ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!

James Anderson became First fast bowler to take 600 Test wickets

ಸೌತಾಂಪ್ಟನ್: ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌಲರ್ ಹೆಗ್ಗಳಿಕೆಗೆ ಆ್ಯಂಡರ್ಸನ್ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಮತ್ತು ಕೊನೇಯ ಟೆಸ್ಟ್ ಪಂದ್ಯದಲ್ಲಿ ಆ್ಯಂಡರ್ಸನ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ವಿಶೇಷ ದಾಖಲೆ ನಿರ್ಮಿಸಲು ಜೇಮ್ಸ್ ಅವರು ಪಾಕ್ ನಾಯಕ ಅಝರ್ ಅಲಿ (31 ರನ್) ವಿಕೆಟ್ ಮುರಿದರು.

'ಎಂಎಸ್ ಧೋನಿಯ ಒಂದು ದಾಖಲೆ ಯಾವತ್ತಿಗೂ ಮುರಿಯಲಾಗಲ್ಲ': ಗಂಭೀರ್'ಎಂಎಸ್ ಧೋನಿಯ ಒಂದು ದಾಖಲೆ ಯಾವತ್ತಿಗೂ ಮುರಿಯಲಾಗಲ್ಲ': ಗಂಭೀರ್

38ರ ಹರೆಯದ ಜೇಮ್ಸ್ ಆ್ಯಂಡರ್ಸನ್ ಆಸ್ಟ್ರೇಲಿಯಾ ದಂತಕತೆ ಗ್ಲೆನ್ ಮೆಗ್ರಾತ್ ಹೆಸರಿನಲ್ಲಿದ್ದ 563 ಟೆಸ್ಟ್ ವಿಕೆಟ್ ದಾಖಲೆ ಮುರಿದಿದ್ದಾರೆ. 2018ರಲ್ಲಿ ಓವಲ್‌ನಲ್ಲಿ ನಡೆದಿದ್ದ ಭಾರತದ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಮೆಗ್ರಾತ್ ಈ ದಾಖಲೆ ನಿರ್ಮಿಸಿದ್ದರು.

ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್ ಪಂದ್ಯ, ಸ್ಕೋರ್‌ಕಾರ್ಡ್

1
46764

ಜೇಮ್ಸ್ ಆ್ಯಂಡರ್ಸನ್ ವಿಶ್ವದಾಖಲೆ ನಿರ್ಮಿಸಿದ್ದಷ್ಟೇ ಅಲ್ಲ, ವಿಶೇಷ ಸಾಧನೆ ತೋರಿದ ಕೆಲವೇ ಕೆಲವರಲ್ಲಿ ಗುರುತಿಸಿಕೊಂಡಿದ್ದಾರೆ. ಆ್ಯಂಡರ್ಸನ್ ದಾಖಲೆಗೆ ಸಂಬಂಧಿಸಿ ಮತ್ತೊಂದಿಷ್ಟು ಕುತೂಹಲಕಾರಿ ಅಂಶಗಳು ಕೆಳಗಿವೆ.

600 ವಿಕೆಟ್ ಸರದಾರರು

600 ವಿಕೆಟ್ ಸರದಾರರು

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ ದಾಖಲೆ ವಿಶ್ವದಲ್ಲಿ ಕೇವಲ 4 ಬೌಲರ್‌ಗಳ ಹೆಸರಿನಲ್ಲಿದೆ. ಅವರೆಂದರೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (800 ವಿಕೆಟ್‌ಗಳು), ಆಸ್ಟ್ರೇಲಿಯಾದ ಶೇನ್ ವಾರ್ನ್ (708), ಭಾರತದ ಸ್ಪಿನ್ ಮಾಂತ್ರಿಕ, ಕನ್ನಡಿಗ ಅನಿಲ್ ಕುಂಬ್ಳೆ (619) ಮತ್ತು ಜೇಮ್ಸ್ ಆ್ಯಂಡರ್ಸನ್ (600*). ಆ್ಯಂಡರ್ಸನ್ 156 ಪಂದ್ಯಗಳಲ್ಲಿ ಈ ದಾಖಲೆ ಮಾಡಿದ್ದಾರೆ.

600 ವಿಕೆಟ್‌ಗೆ ಬಳಸಿದ ಎಸೆತಗಳು

600 ವಿಕೆಟ್‌ಗೆ ಬಳಸಿದ ಎಸೆತಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ದಾಖಲೆ ಬರೆಯಲು ಲಂಕಾದ ಮುತ್ತಯ್ಯ ಮುರಳೀಧರನ್ 33711 ಎಸೆತಗಳು, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 33717 ಎಸೆತಗಳು, ಆಸ್ಟ್ರೇಲಿಯಾದ ಶೇನ್ ವಾರ್ನ್ 34919 ಎಸೆತಗಳು ಮತ್ತು ಭಾರತದ ಅನಿಲ್ ಕುಂಬ್ಳೆ 38496 ಎಸೆತಗಳನ್ನು ಬಳಸಿದ್ದಾರೆ.

ವೇಗವಾಗಿ ದಾಖಲೆ ನಿರ್ಮಿಸಿದವರು

ವೇಗವಾಗಿ ದಾಖಲೆ ನಿರ್ಮಿಸಿದವರು

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ (1895 ರಲ್ಲಿ), 200 ವಿಕೆಟ್ ದಾಖಲೆ ಇಂಗ್ಲೆಂಡ್‌ನ ಅಲೆಕ್ ಬೆಡ್ಸರ್ (1953), 300 ವಿಕೆಟ್ ದಾಖಲೆ ಇಂಗ್ಲೆಂಡ್‌ನ ಫ್ರೆಡ್ ಟ್ರೂಮನ್ (1964), 400 ವಿಕೆಟ್‌ಗಳು ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲೀ (1990), 500 ವಿಕೆಟ್ ದಾಖಲೆ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (2001), 600 ವಿಕೆಟ್ ದಾಖಲೆ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (2020) ಹೆಸರುಗಳಲ್ಲಿವೆ.

ಜೇಮ್ಸ್ ದಾಖಲೆಗೆ ಬಲಿಯಾದವರು

ಜೇಮ್ಸ್ ದಾಖಲೆಗೆ ಬಲಿಯಾದವರು

1ನೇ ವಿಕೆಟ್: ಮಾರ್ಕ್ ವರ್ಮುಲೆನ್, ಜಿಂಬಾಬ್ವೆ (2003)
50ನೇ ವಿಕೆಟ್: ಎಂಎಸ್ ಧೋನಿ, ಭಾರತ (2007)
100ನೇ ವಿಕೆಟ್: ಜಾಕ್ ಕ್ಯಾಲಿಸ್, ದಕ್ಷಿಣ ಆಫ್ರಿಕಾ (2008)
200ನೇ ವಿಕೆಟ್: ಪೀಟರ್ ಸಿಡಲ್, ಆಸ್ಟ್ರೇಲಿಯಾ (2010)
300ನೇ ವಿಕೆಟ್: ಪೀಟರ್ ಫುಲ್ಟನ್, ಆಸ್ಟ್ರೇಲಿಯಾ (2013)
400ನೇ ವಿಕೆಟ್: ಮಾರ್ಟಿನ್ ಗಪ್ಟಿಲ್, ನ್ಯೂಜಿಲ್ಯಾಂಡ್ (2015)
500ನೇ ವಿಕೆಟ್: ಕ್ರೇಗ್ ಬ್ರಾಥ್‌ವೈಟ್, ವೆಸ್ಟ್ ಇಂಡೀಸ್ (2017)
600ನೇ ವಿಕೆಟ್: ಅಝರ್ ಅಲಿ, ಪಾಕಿಸ್ತಾನ (2020).

Story first published: Wednesday, August 26, 2020, 10:20 [IST]
Other articles published on Aug 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X