ಭಾರತ ವಿರುದ್ಧ ಗೆಲುವನ್ನ ''ಜೈ ಶ್ರೀ ರಾಮ್'' ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳಿಂದ ಗೆಲುವಿನ ಆರಂಭ ಪಡೆದಿದ್ದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಐತಿಹಾಸಿಕ ಹೆಜ್ಜೆಯನ್ನೇ ಇಟ್ಟಿತ್ತು. ಈ ಬಾರಿ ಆದ್ರೂ ಹರಿಣಗಳ ವಿರುದ್ಧ ಹೊಸ ಇತಿಹಾಸ ಸೃಷ್ಟಿಸಲಿದೆ ಎಂಬ ಭರವಸೆಯನ್ನ ಮೂಡಿಸಿತ್ತು. ಆದ್ರೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ, ಭಾರತಕ್ಕೆ ದಕ್ಷಿಣ ಆಫ್ರಿಕಾ ಗೆಲುವು ಮತ್ತೊಮ್ಮೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಸೋಲನ್ನ ಅನುಭವಿಸಿದರೆ, ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ಹೀನಾಯ ಸೋಲಿನ ಮುಖಭಂಗ ಎದುರಿಸಿತು.

ಪಾರ್ಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 31 ರನ್‌ಗಳಿಂದ ಪಂದ್ಯವನ್ನ ಸೋತರೆ, ಎರಡನೇ ಏಕದಿನ ಪಂದ್ಯದಲ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯದಲ್ಲಿ ಸ್ವಲ್ಪ ಹೋರಾಟದ ಪ್ರದರ್ಶನ ಕಂಡು ಬಂದರೂ ಸಹ ಭಾರತ ಗೆಲುವಿನ ದಡ ತಲುಪಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 3-0 ಅಂತರದಲ್ಲಿ ಟೂರ್ನಿ ಗೆದ್ದಿತು.

ಏತನ್ಮದೆ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಎಕಾನಮಿ ದರ 4.59ನಲ್ಲಿ ಬೌಲಿಂಗ್ ಮಾಡುವ ಮೂಲಕ ಮೂರು ವಿಕೆಟ್‌ಗಳನ್ನು ಪಡೆದರು. ಪಾರ್ಲ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ, ಮಹಾರಾಜ್ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಡಕ್‌ ಔಟ್ ಮಾಡಿದ ಮೊದಲ ಸ್ಪಿನ್ನರ್ ಎನಿಸಿಕೊಂಡರು.

ವಿರಾಟ್ ಕೊಹ್ಲಿಯನ್ನ ಡಕೌಟ್ ಮಾಡಿದ ಏಕೈಕ ಸ್ಪಿನ್ನರ್‌

ವಿರಾಟ್ ಕೊಹ್ಲಿಯನ್ನ ಡಕೌಟ್ ಮಾಡಿದ ಏಕೈಕ ಸ್ಪಿನ್ನರ್‌

ಮೂರನೇ ಏಕದಿನ ಪಂದ್ಯದಲ್ಲಿ ಕೇಶವ್ ಮಹಾರಾಜ್ ಮತ್ತೊಮ್ಮೆ ಅರ್ಧಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿದರು. ಕೇಶವ್ ಸ್ಪಿನ್ ಮೋಡಿಗೆ 65ರನ್‌ಗೆ ಕೊಹ್ಲಿ ಇನ್ನಿಂಗ್ಸ್‌ ಮುಗಿಸಿದ್ರು. ಈ ಪಂದ್ಯದಲ್ಲಿ ಗೆಲುವಿನ ಬಳಿಕ ಕೇಶವ್ ಮಹಾರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ತಂಡದ ಗೆಲುವಿನ ಫೋಟೋಗಳ ಜೊತೆಗೆ ಅರ್ಥಪೂರ್ಣ ಮಾತುಗಳನ್ನ ಬರೆದುಕೊಂಡಿದ್ದರು.

ಜೈ ಶ್ರೀ ರಾಮ್ ಎಂದ ಕೇಶವ್ ಮಹಾರಾಜ್

"ಇದು ಎಂತಹ ಸರಣಿಯಾಗಿದೆ ಮತ್ತು ಈ ತಂಡದ ಬಗ್ಗೆ ಹೆಚ್ಚು ಹೆಮ್ಮೆಪಡುವಂತಾಗಿದ್ದು, ನಾವು ಎಷ್ಟು ದೂರ ಬಂದಿದ್ದೇವೆ, ರೀಚಾರ್ಜ್ ಆಗಲು ಮತ್ತು ಮುಂದಿನ ಸರಣಿಗಾಗಿ ತಯಾರಿ ಮಾಡುವ ಸಮಯ ಜೈ ಶ್ರೀ ರಾಮ್‌" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ.

ಕೇಶವ್ ಮಹಾರಾಜ್ ಹೀಗೆ ಪೋಸ್ಟ್‌ ಮಾಡುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆಯಲು ಜಾಸ್ತಿ ಹೊತ್ತು ತಗುಲಲಿಲ್ಲ. ನೆಟ್ಟಿಗರು ಮಹಾರಾಜ್ ಬರೆದಿದ್ದ ಜೈ ಶ್ರೀ ರಾಮ್ ಪದಗಳ ಕುರಿತು ಅನೇಕರು ಹರ್ಷ ವ್ಯಕ್ತಪಡಿಸಿದ್ರು. ತಾನೆಲ್ಲೇ ವಾಸವಿದ್ರೂ ತನ್ನ ತಾಯ್ನಾಡಿನ ಬೇರನ್ನ ಮರೆತಿಲ್ಲ ಎಂದು ಹೊಗಳಿದ್ದಾರೆ. 31 ವರ್ಷದ ಭಾರತೀಯ ಮೂಲದ ಕ್ರಿಕೆಟಿಗ ಕೇಶವ್, ಹಲವು ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಗಮನಾರ್ಹವಾಗಿ, ಮಹಾರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋದಲ್ಲೂ ಕೂಡ "ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್" ಎಂದು ಬರೆದುಕೊಂಡಿದ್ದಾರೆ.

2016ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ

2016ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ

ಆಸ್ಟ್ರೇಲಿಯಾ ವಿರುದ್ಧ 2016ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೇಶವ್ ಮಹಾರಾಜ್ ಇದುವರೆಗೂ 39 ಟೆಸ್ಟ ಪಂದ್ಯಗಳು 18 ಏಕದಿನ ಮತ್ತು 8 ಟಿ20 ಪಂದ್ಯಗಳನ್ನಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 130 ವಿಕೆಟ್‌, ಏಕದಿನ ಕ್ರಿಕೆಟ್‌ನಲ್ಲಿ 22 ವಿಕೆಟ್, ಹಾಗೂ ಟಿ20 ಕ್ರಿಕೆಟ್‌ನಲ್ಲಿ 6 ವಿಕೆಟ್‌ಗಳನ್ನ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಧಾರವಾಗಿದ್ದಾರೆ. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕೇಶವ್ ಟೆಸ್ಟ್‌ನಲ್ಲಿ ಮೂರು ಅರ್ಧಶತಕ ಸಹಿತ 805 ರನ್ ಕಲೆಹಾಕಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 25, 2022, 16:33 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X