ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಎಬಿ ಡಿ ವಿಲಿಯರ್ಸ್?!

It will be ‘fantastic’ to play for South Africa again: AB de Villiers

ಚೆನ್ನೈ: ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಬ್ಯಾಕ್‌ ಮಾಡಲು ಸಾಧ್ಯವಾಗುವುದಾದರೆ ಅದು ಅದ್ಭುತವೆನಿಸಲಿದೆ ಎಂದು ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ. ಭಾನುವಾರ (ಏಪ್ರಿಲ್ 18) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಡಿ ವಿಲಿಯರ್ಸ್ ಈ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!

ಭಾನುವಾರ ನಡೆದ 10ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಆರ್‌ಸಿಬಿ ಪರ ಕಣಕ್ಕಿಳಿದಿದ್ದ ಎಬಿ ಡಿ ವಿಲಿಯರ್ಸ್ ತಂಡದ ಗೆಲುವಿಗೆ ಕಾರಣರಾಗಿದ್ದರು. 9 ಫೋರ್ಸ್, 3 ಸಿಕ್ಸರ್‌ಗಳು ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿಡಿ ಬ್ಯಾಟಿಂದ ಸಿಡಿದಿತ್ತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಕೆಕೆಆರ್‌ ವಿರುದ್ಧ ಆರ್‌ಸಿಬಿ 38 ರನ್‌ಗಳ ಜಯ ದಾಖಲಿಸಿತ್ತು. ಡಿ ವಿಲಿಯರ್ಸ್ 34 ಎಸೆತಗಳಿಗೆ 76 ರನ್ ಕೊಡುಗೆ ನೀಡಿದ್ದರೆ, ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 78 (49), ದೇವದತ್ ಪಡಿಕ್ಕಲ್ 25, ಕೈಲ್ ಜೇಮಿಸನ್ 11 ರನ್‌ ಸೇರ್ಪಡೆಯೊಂದಿಗೆ 204 ರನ್ ಬಾರಿಸಿದ್ದ ಆರ್‌ಸಿಬಿ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಸತತ 3ನೇ ಗೆಲುವಿನ ದಾಖಲೆ ಬರೆದಿತ್ತು.

ಶ್ರೀಲಂಕಾ ದಂತಕತೆ ಮುತ್ತಯ್ಯ ಮುರಳೀಧರನ್ ಆಸ್ಪತ್ರೆಗೆ ದಾಖಲುಶ್ರೀಲಂಕಾ ದಂತಕತೆ ಮುತ್ತಯ್ಯ ಮುರಳೀಧರನ್ ಆಸ್ಪತ್ರೆಗೆ ದಾಖಲು

ಆರ್‌ಸಿಬಿ ಪರ ಪಂದ್ಯ ಗೆಲುವಿನ ಇನ್ನಿಂಗ್ಸ್‌ ನೀಡಿದ ಬಳಿಕ ಮಾತನಾಡಿದ ಎಬಿಡಿ, 'ವಿಶ್ವಕಪ್‌ನಲ್ಲಿ ನಾನು ದಕ್ಷಿಣ ಆಫ್ರಿಕಾ ಪ್ಲೇಯಿಂಗ್‌ XIನಲ್ಲಿ ಸ್ಥಾನ ಪಡೆಯುವಂತಾದರೆ ಅದು ಅದ್ಭುತ ಎನಿಸಲಿದೆ,' ಎಂದಿದ್ದಾರೆ. 2021ರ ಟಿ20 ವಿಶ್ವಕಪ್‌ ಟೂರ್ನಿ ಭಾರತದಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ.

23 ಮೇ 2018ರಂದು ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಅದಾಗಿ ಮತ್ತೆ ದಕ್ಷಿಣ ಆಫ್ರಿಕಾ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದ ಎಬಿಡಿ ನಿವೃತ್ತಿ ವಾಪಸ್ ಪಡೆದುಕೊಂಡಿದ್ದರು. 2019ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡುವ ಆಸೆ ಎಬಿಡಿಗೆ ಇತ್ತಾದರೂ ಸೌತ್ ಆಫ್ರಿಕಾ ಕ್ರಿಕೆಟ್ ಇದಕ್ಕೆ ಅವಕಾಶ ನೀಡಿರಲಿಲ್ಲ.

ಎದುರಾಳಿಗಳನ್ನು ಅತಿಹೆಚ್ಚು ಬಾರಿ ಆಲ್ಔಟ್ ಮಾಡಿರುವ ಐಪಿಎಲ್ ತಂಡಗಳುಎದುರಾಳಿಗಳನ್ನು ಅತಿಹೆಚ್ಚು ಬಾರಿ ಆಲ್ಔಟ್ ಮಾಡಿರುವ ಐಪಿಎಲ್ ತಂಡಗಳು

ದಕ್ಷಿಣ ಆಫ್ರಿಕಾ ತಂಡದಲ್ಲೂ ಪ್ರತಿಭಾನ್ವಿತ ಯುವ ಆಟಗಾರರ ಉದಯ ಆಗುತ್ತಲೇ ಇರುತ್ತಿರುವುದರಿಂದ ಈ ವರ್ಷ ಟಿ20ಐ ವಿಶ್ವಕಪ್‌ನಲ್ಲೂ ಎಬಿಡಿಯ ಅಂತಾರಾಷ್ಟ್ರೀಯ ಕಮ್‌ಬ್ಯಾಕ್ ಸಾಧ್ಯತೆ ತುಂಬಾ ಕಡಿಮೆ. ಹಾಗಂತ ಐಪಿಎಲ್ ಫಾರ್ಮ್‌ ನೋಡಿ ಎಬಿಡಿಯ ಸದುಪಯೋಗ ಪಡೆದುಕೊಳ್ಳಲು ಕ್ರಿಕೆಟ್‌ ಸೌತ್ ಆಫ್ರಿಕಾ ಯೋಚಿಸಲೂಬಹುದು. ಯಾವುದಕ್ಕೂ ಕಾಲವೇ ಉತ್ತರಿಸಬೇಕಷ್ಟೇ.

Story first published: Monday, April 19, 2021, 10:11 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X