ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದೊಂದು ದುರದೃಷ್ಟಕರ ಸಂದರ್ಭ: ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಯುವಿ ಮಾತು

It was an unfortunate time’ - Yuvraj Singh opens up on battle against cancer

ಖಾಸಗೀ ಕಾರ್ಯಕ್ರಮವೊಂದರಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಅಲ್‌ರೌಂಡರ್ ಪ್ರದರ್ಶನ ನೀಡಿ ಮಿಂಚಿದ್ದ ಯುವರಾಜ್ ಸಿಂಗ್ ಆ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಮೂಲಕ ಭಾರತ ಎರಡನೇ ಬಾರುಗೆ ವಿಶ್ವಕಪ್ ಎತ್ತಿ ಹಿಡಿಯಲು ಕಾರಣರಾಗಿದ್ದರು.

ವಿಶ್ವಕಪ್ ಗೆಲುವಿನ ಸಂತಸದಲ್ಲಿದ್ದ ಯುವರಾಜ್ ಸಿಂಗ್‌ಗೆ ಈ ಖುಷಿಯ ಬೆನ್ನಿಗೇ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕ್ರಿಕೆಟ್‌ನಿಂದ ಕೆಲ ಕಾಲ ದೂರವುಳಿದ ಯುವಿ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ತನ್ನ ಮನಸ್ಥಿತಿಯ ಬಗ್ಗೆ ಯುವರಾಜ್ ಹೇಳಿಕೊಂಡಿದ್ದಾರೆ.

ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟರ್ ಹೇಳಿದ 'ಆಲ್ ಟೈಮ್ ಬೆಸ್ಟ್ ಕ್ಯಾಪ್ಟನ್'ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟರ್ ಹೇಳಿದ 'ಆಲ್ ಟೈಮ್ ಬೆಸ್ಟ್ ಕ್ಯಾಪ್ಟನ್'

ನಿಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟಕರ. ಕ್ರಿಕೆಟ್ ವೃತ್ತಿಯ ಕಾರಣದಿಂದಾಗಿ ಆರಮಭದಲ್ಲಿ ನಾನು ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದೆ. ಆದರೆ ಅಂತಿಮವಾಗಿ ಇದು ನನ್ನ ಬದುಕಿನ ಪ್ರಶ್ನೆಯಾಗಿತ್ತು. ಅದೊಂದು ದುರದೃಷ್ಟಕರ ಸಂದರ್ಭ ಎಂದು ಯುವರಾಜ್ ಪ್ರತಿಕ್ರಿಯಿಸಿದ್ದಾರೆ.

"ಮರಳಿ ಕ್ರಿಕೆಟ್ ಆಡುವ ಉದ್ದೇಶದಿಂದ ನಾನು ಇಡೀ ಪ್ರಯಾಣದಲ್ಲಿಮುನ್ನುಗ್ಗಿದೆ. ಈಗ ನಾನು 'ಯುವಿಕಾನ್' ಎಂಬ ಎನ್‌ಜಿಒವನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ಇದು ನನಗೆ ತುಂಬಾ ಖುಷಿ ನೀಡಿದೆ. ಈ ಮೂಲಕ ಸಮಾಜದಲ್ಲಿ ಜನರಿಗೆ ಸಹಾಯ ಮಾಡುವುದು ನನ್ನ ಮುಖ್ಯ ಉದ್ದೇಶವಾಯಿತು" ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

ಯುವರಾಜ್ ಸಿಂಗ್ ಫಿವರ್ ನೆಟ್‌ವರ್ಕ್‌ ಹೊಸದಾಗಿ ಆರಂಭಿಸಿದ 'ಬೌನ್ಸ್ ಬ್ಯಾಕ್ ಭಾರತ್" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸರಣಿಯ ಮೂರನೇ ಭಾಗದಲ್ಲಿ ಯುವಾಜ್ ಸಿಂಗ್ ಪಾಲ್ಗೊಂಡಿದ್ದರು. ಮೊದಲ ಎರಡು ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್ ಹಾಗೂ ಶಿಖರ್ ಧವನ್ ಪಾಲ್ಗೊಂಡಿದ್ದರು.

Story first published: Saturday, October 10, 2020, 10:01 [IST]
Other articles published on Oct 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X