ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಾಫ್ ಡು ಪ್ಲೆಸಿಸ್ ಸ್ಥಿತಿಗೆ ಸಿಎಸ್‌ಕೆ ಸ್ಪಿನ್ನರ್ ಇಮ್ರಾನ್ ತಾಹಿರ್ ಮರುಕ

It was painful to see Faf Du Plessis carrying drinks: Imran Tahir

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಬಾರಿಯ ರನ್ನರ್ಸ್, ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಪರಿಸ್ಥಿತಿ ಈ ಬಾರಿ ಚೆನ್ನಾಗಿಲ್ಲ. ಇದೇ ಸಿಎಸ್‌ಕೆಯ ಸ್ಪಿನ್ನರ್ ಇಮ್ರಾನ್ ತಾಹಿರ್ ತಂಡದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಹ ಆಟಗಾರ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಸಿಎಸ್‌ಕೆ ತಂಡದ ಆಟಗಾರರಿಗೆ ಡ್ರಿಂಕ್ಸ್ ತೆಗೆದುಕೊಂಡು ಹೋಗಬೇಕಾಗಿ ಬಂದಿದ್ದು ನೋಡಲು ತುಂಬಾ ನೋವಾಗಿತ್ತು ಎಂದು ತಾಹಿರ್ ಹೇಳಿದ್ದಾರೆ.

ವಿರಾಟ್ ಹೊಸ ಚೆಂಡನ್ನು ಸಿರಾಜ್ ಕೈಗೆ ನೀಡಿದ್ದನ್ನು ನೋಡಿ ಆಶ್ಚರ್ಯವಾಗಿತ್ತು: ಗೌತಮ್ ಗಂಭೀರ್ವಿರಾಟ್ ಹೊಸ ಚೆಂಡನ್ನು ಸಿರಾಜ್ ಕೈಗೆ ನೀಡಿದ್ದನ್ನು ನೋಡಿ ಆಶ್ಚರ್ಯವಾಗಿತ್ತು: ಗೌತಮ್ ಗಂಭೀರ್

ಚೆನ್ನೈ ಸೂಪರ್ ಕಿಂಗ್ಸ್ ಈ ಟೂರ್ನಿಯಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿದೆ. ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 3 ಗೆಲುವು ಕಂಡಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಆಟಗಾರರ ಪ್ರದರ್ಶನ, ತಂಡದ ಸ್ಥಾನ ನೋವು ತರುತ್ತಿದೆ ಎಂಬರ್ಥದಲ್ಲಿ ತಾಹಿರ್ ಮಾತನಾಡಿದ್ದಾರೆ.

ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್

ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ತಾಹಿರ್, ಸಿಎಸ್‌ಕೆ ಮತ್ತು ತಾನು ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿಎಸ್‌ಕೆ ಬೆಸ್ಟ್ ಫ್ರಾಂಚೈಸಿ

ಸಿಎಸ್‌ಕೆ ಬೆಸ್ಟ್ ಫ್ರಾಂಚೈಸಿ

ಆರ್ ಅಶ್ವಿನ್ ಅವರ ಯೂಟ್ಯೂಬ್ ಶೋ 'ಹಲೋ ದುಬೈ'ನಲ್ಲಿ ಮಾತನಾಡಿದ ತಾಹಿರ್, 'ನನ್ನ ಹೃದಯದಿಂದ ಹೇಳುತ್ತೇನೆ; ನಾನು ವಿಶ್ವದಲ್ಲಿ ನೋಡಿದ ಫ್ರಾಂಚೈಸಿಗಳಲ್ಲಿ ಸಿಎಸ್‌ಕೆ ಬೆಸ್ಟ್. ಒಂದು ಫ್ರಾಂಚೈಸಿಗೆ ಈ ಪರಿಯ ಗೌರವ ಲಭಿಸುವುದನ್ನು ನಾನು ಎಲ್ಲೂ ನೋಡಿಲ್ಲ,' ಎಂದಿದ್ದಾರೆ.

ಇಲ್ಲಿ ವಿಭಿನ್ನ ವಾತಾವರಣವಿದೆ

ಇಲ್ಲಿ ವಿಭಿನ್ನ ವಾತಾವರಣವಿದೆ

'ಇಲ್ಲಿ ಆಡುವಾಗ ವಿಭಿನ್ನ ವಾತಾವರಣ ನನಗೆ ಕಾಣ ಸಿಗುತ್ತದೆ. ಚೆನ್ನೈ ಯಾವತ್ತಿಗೂ ನಮ್ಮ ಪ್ರದರ್ಶನದ ಬಗ್ಗೆ ಮಾತನಾಡುವುದಿಲ್ಲ. ಒಟ್ಟಿನಲ್ಲಿ ನಮ್ಮನ್ನು ಬೆಂಬಲಿಸುತ್ತಾರೆ. ಇವತ್ತು ಆಗಿಲ್ಲದಿದ್ದರೆ ಇನ್ನೊಂದು ದಿನ ನೀನು ಉತ್ತಮ ಪ್ರದರ್ಶನ ನೀಡುತ್ತೀ ಅಂತ ಧೈರ್ಯ ತುಂಬುತ್ತಾರೆ,' ಎಂದು ತಾಹಿರ್ ವಿವರಿಸಿದ್ದಾರೆ.

ಡು ಪ್ಲೆಸಿಸ್ ನೋಡೋಕೆ ನೋವಾಗಿತ್ತು

ಡು ಪ್ಲೆಸಿಸ್ ನೋಡೋಕೆ ನೋವಾಗಿತ್ತು

ಸಿಎಸ್‌ಕೆ ಪ್ಲೇಯಿಂಗ್ XIನಲ್ಲಿ ತಾನು ಕಾಣಿಸಿಕೊಳ್ಳುವ ಬಗ್ಗೆ ತುಟಿ ಬಿಚ್ಚಿದ ತಾಹೀರ್, 'ನನಗೆ ಈ ಬಗ್ಗೆ ಮಾಹಿತಿಯಿಲ್ಲ. ಈ ಮೊದಲು ಫಾಫ್ ಡು ಪ್ಲೆಸಿಸ್ ಟೂರ್ನಿಯುದ್ದಕ್ಕೂ ಡ್ರಿಂಕ್ಸ್ ತೆಗೆದುಕೊಂಡು ಹೋಗುವುದಕ್ಕೆ ಸೀಮಿತವಾಗಿದ್ದರು. ಅದು ನೋಡೋದಕ್ಕೆ ತುಂಬಾ ನೋವಿನ ಸಂಗತಿಯಾಗಿತ್ತು. ಈ ಬಾರಿ ನನ್ನ ಸರದಿ ಬಂದಿದೆ,' ಎಂದು ಹೇಳಿದ್ದಾರೆ.

ನನಗೂ ಒಂದು ಪಂದ್ಯ ಸಿಗಬಹುದು

ನನಗೂ ಒಂದು ಪಂದ್ಯ ಸಿಗಬಹುದು

ಕಳೆದ ವರ್ಷ ಇಮ್ರಾನ್ ತಾಹಿರ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ ಈ ಬಾರಿ ಅವರಿಗೆ ಒಂದೂ ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ. 'ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರಿಗಷ್ಟೇ ಅವಕಾಶವಿರುವುದರಿಂದ ಒಮ್ಮೆ ನಾಲ್ವರು ಸೆಟಲ್ ಆದಮೇಲೆ ಐದನೆಯವನಿಗೆ ತಂಡ ಸೇರಿಕೊಳ್ಳಲು ಬಲುಕಷ್ಟವಿದೆ. ಆದರೂ ಒಂದು ಪಂದ್ಯ ಸಿಗಬಹುದು ಅನ್ನೋ ಭಾವನೆ ನನ್ನದು,' ಎಂದು ತಾಹಿರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Friday, October 23, 2020, 10:27 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X