ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯ ಬೆಳವಣಿಗೆ ನೋಡುತ್ತಾ ಬಂದಿರುವುದು ನನಗೆ ಹೆಮ್ಮೆ: ಕೇನ್ ವಿಲಿಯಮ್ಸನ್

Its Been Great To Meet Virat Kohli At A Young Age : Kane Williamson

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅವರೊಂದಿಗೆ ಆಟವಾಡಿದ್ದು ನನ್ನ ಅದೃಷ್ಟ ಎಂದು ಕೀವಿಸ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬಣ್ಣಿಸಿದ್ದಾರೆ.

ಕೇನ್ ವಿಲಿಯಮ್ಸನ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಡರ್19 ವಿಶ್ವಕಪ್ ಕಾಲದಿಂದಲೂ ತಮ್ಮ ರಾಷ್ಟ್ರಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರಸಕ್ತ ಕಾಲದ ಇಬ್ಬರು ಶ್ರೇಷ್ಠ ಆಟಗಾರರು ಒಬ್ಬರನ್ನೊಬ್ಬರು ಸಾಕಷ್ಟು ಗೌರವಿಸುತ್ತಾ ಗೆಳೆತನವನ್ನು ಮುಂದುವರಿಸಿಕೊಂಡಿ ಬಂದಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇನ್ ವಿಲಿಯಮ್ಸನ್ ಬಗ್ಗೆ ಹಲವು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.

ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೇನ್ ವಿಲಿಯಮ್ಸನ್, ಪರಸ್ಪರ ವಿರುದ್ಧವಾಗಿ ನಾವುಬ್ಬರೂ ಆಡಿದ್ದು ಅದೃಷ್ಟ. ವಿರಾಟ್ ಕೊಹ್ಲಿಯನ್ನು ಸಣ್ಣ ವಯಸ್ಸಿನಲ್ಲೇ ಭೇಟಿಯಾಗಿ ಆತನ ಬೆಳವಣಿಗೆಯನ್ನು ಗಮನಿಸಿಕೊಂಡು ಬರುತ್ತಿರುವುದು ನನಗೆ ಹೆಮ್ಮೆಯೆನಿಸುತ್ತಿದೆ ಎಂದಿದ್ದಾರೆ.

ಇಬ್ಬರೂ ಪರಸ್ಪರ ವಿರುದ್ಧವಾಗಿ ಸಾಕಷ್ಟು ಸುದೀರ್ಘ ಸಮಯದಿಂದ ಆಡಿಕೊಂಡು ಬರುತ್ತಿರುವುದು ಕುತೂಹಲಕಾರಿಯಾಗಿದೆ ಎಂದು ಸ್ವತಃ ವಿಲಿಯಮ್ಸನ್ ಹೇಳಿದ್ದಾರೆ. ಅದರಲ್ಲೂ ವಿಭಿನ್ನ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದರೂ ನಾವಿಬ್ಬರೂ ಕೆಲ ಸಾಮ್ಯತೆಗಳನ್ನು ಕಂಡುಕೊಂಡಿದ್ದೇವೆ. ಕಳೆದ ಕೆಲ ವರ್ಷಗಳಲ್ಲಿ ಆಟದಲ್ಲಿ ಕೆಲ ಪ್ರಾಮಾಣಿಕ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ ಎಂದಿದ್ದಾರೆ.

ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಕೀವಿಸ್ ತಂಡವನ್ನು ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಾಗ ಕೇನ್ ವಿಲಿಯಮ್ಸನ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಕೇನ್ ನಾಯಕತ್ವದಿಂದ ಕೆಳಗಿಳಿಯಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ಕೀವಿಸ್ ನಾಯಕನ ಪರವಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದರು, ನಾಯಕನಾಗಿ ಅದ್ಭುತವಾಗಿ ಕೇನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಸೋಲಿಗೂ ನಾಯಕನನ್ನು ಹೊಣೆ ಮಾಡುವುದು ಸರಿಯಲ್ಲ ಎಂದಿದ್ದರು.

Story first published: Monday, June 8, 2020, 13:54 [IST]
Other articles published on Jun 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X