ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್‌!

ಟೀ ಇಂಡಿಯಾಗೆ ಎದುರಾಗಿದೆ ದೊಡ್ಡ ಸಂಕಷ್ಟ..!? | Oneindia Kannada
Jadhavs injury raises alarm bells in India camp

ಭುಜದ ಗಾಯದ ಸಮಸ್ಯೆಗೆ ತುತ್ತಾದ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಕೇದಾರ್‌ ಜಾಧವ್‌

ಚೆನ್ನೈ, ಮೇ 06: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನೇನು ದಿನಗಣನೆ ಆರಂಭವಾಗಿರುವ ಟೀಮ್‌ ಇಂಡಿಯಾಗೆ ಶಾಕ್‌ ಎದುರಾಗಿದ್ದು, ತಂಡದ ಪ್ರಮುಖ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019: ಎಲ್ಲ ತಂಡಗಳ ಸಂಪೂರ್ಣ ವಿವರ ಇಲ್ಲಿದೆಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019: ಎಲ್ಲ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

ಪ್ರಸಕ್ತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2019ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಿರುವ ಕೇದಾರ್‌ ಜಾಧವ್‌, ಭಾನುವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದ ವೇಳೆ ಭುಜದ ಗಾಯದ ಸಮಸ್ಯೆ ಎದುರಿಸಿದ್ದಾರೆ. ಈ ಮೂಲಕ ಐಪಿಎಲ್‌ನ ಉಳಿದ ಎಲ್ಲಾ ಪಂದ್ಯಗಳಿಂದಲೂ ಜಾಧವ್‌ ಹೊರಬಿದ್ದಾರೆ. ಇದರೊಂದಿಗೆ ವಿಶ್ವಕಪ್‌ ಟೂರ್ನಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಕುರಿತಾಗಿಯೂ ಆತಂಕ ಹೆಚ್ಚಾಗಿದೆ.

 ವಿಶ್ವಕಪ್‌ ರೀವೈಂಡ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌ ವಿಶ್ವಕಪ್‌ ರೀವೈಂಡ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌

ಪಂದ್ಯದ 14ನೇ ಓವರ್‌ನಲ್ಲಿ ಸಹ ಆಟಗಾರ ಎಸೆದ ಓವರ್‌ ಥ್ರೋ ತಡೆಯುವ ಪ್ರಯತ್ನದಲ್ಲಿ ಜಾಧವ್‌ ಗಾಯದ ಸಮಸ್ಯೆಗೆ ತುತ್ತಾದರು.

 ಭಾರತ ವಿಶ್ವಕಪ್‌ ಗೆಲ್ಲಲಿದೆ: ಭವಿಷ್ಯ ನುಡಿದ ಸಚಿನ್‌ ತೆಂಡೂಲ್ಕರ್‌ ಭಾರತ ವಿಶ್ವಕಪ್‌ ಗೆಲ್ಲಲಿದೆ: ಭವಿಷ್ಯ ನುಡಿದ ಸಚಿನ್‌ ತೆಂಡೂಲ್ಕರ್‌

"ಕೇದಾರ್‌ ಜಾಧವ್‌ ಎಕ್ಸ್‌-ರೇ ತಪಾಸಣೆಗೆ ಒಳಪಡಲಿದ್ದಾರೆ. ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವರನ್ನು ಕಾಣುವುದು ಸಾಧ್ಯವಿಲ್ಲ. ಇದು ಗಂಭೀರ ಸಮಸ್ಯೆ ಆಗದೇ ಇರಲಿ ಎಂದು ಆಶಿಸುತ್ತೇವೆ. ಆದರೆ, ಗಾತದ ಸಮಸ್ಯೆ ಕೊಂಚ ಗಂಭೀರವಾಗಿ ಕಾಣಿಸುತ್ತಿದೆ,'' ಎಂದು ಸಿಎಸ್‌ಕೆ ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಪಂಜಾಬ್‌ ವಿರುದ್ಧದ ಪಂದ್ಯದ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಐಪಿಎಲ್‌ನಲ್ಲೂ ಗಾಯಗೊಂಡಿದ್ದರು

ಕಳೆದ ಐಪಿಎಲ್‌ನಲ್ಲೂ ಗಾಯಗೊಂಡಿದ್ದರು

ಅಂದಹಾಗೆ ಕೇದಾರ್‌ ಜಾಧವ್‌ ಗಾಯಗೊಳ್ಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲೇ ತೊಡೆ ಸಂಧು ನೋವಿನ ಸಮಸ್ಯೆ ಎದುರಿಸಿ ಲೀಗ್‌ನಿಂದ ಹಿಂದೆ ಸರಿದಿದ್ದರು. ಬಳಿಕ ಎಷ್ಯಾ ಕಪ್‌ ಹೋತ್ತಿಗೆ ಚೇತರಿಸಿಕೊಂಡ ಕೇದಾರ್‌ ಮರಳಿ ಮತ್ತದೇ ಗಾಯದ ಸಮಸ್ಯೆಗೆ ತುತ್ತಾದರು. ಇದೀಗ ಪ್ರಸಕ್ತ ಐಪಿಎಲ್‌ನಲ್ಲೂ ಗಾಯದ ಸಮಸ್ಯೆ ಅವರ ಬೆನ್ನತ್ತಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಕೇದಾರ್‌ 14 ಪಂದ್ಯಗಳಿಂದ ಕೇವಲ 162 ರನ್‌ಗಳನ್ನು ಮಾತ್ರವೇ ಗಳಿಸಿದ್ದು, ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು.

 ಕೇದಾರ್‌ ಬದಲಿಗೆ ಪಂತ್‌, ರಾಯುಡುಗೆ ಅವಕಾಶ ಸಾಧ್ಯತೆ

ಕೇದಾರ್‌ ಬದಲಿಗೆ ಪಂತ್‌, ರಾಯುಡುಗೆ ಅವಕಾಶ ಸಾಧ್ಯತೆ

ಒಂದು ವೇಳೆ ಭುಜದ ಗಾಯದ ಸಮಸ್ಯೆಯಿಂದ ಕೇದಾರ್‌ ಚೇತರಿಸಲು ಸಾಧ್ಯವಾಗದೇ ಇದ್ದರೆ, ವಿಶ್ವಕಪ್‌ಗೆ ಪ್ರಕಟಿಸಲಾದ ಟೀಮ್‌ ಇಂಡಿಯಾಗೆ ಕಾಯ್ದಿರಿಸಿದ ಆಟಗಾರರಾದ ರಿಷಭ್‌ ಪಂತ್‌ ಅಥವಾ ಅಂಬಾಟಿ ರಾಯುಡು ಲಂಡನ್‌ ಟಿಕೆಟ್‌ ಲಭ್ಯವಾಗಲಿದೆ.

 ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ

ಭಾರತ ತಂಡ ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ ವಿರುದ್ಧ ಮೇ 25ರಂದು ಮತ್ತು ಬಾಂಗ್ಲಾದೇಶ ವಿರುದ್ಧ ಮೇ 22ರಂದು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ 50 ಓವರ್‌ಗಳ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡ ಜೂನ್‌ 5ರಂದು ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌ನಲ್ಲಿ ಆಡಲಿರುವ ತಂಡ ಇಂತಿದೆ

ವಿಶ್ವಕಪ್‌ನಲ್ಲಿ ಆಡಲಿರುವ ತಂಡ ಇಂತಿದೆ

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಕೇದಾರ್‌ ಜಾಧವ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ.

Story first published: Monday, May 6, 2019, 15:38 [IST]
Other articles published on May 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X