ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಎರಡು ಬಾರಿ ಕೊಹ್ಲಿ ವಿಕೆಟ್ ಪಡಿದಿರುವುದು ಶ್ರೇಷ್ಠ ಅನುಭವ: ಕೈಲ್ ಜೇಮಿಸನ್

It Was great to Pick Virat Kohlis Wicket Twice in the WTC Final said Kyle Jamieson
RCB ಕ್ಯಾಂಪ್ ನಲ್ಲಿ ಕೊಹ್ಲಿಗೆ ಬೌಲ್ ಮಾಡಿದ್ದು ಕೊನೆಗೂ ಉಪಯೋಗ ಅಯ್ತು | oneindia kannada

ಸೌಥಾಂಪ್ಟನ್, ಜೂನ್ 24: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು ಆಲ್‌ರೌಂಡರ್ ಕೈಲ್ ಜೇಮಿಸನ್. ಒಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಹಿನ್ನಡೆಗೆ ಕಾರಣರಾದರು. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್‌ಅನ್ನು ಎರಡು ಇನ್ನಿಂಗ್ಸ್‌ನಲ್ಲಿಯೂ ಜೇಮಿಸನ್‌ಗೆ ಪಡೆಯುವ ಮೂಲಕ ಮಿಂಚಿದರು.

ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ನಂತರ ಕೈಲ್ ಜೇಮಿಸನ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ವಿಕೆಟ್‌ಅನ್ನು ಎರಡು ಇನ್ನಿಂಗ್ಸ್‌ನಲ್ಲಿಯೂ ಪಡೆಯಲು ಸಾಧ್ಯವಾಗಿದ್ದು ಶ್ರೇಷ್ಠವಾದ ಅನುಭವ ಎಂದಿದ್ದಾರೆ. ತಂಡದ ಇತರ ಬೌಲರ್‌ಗಳೊಂದಿಗೆ ಕಾರ್ಯನಿರ್ವಹಿಸಿದ್ದು ತನ್ನ ಪ್ರದರ್ಶನಕ್ಕೆ ಮಹತ್ವದ ಪಾತ್ರವಹಿಸಿತು. ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ಎರಡು ಬಾರಿ ಆತನ ವಿಕೆಟ್ ಪಡೆದಿದ್ದು ಶ್ರೇಷ್ಠ ಸಂಗತಿ ಎಂದಿದ್ದಾರೆ.

WTC final: ಭಾರತ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ ನ್ಯೂಜಿಲೆಂಡ್!WTC final: ಭಾರತ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ ನ್ಯೂಜಿಲೆಂಡ್!

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಸ್ ಎನಿಸಿಕೊಂಡ ವಿಚಾರವಾಗಿಯೂ ಜೇಮಿಸನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಇದೊಂದು ಅಭೂತಪೂರ್ವ ಕ್ಷಣ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ಮಹತ್ವದ ಕ್ಷಣಗಳನ್ನು ಕಂಡ ನಂತರ ಈ ಸ್ಥಾನದಲ್ಲಿ ನಿಂತಿರುವುದು ಅತಿವಾಸ್ತವಿಕ ಕ್ಷಣವಾಗಿದೆ. ಅಂತಿಮ ದಿನದ ಮೊದಲ ಗಂಟೆ ನಮಗೆ ಬಹಳ ಮಹತ್ವವಾಗಿತ್ತು. ನಾವು ಸೂಕ್ತ ಪ್ರದೇಶಗಳನ್ನು ಗುರಿಯಾಗಿರಿಸಿ ಬೌಲಿಂಗ್ ನಡೆಸಿದೆವು. ಇದುಂದು ಕಠಿಣವಾದ ಸವಾಲು ಎಂಬುದು ನಮಗೆ ತಿಳಿದಿತ್ತು" ಎಂದು ಕೈಲ್ ಜೇಮಿಸನ್ ಹೇಳಿಕೆ ನೀಡಿದ್ದಾರೆ.

ನ್ಯೂಜಿಲೆಂಡ್ ತಂಡದ ಈ ಐತಿಹಾಸಿಕ ವಿಜಯದಲ್ಲಿ ಕೈಲ್ ಜೇಮಿಸನ್ ಪಾತ್ರ ಬಹಳ ಪ್ರಮುಖವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ಪ್ರಥಮ ಆಟಗಾರ ಎನಿಸಿದ್ದಾರೆ. ಈ ಪ್ರದರ್ಶನಕ್ಕೆ ಜೇಮಿಸನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿದ್ದಾರೆ.

ಇನ್ನು ಈ ಪ್ರದರ್ಶನದ ಮೂಲಕ ಕೈಲ್ ಜೇಮಿಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳ ಗೊಂಚಲು ಪಡೆದ ಆಟಗಾರ ಎನಿಸಿದ್ದಾರೆ. ಜೇಮಿಸನ್ ಈ ಟೂರ್ನಿಯಲ್ಲಿ ಒಟ್ಟು 5 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. 4 ಬಾರಿ ಈ ಸಾಧನೆ ಮಾಡಿರುವ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

Story first published: Thursday, June 24, 2021, 11:59 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X