ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಕ್ರಿಕೆಟ್ ಆರಂಭ, ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ಪಂದ್ಯದ ವೀಡಿಯೊ!

James Anderson gives first glimpse of post-Covid celebrations in cricket

ಲಂಡನ್, ಜುಲೈ 2: ಕೊರೊನಾವೈರಸ್ ಕಾರಣದಿಂದಾಗಿ ಕ್ರಿಕೆಟ್‌ ಜಗತ್ತಿನಲ್ಲಿ ಒಂದಿಷ್ಟು ಪ್ರಮುಖ ಬದಲಾವಣೆಗಳಾಗುತ್ತಿದೆ. ಇನ್ಮುಂದೆ ಕ್ರಿಕೆಟ್‌ ವೇಳೆ ಆಟಗಾರರು ಚೆಂಡಿಗೆ ಎಂಜಲು ಹಚ್ಚುವಂತಿಲ್ಲ, ಎದುರಾಳಿ ತಂಡದ ವಿಕೆಟ್ ಉರುಳಿದಾಗ ಇಬ್ಬರನ್ನೊಬ್ಬರು ಹ್ಯಾಂಡ್‌ಶೇರ್ ಮಾಡುವಂತಿಲ್ಲ, ತಬ್ಬಿಕೊಳ್ಳುವಂತಿಲ್ಲ, ಹೈ ಫೈವ್ ಕೊಟ್ಟು ಸಂಭ್ರಮಾಚರಿಸುವಂತಿಲ್ಲ.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!

ಹಾಗಾದರೆ ವಿಕೆಟ್ ಉರುಳಿದ್ದನ್ನು ಸಂಭ್ರಮಾಚರಿಸೋದು ಹೇಗೆ? ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್ ಸೂಪರ್ ಐಡಿಯಾ ಕೊಟ್ಟಿದ್ದಾರೆ. ಕೊರೊನಾ ಭೀತಿಯ ಈ ಹೊತ್ತಿನಲ್ಲಿ ಕ್ರಿಕೆಟ್ ಮೈದಾನದಲ್ಲಿ ಹೇಗೆ ಸಂಭ್ರಮಾಚರಿಸಬೇಕೆನ್ನುವ ಬಗ್ಗೆ ಆಂಡರ್ಸನ್ ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಟಗಾರರು ಪರಸ್ಪರ ಮೊಣಕೈಗಳನ್ನು ತಾಗಿಸಿಕೊಳ್ಳುವ ಚಿತ್ರವಿದೆ.

ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರಿಕೆಟ್ ಚಟುವಟಿಕೆಗಳು ಸ್ತಬ್ದಗೊಂಡ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಮೈದಾನದಲ್ಲಿ ಎರಡು ತಂಡಗಳಾಗಿ ಅಭ್ಯಾಸ ನಡೆಸುತ್ತಿದೆ. ಬುಧವಾರ (ಜುಲೈ 1) ಟೀಮ್ ಸ್ಟೋಕ್ಸ್ ಮತ್ತು ಟೀಮ್ ಬಟ್ಲರ್ ತಂಡಗಳ ಮಧ್ಯೆ ಅಭ್ಯಾಸ ಪಂದ್ಯ ನಡೆದಿತ್ತು.

ನನ್ನನ್ನು ದೂಷಿಸಿ, ಜೊಕೋವಿಕ್‌ನಲ್ಲ: ಪ್ಲೇಯರ್ ಬೆನ್ನಿಗೆ ನಿಂತ ಸರ್ಬಿಯಾ ಪ್ರಧಾನಿನನ್ನನ್ನು ದೂಷಿಸಿ, ಜೊಕೋವಿಕ್‌ನಲ್ಲ: ಪ್ಲೇಯರ್ ಬೆನ್ನಿಗೆ ನಿಂತ ಸರ್ಬಿಯಾ ಪ್ರಧಾನಿ

ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ನಡುವಿನ ಅಭ್ಯಾಸ ಪಂದ್ಯದ ವೇಳೆಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆ್ಯಂಡರ್ಸನ್ ಕ್ರಿಕೆಟ್ ಮತ್ತೆ ಆರಂಭಗೊಂಡಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. 'ಈ ಕ್ರಿಕೆಟ್ ಕೊಂಚ ಭಿನ್ನವಾಗಿದೆ, ಆದರೆ ಕ್ರಿಕೆಟ್ ಮತ್ತೆ ಮರಳಿದೆ' ಎಂದು ಆ್ಯಂಡರ್ಸನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜುಲೈ 8ರಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಆ ಸರಣಿಯಲ್ಲೂ ಆಟಗಾರರು ವಿಕೆಟ್ ಲಭಿಸಿದಾಗ ಪರಸ್ಪರ ಮೊಣಕೈ ತಾಗಿಸುವ ಮೂಲಕ ಸಂಭ್ರಮಾಚರಿಸುವುದನ್ನು ನಿರೀಕ್ಷಿಸಬಹುದಾಗಿದೆ. ಶೇಕ್ ಹ್ಯಾಂಡ್, ಹಗ್, ಹೈ ಫೈವ್‌ನಿಂದ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಿರುವುದರಿಂದ ಮೊಣಕೈ ತಾಗಿಸುವ ವಿಧಾನದ ಮೊರೆ ಹೋಗಲಾಗಿದೆ.

Story first published: Thursday, July 2, 2020, 15:39 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X