ಇಂಗ್ಲೆಂಡ್‌ ಪರ ಹೊಸ ದಾಖಲೆ ನಿರ್ಮಿಸಿದ ವೇಗಿ ಜೇಮ್ಸ್ ಆ್ಯಂಡರ್ಸನ್

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್‌ ಪರ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ ಕ್ರಿಕೆಟಿಗರಾಗಿ ಆ್ಯಂಡರ್ಸನ್ ಗುರುತಿಸಿಕೊಂಡಿದ್ದಾರೆ. ಗುರುವಾರ (ಜೂನ್ 10) ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದೊಂದಿಗೆ ಆ್ಯಂಡರ್ಸನ್ ಈ ದಾಖಲೆ ನಿರ್ಮಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್ ಫಿಯೋನಿಕ್ಸ್‌ಗೆ ಸೋಫಿ ಡಿವೈನ್ ಬದಲು ಸಹಿ ಹಾಕಿದ ಶೆಫಾಲಿ ವರ್ಮಾ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಜೇಮ್ಸ್ ಆ್ಯಂಡರ್ಸನ್ 162ನೇ ಟೆಸ್ಟ್‌ ಪಂದ್ಯಕ್ಕಾಗಿ ಕಣಕ್ಕಿಳಿದಿದ್ದರು. ಇದರೊಂದಿಗೆ ಆ್ಯಂಡರ್ಸನ್, ಇಂಗ್ಲೆಂಡ್ ಮಾಜಿ ನಾಯಕ ಅಲಾಸ್ಟೇರ್ ಕುಕ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ.

ಈ ಮೊದಲು ಇಂಗ್ಲೆಂಡ್‌ ಪರ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ ದಾಖಲೆ ಕುಕ್ ಹೆಸರಿನಲ್ಲಿತ್ತು. 161 ಪಂದ್ಯಗಳೊಂದಿಗೆ ಕುಕ್ ಈ ದಾಖಲೆ ನಿರ್ಮಿಸಿದ್ದರು. ಆದರೆ ಈಗ 162 ಪಂದ್ಯಗಳನ್ನಾಡಿರುವ ಆ್ಯಂಡರ್ಸನ್ ಕುಕ್ ದಾಖಲೆ ಮುರಿದಿದ್ದಾರೆ. ಟೆಸ್ಟ್‌ನಲ್ಲಿ ಆ್ಯಂಡರ್ಸನ್ 616 ವಿಕೆಟ್ ದಾಖಲೆ ಹೊಂದಿದ್ದಾರೆ.

ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್

ಇಂಗ್ಲೆಂಡ್‌ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಇದರಲ್ಲಿ ಆರಂಭಿಕ ಪಂದ್ಯ ಡ್ರಾ ಎನಿಸಿದೆ. ದ್ವಿತೀಯ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ 82ನೇ ಓವರ್‌ಗೆ 7 ವಿಕೆಟ್ ಕಳೆದು 234 ರನ್ ಗಳಿಸಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 10, 2021, 22:32 [IST]
Other articles published on Jun 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X