ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಡೇಜಾ ಆಲ್ ರೌಂಡರ್, ಚಾಹಲ್ ಬೌಲರ್, ಬದಲು ಹೇಗೆ ಸಾಧ್ಯ?: ಹೆನ್ರಿಕ್ಸ್‌

‘Jadeja is allrounder, Chahal is pure bowler, was it a like-for-like replacement?: Moises Henriques

ಕ್ಯಾನ್ಬೆರಾ: ಭಾರತ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ರವೀಂದ್ರ ಜಡೇಜಾ ಬದಲು ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಿದ್ದನ್ನು ಆಸ್ಟ್ರೇಲಿಯಾ ಆಲ್ ರೌಂಡರ್ ಮೋಯ್ಸಸ್ ಹೆನ್ರಿಕ್ಸ್ ಪ್ರಶ್ನಿಸಿದ್ದಾರೆ. ಜಡೇಜಾ ಮತ್ತು ಚಾಹಲ್ ವಿಭಿನ್ನ ಆಟಗಾರರು. ಅವರನ್ನು ಬದಲಾಯಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಹೆನ್ರಿಕ್ಸ್ ಹೇಳಿದ್ದಾರೆ.

 ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಶುಕ್ರವಾರ ಕ್ಯಾನ್ಬೆರಾದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ತಲೆಗೆ ಚೆಂಡು ಬಡಿದು ಗಾಯಗೊಂಡರು. ಹೀಗಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು. ಇದು ಚರ್ಚೆಗೆ ಕಾರಣವಾಗಿದೆ.

ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್‌ ಎಸೆದು 25 ರನ್‌ಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಮುರಿದು ತಂಡದ ಗೆಲುವಿಗೆ ಕಾರಣರಾಗಿದ್ದರು. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಕನ್ಕಶನ್ ಸಬ್‌ಸ್ಟಿಟ್ಯೂಟ್ ನಿಯಮದ ಪ್ರಕಾರ ಚಾಹಲ್ ಅವರನ್ನು ಆಡಿಸಲಾಗಿತ್ತು. ಕನ್ಕಶನ್ ಸಬ್‌ಸ್ಟಿಟ್ಯೂಟ್ ನಿಯಮದ ಪ್ರಕಾರ ಗಾಯಗೊಂಡ ಆಟಗಾರನ ಬದಲು ಅಂಥದ್ದೇ ಆಟಗಾರನನ್ನು ಬದಲಿಸಿಕೊಳ್ಳಬಹುದು.

ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!

ಚಾಹಲ್ ಆಡಿದ್ದನ್ನು ಪ್ರಶ್ನಿಸಿರುವ ಹೆನ್ರಿಕ್ಸ್, 'ಜಡೇಜಾಗೆ ತಲೆಗೆ ಚೆಂಡು ಬಡಿದು ಗಾಯವಾಗಿದ್ದು ನಿಜ. ಆದರೆ ಅದು ಲೈಕ್ ಟು ಲೈಕ್ ಬದಲಾವಣೆಯಾಗುತ್ತದೆಯೇ? ಜಡೇಜಾ ಆಲ್ ರೌಂಡರ್, ಆತ ಬ್ಯಾಟಿಂಗ್ ಮುಗಿಸಿದ್ದ, ಚಾಹಲ್ ಶುದ್ಧ ಬೌಲರ್. ಈ ಬದಲಾವಣೆ ಹೇಗೆ ಸಾಧ್ಯವಾಗುತ್ತದೆ,' ಎಂದಿದ್ದಾರೆ.

Story first published: Saturday, December 5, 2020, 10:48 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X