ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ vs ನ್ಯೂಜಿಲೆಂಡ್ ಸ್ಪರ್ಧೆ'

It will be India vs New Zealand in WTC final, says Nick Compton

ನ್ಯೂಜಿಲೆಂಡ್: ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರಂಭಿಕ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಭಾರತ ಆ ಬಳಿಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈಗ ಭಾರತ 2-1ರ ಮುನ್ನಡೆಯಲ್ಲಿದೆ.

ಐಪಿಎಲ್‌ಗಿಂತ ಪಿಎಸ್‌ಎಲ್, ಇತರ ಲೀಗ್‌ಗಳಲ್ಲಿ ಹೆಚ್ಚು ಪುರಸ್ಕಾರ: ಸ್ಟೇನ್ಐಪಿಎಲ್‌ಗಿಂತ ಪಿಎಸ್‌ಎಲ್, ಇತರ ಲೀಗ್‌ಗಳಲ್ಲಿ ಹೆಚ್ಚು ಪುರಸ್ಕಾರ: ಸ್ಟೇನ್

ಇತ್ತಂಡಗಳ ನಡುವಿನ 4ನೇ ಮತ್ತು ಕೊನೆಯ ಟೆಸ್ಟ್‌ನಲ್ಲೂ ಆತಿಥೇಯ ಭಾರತ ಗೆಲ್ಲುವ ನಿರೀಕ್ಷೆಯಿದೆ. ಮಾರ್ಚ್ 4ರಂದು ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ 4ನೇ ಟೆಸ್ಟ್‌ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತವೇ ಗೆಲ್ಲಲಿದೆ ಎಂದು ಇಂಗ್ಲೆಂಡ್ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ನಿಕ್ ಕಾಂಪ್ಟನ್ ಹೇಳಿದ್ದಾರೆ.

'ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಭಾರತ vs ಇಂಗ್ಲೆಂಡ್ ಮಧ್ಯೆ ನಡೆಯಲಿದೆ ಎಂದು ನನಗನ್ನಿಸುತ್ತಿದೆ. ಭಾರತ ತಂಡ ಭಾರತದಲ್ಲೇ ಆಡುತ್ತಿದೆ. ಹೀಗಾಗಿ ಗೆಲ್ಲುವ ತಂಡವೆಂದು ನೀವು ಭಾರತವನ್ನೇ ಬೆಂಬಲಿಸಬೇಕಾಗುತ್ತದೆ. ಕೊನೇ ಪಂದ್ಯದಲ್ಲಿ ಗೆದ್ದು ಫೈನಲ್‌ಗೇರುವಲ್ಲಿ ಭಾರತವೇ ಮುಂಚೂಣಿಯಲ್ಲಿದೆ,' ಎಂದು ಕಾಂಪ್ಟನ್ ಹೇಳಿದ್ದಾರೆ.

ವಿಜಯ್ ಹಜಾರೆಯಲ್ಲಿ ಪಡಿಕ್ಕಲ್: ಕುತೂಹಲಕಾರಿ ಅಂಕಿ-ಅಂಶಗಳು!ವಿಜಯ್ ಹಜಾರೆಯಲ್ಲಿ ಪಡಿಕ್ಕಲ್: ಕುತೂಹಲಕಾರಿ ಅಂಕಿ-ಅಂಶಗಳು!

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಈಗಾಗಲೇ ನ್ಯೂಜಿಲೆಂಡ್ ಆಯ್ಕೆಯಾಗಿದೆ. ಭಾರತ-ಇಂಗ್ಲೆಂಡ್ ಕೊನೇ ಪಂದ್ಯದ ಫಲಿತಾಂಶ ಆಧರಿಸಿ ಇನ್ನೊಂದು ಫೈನಲ್‌ ಸ್ಪರ್ಧಿ ತಂಡ ಯಾವುದೆಂದು ನಿರ್ಧಾರವಾಗಲಿದೆ. ಕೊನೇ ಪಂದ್ಯದಲ್ಲಿ ಭಾರತ ಗೆದ್ದರೆ ಭಾರತ ಫೈನಲ್‌ಗೆ ಪ್ರವೇಶಿಸಲಿದೆ. ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾ ಫೈನಲ್‌ಗೇರುವ ಸಾಧ್ಯತೆಯಿದೆ.

Story first published: Tuesday, March 2, 2021, 21:50 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X