ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!

Its for ICC to decide whether Motera pitch is fit for purpose: Joe Root

ಅಹ್ಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಅಹ್ಮದಾಬಾದ್‌ನ ಸ್ಟೇಡಿಯಂ ಪಾತ್ರವಾಗಿದೆ. ಈ ಸ್ಟೇಡಿಯಂನಲ್ಲಿ ಏಕಕಾಲಕ್ಕೆ 110000 ಮಂದಿ ಕುಳಿತುಕೊಳ್ಳಲು ವ್ಯವಸ್ಥೆಯಿದೆ. ಇದೇ ಸ್ಟೇಡಿಯಂನಲ್ಲಿ ಒಲಿಂಪಿಕ್ ಗಾತ್ರದ ಸ್ವಿಮ್ಮಿಂಗ್‌ ಪೂಲ್, ಸ್ಕ್ವಾಶ್ ಅರೆನಾ, ಬ್ಯಾಡ್ಮಿಂಟನ್ ಮತ್ತು ಟೆನಿಸ್ ಕೋರ್ಟ್‌ಗಳು ಕೂಡ ಇವೆ. ಆದರೂ ಈ ಸ್ಟೇಡಿಯಂನ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ. ಸ್ಟೇಡಿಯಂನ ಹೆಸರು ಬದಲಾವಣೆ ಮತ್ತು ಪಿಚ್ ಈಗ ವಿವಾದಕ್ಕೆ ಕಾರಣವಾಗಿದೆ.

 ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್! ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್!

ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ಈ ಸ್ಟೇಡಿಯಂಗೆ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಟೇಡಿಯಂ ಎಂದು ಹೆಸರಿಡಲಾಗಿತ್ತು. ಆದರೆ ಇತ್ತೀಚೆಗೆ ಇದೇ ಸ್ಟೇಡಿಯಂನ ಹೆಸರು ಬದಲಾಯಿಸಿ 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಮರು ನಾಮಕರಣ ಮಾಡಲಾಗಿತ್ತು.

ಭಾರತ vs ಇಂಗ್ಲೆಂಡ್: 4 ಬೃಹತ್ ದಾಖಲೆ ಬರೆದ ಅಕ್ಷರ್ ಪಟೇಲ್ಭಾರತ vs ಇಂಗ್ಲೆಂಡ್: 4 ಬೃಹತ್ ದಾಖಲೆ ಬರೆದ ಅಕ್ಷರ್ ಪಟೇಲ್

ಬರೀ ಹೆಸರು ಬದಲಾವಣೆಯಷ್ಟೇ ಅಲ್ಲ, ಮೊಟೆರಾ ಸ್ಟೇಡಿಯಂ ಇನ್ನೊಂದಿಷ್ಟು ಕಾರಣಗಳಿಗೆ ಚರ್ಚೆಗೀಡಾಗಿದೆ. 'ಮೊಟೆರಾ' ಬಗ್ಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

# ಅದಾನಿ ಎಂಡ್, ರಿಲಯನ್ಸ್ ಎಂಡ್!

ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಮೊಟೆರಾದ ಹೆಸರು ಬದಲಾವಣೆ ಚರ್ಚೆಗೀಡು ಮಾಡಿತ್ತು. ಆಡಳಿತ ಸರ್ಕಾರದ ಈ ನಿಲುವು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಸ್ಟೇಡಿಯಂನ ಬೌಲಿಂಗ್ ಎಂಡ್‌ಗಳನ್ನು ಅದಾನಿ ಎಂಡ್ ಮತ್ತು ರಿಲಯನ್ಸ್ ಎಂಡ್ ಎಂದು ಹೆಸರಿಸಿರುವುದೂ ಕೂಡ ವಿವಾದ ಸೃಷ್ಠಿಸಿತ್ತು. ಬೌಲರ್‌ಗಳು ಬೌಲಿಂಗ್ ಮಾಡುವ ಕೊನೆಗಳನ್ನು ಅಥವಾ ದಿಕ್ಕನ್ನು ಹೀಗೆ ಎಂಡ್‌ಗಳೆಂದು ಕರೆಯಲಾಗುತ್ತದೆ.

# ರಿಲಯನ್ಸ್, ಅದಾನಿ ಬಂದಿದ್ಹೇಗೆ?!

# ರಿಲಯನ್ಸ್, ಅದಾನಿ ಬಂದಿದ್ಹೇಗೆ?!

ಕೇಂದ್ರ ಸರ್ಕಾರ ಈಗಾಗಲೇ ದೇಶದ ಪ್ರಮುಖ ಸಂಸ್ಥೆಗಳನ್ನು, ಕ್ಷೇತ್ರಗಳನ್ನು ಉದ್ಯಮಿಗಳಾದ ಅನಿಲ್ ಅಂಬಾನಿ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಗೆ ಧಾರೆಯೆರೆಯುತ್ತ 'ನಾವಿಬ್ಬರು-ನಮಗಿಬ್ಬರು' ಎಂದು ಗೇಲಿಗೀಡಾಗುತ್ತಿದೆ. ಈ ಮಧ್ಯೆ, ನರೇಂದ್ರ ಮೋದಿ ಸ್ಟೇಡಿಯಂ ಒಳಗೆ ರಿಲಯನ್ಸ್, ಅದಾನಿ ಎಂಟ್ರಿ ಕೊಟ್ಟಿದ್ದು ಕೂಡ ಅಪಸ್ವರಕ್ಕೆ ಕಾರಣವಾಗಿದೆ. ಆದರೆ ಇದಕ್ಕೊಂದು ಕಾರಣವಿದೆ. ಮೊಟೆರಾ ಸ್ಟೇಡಿಯಂನ ಎರಡು ದಿಕ್ಕಿನಲ್ಲಿರುವ ಕಾರ್ಪೊರೇಟ್ ಬಾಕ್ಸ್ (ವೀಕ್ಷಕರ ಗ್ಯಾಲರಿ)ಗಳನ್ನು ಮುಂದಿನ 25 ವರ್ಷಗಳವರೆಗೆ ರಿಲಯನ್ಸ್ ಮತ್ತು ಅದಾನಿ ಗ್ರೂಪ್ 250 ಕೋ.ರೂ.+ಜಿಎಸ್‌ಟಿಗೆ ಕೊಂಡುಕೊಂಡಿದೆ. ಹೀಗಾಗಿ ಸ್ಟೇಡಿಯಂಗೆ ದೊಡ್ಡ ಮಟ್ಟದ ದೇಣಿಗೆ ನೀಡಿದವರ ಇಚ್ಛೆಯಂತೆ, ಎಂಡ್‌ಗಳಿಗೆ ಅವರ ಹೆಸರುಗಳನ್ನೇ ಇಡಲಾಗಿದೆ.

# ಜೋ ರೂಟ್ ಹೇಳಿದ್ದೇನು?!

# ಜೋ ರೂಟ್ ಹೇಳಿದ್ದೇನು?!

ಭಾರತ-ಇಂಗ್ಲೆಂಡ್ ತೃತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಸೋಲು ಕಂಡ ಬಳಿಕ ಆಂಗ್ಲ ನಾಯಕ ಜೋ ರೂಟ್ ಪಿಚ್‌ ಬಗ್ಗೆ ಮಾತನಾಡಿದ್ದಾರೆ. 'ನನಗನ್ನಿಸುತ್ತದೆ, ಇಲ್ಲಿನ ಪಿಚ್‌ ಒಂದು ಸವಾಲಾಗಿದೆ. ಈ ಪಿಚ್‌ನ ಮೇಲೆ ಆಡೋದು ಬಲು ಕಷ್ಟವಾಗಿದೆ. ಹಾಗಂತ ಇಲ್ಲಿ ಆಡುವುದಕ್ಕೆ ಈ ಪಿಚ್ ಯೋಗ್ಯವೇ ಅನ್ನೋದನ್ನು ಆಟಗಾರರು ನಿರ್ಧರಿಸುವಂತಿಲ್ಲ. ಇದನ್ನು ನಿರ್ಧರಿಸಬೇಕಾದ್ದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ). ಆಟಗಾರರಾಗಿ ನಾವು ಎದುರಾಳಿಗೆ ಸ್ಪರ್ಧೆಯೊಡ್ಡುವುದನ್ನು ಮತ್ತು ನಮ್ಮ ಅತ್ಯುತ್ತಮ ಆಟವನ್ನು ನೀಡಲು ಯತ್ನಿಸಬಹುದಷ್ಟೇ,' ಎಂದು ರೂಟ್ ಹೇಳಿಕೊಂಡಿದ್ದಾರೆ.

# ಇಂಗ್ಲೆಂಡ್‌ಗೆ ಹೀನಾಯ ಸೋಲು

# ಇಂಗ್ಲೆಂಡ್‌ಗೆ ಹೀನಾಯ ಸೋಲು

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಆತಿಥೇಯ ಭಾರತದ ವಿರುದ್ಧ 4 ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಇದರಲ್ಲಿ 3 ಪಂದ್ಯಗಳು ಮುಗಿದಿದ್ದು ಸರಣಿ 2-1ರಿಂದ ಭಾರತದ ವಶವಾಗಿದೆ. ಮೊಟೆರಾದಲ್ಲಿ ನಡೆದ 3ನೇ ಟೆಸ್ಟ್‌ (ಡೇ-ನೈಟ್ ಟೆಸ್ಟ್‌)ನಲ್ಲಂತೂ ಇಂಗ್ಲೆಂಡ್ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 112-10 (48.4 Ov), ದ್ವಿತೀಯ ಇನ್ನಿಂಗ್ಸ್‌ನಲ್ಲಿ 81-10 (30.4 Ov) ಸ್ಕೋರ್‌ ಮಾಡಿದ್ದರೆ, ಭಾರತ 145-10 (53.2 Ov), 49-0 (7.4 Ov) ರನ್ ಗಳಿಸಿ ಗೆಲುವನ್ನಾಚರಿಸಿತ್ತು. ಭಾರತದ ಅಕ್ಸರ್ ಪಟೇಲ್ 6+5, ಆರ್ ಅಶ್ವಿನ್ 3+4 ವಿಕೆಟ್‌ನೊಂದಿಗೆ ಬೌಲಿಂಗ್ ಪಾರಮ್ಯ ಮೆರೆದಿದ್ದರು.

Story first published: Friday, February 26, 2021, 8:46 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X