್ರಾ ಆರ್ಚರ್ ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದರು. ಪ್ರೇಕ್ಷಕನೋರ್ವ ಆರ್ಚರ್ ಅವರನ್ನು ಗುರಿಯಾಗಿಸಿ ನಿಂದಿಸಿದ್ದ. ಈ ವಿಚಾರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಬಳಿಕ ಆರೋಪಿಯನ್ನು ನ್ಯೂಜಿಲೆಂಡ್ ಸರ್ಕಾರ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಓರ್ವ ವ್ಯಕ್ತಿಯಾಗಿ ಈ ರೀತಿಯ ಘಟನೆಗಳ ವಿರುದ್ಧ ನಾನು ಯಾವಾಗಲೂ ಧ್ವನಿ ಎತ್ತುತ್ತೇನೆ. ನಿಮಗೆ ಕೆಟ್ಟದು ಆಗುತ್ತಿದೆ ಎಂದು ಅನಿಸಿದರೆ ನೀವು ಧ್ವನಿಎತ್ತಬೇಕು. ಇಂತಾ ವಿಚಾರಗಳನ್ನು ಮುಚ್ಚಿಟ್ಟುಕೊಂಡಿರುವುದು ಸರಿಯಲ್ಲ. ಯಾಕೆಂದರೆ ವರ್ಣಬೇಧ ನೀತಿ ಸರಿಯಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್

ಇಂಗ್ಲೆಂಡ್ ತಂಡದ ಪರವಾಗಿ 7 ಟೆಸ್ಟ್ ಮತ್ತು 14 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಆರ್ಚರ್ ತಮ್ಮ ತಂಡದಲ್ಲಿರುವ ವೈವಿಧ್ಯತೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ. 2019 ರ ವಿಶ್ವಕಪ್ ಸಂದರ್ಭದಲ್ಲಿ ನನ್ನ, ಜೋಸ್ ಬಟ್ಲರ್ ಮತ್ತು ಆದಿಲ್ ರಶೀದ್ ಸಂಭ್ರಮಾಚರಣೆಯಲ್ಲಿ ಒಂದು ಚಿತ್ರ ಇತ್ತು. ನಮ್ಮ ತಂಡದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಇದು ನಿಮಗೆ ತಿಳಿಸಿದೆ "ಎಂದು ಆರ್ಚರ್ ತಂಡ ವೈವಿಧ್ಯತೆಯ ಬಗ್ಗೆಯೂ ಬರೆದುಕೊಂಡಿದ್ದಾರೆ.

Story first published: Monday, June 8, 2020, 14:22 [IST]
Other articles published on Jun 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X