ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ದಿಗ್ಗಜರು ರಹಾನೆ ಹೊಗಳುತ್ತಿರುವುದು ಹೃದಯ ತುಂಬುತ್ತಿದೆ'

It was heartening to see Australian legends praising Ajinkya Rahanes leadership, says Sunil Gavaskar

ನವದೆಹಲಿ: ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರನ್ನು ಆಸ್ಟ್ರೇಲಿಯಾ ದಂತಕತೆಗಳು ಹೊಗಳುತ್ತಿರುವುದು ನೋಡುವಾಗ ಹೃದಯ ತುಂಬಿ ಬರುತ್ತಿದೆ ಎಂದು ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಆಸ್ಟ್ರೇಲಿಯಾ-ಭಾರತ ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಅಜಿಂಕ್ಯ ರಹಾನೆ ನಾಯಕತ್ವಕ್ಕೆ ಮೊದಲ ಸೆಶನ್‌ನಲ್ಲೇ ಮೆಕ್‌ಗ್ರಾಥ್ ಪ್ರಶಂಸೆಅಜಿಂಕ್ಯ ರಹಾನೆ ನಾಯಕತ್ವಕ್ಕೆ ಮೊದಲ ಸೆಶನ್‌ನಲ್ಲೇ ಮೆಕ್‌ಗ್ರಾಥ್ ಪ್ರಶಂಸೆ

ಮೆಲ್ಬರ್ನ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆಯ ಫೀಲ್ಡ್ ಸೆಟ್ಟಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಒಟ್ಟಾರೆ ನಾಯಕತ್ವ ಗಮನ ಸೆಳೆದಿತ್ತು. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಸುಲಭ ಗೆಲುವೂ ಕಂಡಿತ್ತು.

'ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಕೆಲವು ಆಸ್ಟ್ರೇಲಿಯಾ ದಂತಕತೆಗಳು ಅಜಿಂಕ್ಯ ರಹಾನೆ ಅವರ ನಾಯಕತ್ವವನ್ನು ಮೆಚ್ಚಿಕೊಳ್ಳುತ್ತಿದ್ದುದನ್ನು ನೀವು ನೋಡಬೇಕಾದರೆ ನೀವು ಕಾಮೆಂಟರಿ ಬಾಕ್ಸ್ ಬಳಿ ಬರಬೇಕಿತ್ತು,' ಎಂದು ಇಂಡಿಯಾ ಟು ಡೇ ಜೊತೆ ಮಾತನಾಡುತ್ತ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!

ರಹಾನೆ ನಾಯಕತ್ವದ ಬಗ್ಗೆ ಆಸ್ಟ್ರೇಲಿಯಾ ಮಾಜಿ ದಂತಕತೆಗಳು ಹೊಗಳಿದ್ದು ನಿಜವೇ. ರಿಕಿ ಪಾಂಟಿಂಗ್, ಆ್ಯಡಂ ಗಿಲ್‌ಕ್ರಿಸ್ಟ್‌, ಮೈಕ್ ಹಸ್ಸಿ, ಶೇನ್ ವಾರ್ನ್ ಮೊದಲಾದವರು ರಹಾನೆ ಮುಂದಾಳತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೇ ಗವಾಸ್ಕರ್ ಹೇಳಿಕೊಂಡಿದ್ದಾರೆ.

Story first published: Wednesday, December 30, 2020, 13:56 [IST]
Other articles published on Dec 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X