ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುದೀರ್ಘ ಕಾಲಕ್ಕೆ ಆ ಇಬ್ಬರು ಆಟಗಾರರ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಬಲ್ಲರು: ಗಂಗೂಲಿ

Jadeja and Pandya can be huge assets to this team in long run: Sourav Ganguly

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಗೆದ್ದ ರೀತಿಗೆ ಸಂತಸ ವ್ಯಕ್ತಡಿಸಿದ್ದಾರೆ. ಅದಲ್ಲೂ ಇಬ್ಬರು ಆಟಗಾರರ ಬಗ್ಗೆ ಗಂಗೂಲಿ ವಿಶೇಷವಾಗಿ ಮಾತನಾಡಿದ್ದಾರೆ. ಆ ಆಟಗಾರರು ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಗಂಗೂಲಿ ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಭಾರತ ಸೋತು ಸರಣಿಯನ್ನು ಆಸ್ಟ್ರೇಲಿಯಾಗೆ ಒಪ್ಪಿಸಿತ್ತು. ಹೀಗಾಗಿ ಅಂತಿಮ ಪಂದ್ಯವನ್ನೂ ಸೋತರೆ ವಟ್‌ವಾಶ್ ಮುಖಬಂಗಕ್ಕೆ ಭಾರತ ಗುರಿಯಾಗಬೇಕಿತ್ತು. ಆದರೆ ಸಂಕಷ್ಟದ ಸಂದರ್ಬದಲ್ಲಿ ಕಣಕ್ಕಿಳಿದ ಇಬ್ಬರು ಆಟಗಾರರು ಭಾರತ ತಂಡವನ್ನು ಮೇಲಕ್ಕೆತ್ತಿದರು.

ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್

ಈ ಇನ್ನಿಂಗ್ಸ್ ಬಿಸಿಸಿಐ ಅಧ್ಯಕ್ಷ ಗಂಗೂಲಿಯನ್ನು ಸಂತಸಗೊಳ್ಳುವಂತೆ ಮಾಡಿದೆ. ಅದೇ ಕಾರಣಕ್ಕೆ ಟೀಮ್ ಇಂಡಿಯಾದ ಇಬ್ಬರು ಆಟಗಾರರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ ಗಂಗೂಲಿ.

ಆಲ್‌ರೌಂಡರ್‌ಗಳ ಆಟ

ಆಲ್‌ರೌಂಡರ್‌ಗಳ ಆಟ

ಎರಡು ಪಂದ್ಯಗಳನ್ನು ಸೋತಿದ್ದ ಭಾರತಕ್ಕೆ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಲು ಇಳಿದ ಭಾರತ ತಂಡದ ಪರವಾಗಿ ನಾಯಕ ಕೊಹ್ಲಿ ಹೊರತುಪಡಿಸಿ ಪ್ರಮುಖ ಆಟಗಾರರು ಕೈಚೆಲ್ಲಿದ್ದರು. ಆ ಸಂದರ್ಭದಲ್ಲಿ ಜೊತೆಯಾಗಿದ್ದು ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜೋಡಿ.

150 ರನ್‌ಗಳ ಜೊತೆಯಾಟ

150 ರನ್‌ಗಳ ಜೊತೆಯಾಟ

ಬ್ಯಾಟ್ಸ್‌ಮನ್‌ಗಳಿಗೆ ಸ್ನೇಹಿಯಾಗಿರುವ ಮನುಕಾ ಓವಲ್‌ನಲ್ಲಿ ಭಾರತ ಕನಿಷ್ಟ ರನ್‌ಗಳ ಗುರಿಯನ್ನು ಎದುರಾಳಿಗೆ ನೀಡುವ ಆತಂಕವಿತ್ತು. ಆದರೆ ಪಾಂಡ್ಯ-ಜಡೇಜಾ ಜೋಡಿ ಈ ಪಂದ್ಯದಲ್ಲಿ ಶ್ರೇಷ್ಠವಾದ ಪ್ರದರ್ಶನವನ್ನು ನೀಡಿದರು. ಅಂತಿಮ 110 ಎಸೆತಗಳಲ್ಲಿ ಭರ್ಜರಿ 150ರನ್ ಒಟ್ಟುಕೂಡಿಸಿದರು. ಈ ಮೂಲಕ ತಂಡ ಸವಾಲಿನ ಮೊತ್ತವನ್ನು ಪೇರಿಸಲು ಕಾರಣರಾದರು. ಪಾಂಡ್ಯ 92 ರನ್‌ಗಳ ಕಾಣಿಕೆಯನ್ನು ನೀಡಿದರೆ ಜಡೇಜಾ 66 ರನ್ ಗಳಿಸಿದ್ದರು.

ಅದ್ಭುತವಾದ ಗೆಲುವು

ಅದ್ಭುತವಾದ ಗೆಲುವು

ಈ ಗೆಲುವಿನ ಬಳಿಕ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸರಣಿಯನ್ನು ಸೋತ ಹೊರತಾಗಿಯೂ ಭಾರತ ತಂಡ ಅಂತಿಮ ಪಂದ್ಯದಲ್ಲಿ ಗೆದ್ದ ರೀತಿ ಅದ್ಭುತವಾಗಿದೆ. ಇದು ಸುದೀರ್ಘ ಸರಣಿಯಲ್ಲಿ ಕೆಲ ಬದಲಾವಣೆಗಳನ್ನು ತರುವ ಸಾದ್ಯತೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.

ಜಡೇಜಾ ಪಾಂಡ್ಯ ಭಾರತಕ್ಕೆ ಆಸ್ತಿ

ಜಡೇಜಾ ಪಾಂಡ್ಯ ಭಾರತಕ್ಕೆ ಆಸ್ತಿ

ಇನ್ನು ಇದೇ ಸಂದರ್ಭದಲ್ಲಿ ಗಂಗೂಲಿ ಜಡೇಜಾ ಹಾಗೂ ಪಾಂಡ್ಯ ಪ್ರದರ್ಶನವನ್ನು ಹೊಗಳಿದರು. ಸುದೀರ್ಘ ಕಾಲಕ್ಕೆ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಭಾರತ ತಂಡದ ಆಸ್ತಿಯಾಗಲಿದ್ದಾರೆ. ಕಠಿಣವಾದ ಸ್ಥಾನಗಳನ್ನು ಅವರು ತುಂಬಬಲ್ಲವರಾಗಿದ್ದಾರೆ ಎಂದು ಗಂಗೂಲಿ ಇಬ್ಬರು ಆಲ್‌ರೌಂಡರ್‌ಗಳ ಬಗ್ಗೆ ಮಾತನಾಡಿದ್ದಾರೆ.

Story first published: Thursday, December 3, 2020, 11:29 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X