ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಿತ ವಸ್ತುವಿನ ಬಳಕೆ: ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್​ಗೆ 21 ತಿಂಗಳು ಅಮಾನತು

ITA Suspended First Indian Olympian Gymnast Dipa Karmakar For Term Of 21 Months

ಭಾರತದ ಮೊದಲಿ ಒಲಂಪಿಯಿನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಅವಧಿಗೆ ಕ್ರೀಡೆಯಿಂದ ಅಮಾನತುಗೊಳಿಸಲಾಗಿದೆ. ಕಾನೂನು ಬಾಹಿರ ವಸ್ತುವನ್ನು ಸೇವನೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA) ಶುಕ್ರವಾರ ಈ ನಿರ್ಧಾರ ತೆಗೆದುಕೊಂಡಿದೆ.

ದೀಪಾ ಕರ್ಮಾಕರ್ ಅಮಾನತು ಜುಲೈ 10, 2023ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಘೋಷಿಸಿದೆ. ಡೋಪಿಂಗ್ ಪರೀಕ್ಷೆಯಲ್ಲಿ ದೀಪಾ ಕರ್ಮಾಕರ್ ನಿಷೇಧಿತ ಹೈಜೆನಾಮೈನ್‌ ಸೇವಿಸಿರುವುದು ದೃಢಪಟ್ಟಿದೆ. (ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ ನಿಷೇಧಿತ ಪಟ್ಟಿಯಲ್ಲಿರುವ ವಸ್ತುಗಳಲ್ಲಿ ಹೈಜೆನಾಮೈನ್‌ ಕೂಡ ಒಂದಾಗಿದೆ.)

ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ

11 ಅಕ್ಟೋಬರ್ 2021 ರಂದು ಸ್ಪರ್ಧೆಯ ಹೊರಗಿನ ನಿಯಂತ್ರಣದ ವ್ಯಾಪ್ತಿಯಲ್ಲಿ ಫೆಡರೇಶನ್ ಇಂಟರ್ನ್ಯಾಷನಲ್ ಡಿ ಜಿಮ್ನಾಸ್ಟಿಕ್ (FIG) ಪರವಾಗಿ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಎಫ್‌ಐಜಿ ವಿರೋಧಿ ಡೋಪಿಂಗ್ ನಿಯಮ 10.8.2 ರ ಪ್ರಕಾರ ವಿವಾದವನ್ನು ಪರಿಹರಿಸಲು ಕೇಸ್ ಇತ್ಯರ್ಥ ಒಪ್ಪಂದವನ್ನು ಬಳಸಲಾಗಿದೆ. ಅಕ್ಟೋಬರ್ 11, 2021 ರಂತೆ ಕ್ರೀಡಾಪಟುವಿನ ಫಲಿತಾಂಶಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.

ITA Suspended First Indian Olympian Gymnast Dipa Karmakar For Term Of 21 Months

ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ

ದೀಪಾ ಕರ್ಮಾಕರ್ ಭಾರತದಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಜಿಮ್ನಾಸ್ಟ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದರು. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಯುನೈಟೆಡ್ ಸ್ಟೇಟ್ಸ್‌ನ ಸಿಮೋನ್ ಬೈಲ್ಸ್, ಮಾರಿಯಾ ಪಸೆಕಾ ಮತ್ತು ಗಿಯುಲಿಯಾ ಸ್ಟೀಂಗ್‌ರಬ್ಬರ್‌ನಂತಹ ಗಣ್ಯ ಜಿಮ್ನಾಸ್ಟ್‌ಗಳ ವಿರುದ್ಧ ಸ್ಪರ್ಧಿಸಿದರು ಮತ್ತು ಸವಾಲಿನ ಪ್ರೊಡೊನೊವಾ ವಾಲ್ಟ್ ಅನ್ನು ಯಶಸ್ವಿಯಾಗಿ ಸಾಧಿಸಿದರು. ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ ಭಾರತ ಸ್ಪರ್ಧಿಸಬಹುದು ಎಂದು ತೋರಿಸುವ ಮೂಲಕ ದೇಶಕ್ಕೆ ಹೆಮ್ಮಿ ತಂದಿದ್ದ ದೀಪಾ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಭಾರತದ ಕ್ರೀಡಾ ವಲಯಕ್ಕೆ ಕಪ್ಪುಚುಕ್ಕೆಯಾಗಿದೆ.

ITA Suspended First Indian Olympian Gymnast Dipa Karmakar For Term Of 21 Months

ಹಲವು ಕ್ರೀಡಾಪಟಗಳು ವಿಫಲ

ಏಳು ರಾಷ್ಟ್ರೀಯ ಕ್ರೀಡಾಕೂಟದ ಪದಕ ವಿಜೇತರು, ಇತರೆ ಮೂವರು ಕ್ರೀಡಾಪಟುಗಳು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಕ್ರೀಡಾಪಟುಗಳು ಮೆಟೆನೊಲೋನ್, ಮೆಥಾಂಡಿಯೆನೋನ್, ಸ್ಟಾನೊಜೋಲೋಲ್ ಮತ್ತು ಮೆಥಾಂಡಿನೋನ್‌ನಂತಹ ಉನ್ನತ-ಮಟ್ಟದ ಔಷಧಗಳನ್ನು ಒಳಗೊಂಡಂತೆ ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವೆಲ್ಲವೂ ಅನಾಬೋಲಿಕೆ ಸ್ಟೀರಾಯ್ಡ್‌ಗಳಾಗಿವೆ.

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ವೇಟ್‌ಲಿಫ್ಟಿಂಗ್, ಅಥ್ಲೆಟಿಕ್ಸ್, ವ್ರೆಸ್ಲಿಂಗ್, ಸೈಕ್ಲಿಂಗ್, ಜೂಡೋ, ಫುಟ್‌ಬಾಲ್, ವುಶು ಮತ್ತು ಲಾನ್ ಬೌಲ್ಸ್ ವಿಭಾಗಗಳ 10 ಕ್ರೀಡಾಪಟುಗಳು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಆರು ಗುಜರಾತಿ ನಗರಗಳಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 10 ರವರೆಗೆ ನಡೆದ ಗುಜರಾತ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 10 ಕ್ರೀಡಾಪಟುಗಳಲ್ಲಿ 7 ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ADDP) ಎದುರು ತಾವು ನಿರಪರಾಧಿಗಳು ಎಂದು ಸಾಬೀತುಮಾಡುವಲ್ಲಿ ವಿಫಲವಾದರೆ, ಎರಡರಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.

Story first published: Saturday, February 4, 2023, 10:13 [IST]
Other articles published on Feb 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X