ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ: ಫಿಟ್ ಆಗಿರೋಕೆ ಆ್ಯಂಡರ್ಸನ್ ಮಾಡಿದ್ದೇನು ನೋಡಿ-ವೀಡಿಯೋ

James Anderson finds unique way to stay fit during Coronavirus outbreak

ಲಂಡನ್, ಮಾರ್ಚ್ 19: ಕೊರೊನಾವೈರಸ್‌ನಿಂದ ಕ್ರಿಕೆಟ್‌ ರಂಗದ ಎಲ್ಲಾ ಚಟುವಟಿಕೆಗಳು ನಿಂತಿವೆ. ಹೀಗಾಗಿ ಯಾವಾಗಲೂ ಬ್ಯುಸಿ ಶೆಡ್ಯೂಲ್‌ನಲ್ಲಿರಬೇಕಾಗಿದ್ದ ಕ್ರಿಕೆಟರ್‌ಗಳೆಲ್ಲ ಅನೀರೀಕ್ಷಿತ ಬ್ರೇಕ್ ಅನುಭವಿಸಬೇಕಾಗಿ ಬಂದಿದೆ. ಬಿಡುವಿನಲ್ಲರುವ ಇಂಗ್ಲೆಂಡ್ ಕ್ರಿಕೆಟಿಗ, ಜೇಮ್ಸ್ ಆ್ಯಂಡರ್ಸನ್ ಕೊರೊನಾ ವಿರುದ್ಧ ಫಿಟ್‌ ಆಗಿರೋಕೆ ವಿಭಿನ್ನ ಐಡಿಯಾ ಕಂಡುಕೊಂಡಿದ್ದಾರೆ.

ಸಂಜಯ್ ಮಂಜ್ರೇಕರ್ ಬೆಂಬಲಕ್ಕೆ ನಿಂತ ಭಾರತದ ಮಾಜಿ ವಿಕೆಟ್‌ ಕೀಪರ್ಸಂಜಯ್ ಮಂಜ್ರೇಕರ್ ಬೆಂಬಲಕ್ಕೆ ನಿಂತ ಭಾರತದ ಮಾಜಿ ವಿಕೆಟ್‌ ಕೀಪರ್

ವೇಗದ ಬೌಲರ್ ಆಗಿರುವ ಜೇಮ್ಸ್ ಆ್ಯಂಡರ್ಸನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಹಾಕಿಕೊಂಡಿದ್ದಾರೆ. ಅದರಲ್ಲಿ ಆ್ಯಂಡರ್ಸನ್ ವ್ಯಾಯಾಮ ನಡೆಸುತ್ತಿರುವ ದೃಶ್ಯವಿದೆ. ಆದರೆ ವ್ಯಾಯಾಮಕ್ಕಾಗಿ ಜೇಮ್ಸ್ ತನ್ನ ಮಗಳ ಸಹಾಯ ಪಡೆದುಕೊಂಡಿದ್ದಾರೆ.

ವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XIವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XI

ವೇಟ್‌ ಪ್ಲೇಟ್‌ಗಳನ್ನು ಲೋಡ್‌ ಮಾಡಿದ್ದ ಬಾರ್ ಎತ್ತುವ ಬದಲು ಆ್ಯಂಡರ್ಸನ್ ತನ್ನ ಮಗಳನ್ನು ಎತ್ತಿ ವ್ಯಾಯಾಮ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ವೀಡಿಯೋದ ಜೊತೆಗೆ, 'ಮನೆಯಲ್ಲಿ ಅಭ್ಯಾಸ ನಡೆಸೋಕೆ ಈ ಹುಡುಗಿಯರು ಖುಷಿಯಿಂದಲೇ ಸಹಾಯ ಮಾಡುತ್ತಿದ್ದಾರೆ,' ಎಂದು ಸಾಲೊಂದನ್ನೂ ಆ್ಯಂಡರ್ಸನ್ ಬರೆದುಕೊಂಡಿದ್ದಾರೆ.

ಮಾರ್ಚ್ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆ್ಯಂಡರ್ಸನ್ ಆಡುವುದರಲ್ಲಿದ್ದರು. ಆದರೆ ಕೊರೊನಾವೈರಸ್‌ನಿಂದಾಗಿ ಆ ಸರಣಿ ರದ್ದಾಗಿದೆ. ಹೀಗಾಗಿ ಆ್ಯಂಡರ್ಸನ್ ಬಿಡುವಿನ ವೇಳೆ ಕಳೆಯಬೇಕಾಗಿ ಬಂದಿದೆ. ದೈಹಿಕವಾಗಿ ಫಿಟ್ ಆಗಿದ್ದಷ್ಟು ಕೊರೊನಾ ಸೋಂಕು ತಡೆಗಟ್ಟಬಹುದು ಎಂದು ಹೇಳಲಾಗಿರುವುದರಿಂದ ಆ್ಯಂಡರ್ಸನ್ ಕೂಡ ಫಿಟ್‌ನೆಸ್ ಮೊರೆ ಹೋಗಿದ್ದಾರೆ.

Story first published: Sunday, May 3, 2020, 22:20 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X