ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೇಮ್ಸ್ ಆ್ಯಂಡರ್ಸನ್‌ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್: ಮಾಂಟಿ ಪೆನೆಸರ್

James Anderson is Best Fast Bowler Ever Says Monty Panesar

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ 600 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ ಜೇಮ್ಸ್ ಆಂಡರ್ಸನ್. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ವೇಗದ ಬೌಲರ್ ಮಾಡದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಆಂಡರ್ಸನ್ ಮಾಡಿದ ಈ ಸಾಧನೆಗೆ ವಿಶ್ವಾದ್ಯಂತ ಕ್ರಿಕೆಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವೇಗಿ ಆಂಡರ್ಸನ್ ಮಾಡಿದ ಈ ಶ್ರೇಷ್ಠ ಸಾಧನೆಗೆ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಎಂದು ಹೇಳಿಕೆಯನ್ನು ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಶುರುರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಶುರು

ಜೇಮ್ಸ್ ಆಂಡರ್ಸನ್ ಓರ್ವ ಅದ್ಭುತ ಆಟಗಾರ, ಅವರು ಗಾಯಗಳಿಂದ ಮುಕ್ತವಾಗಿ ಉಳಿದುಕೊಂಡಿದ್ದಾರೆ ಹಾಗೂ ಯಾವಾಗಲು ವಿಕೆಟ್ ಪಡೆಯುವ ಹಸಿವಿನಲ್ಲಿರುತ್ತಾರೆ. ಅವರ ಈ ಮನೋಭಾವದಿಂದಾಗಿ ಜೇಮ್ಸ್ ಆಂಡರ್ಸನ್ ಓರ್ವ ಸಾರ್ವಕಾಲಿಕ ಶ್ರೇಷ್ಠ ಬೇಗದ ಬೌಲರ್ ಎನಿಸಿಕೊಳ್ಳುತ್ತಾರೆ ಎಂದು ಮಾಂಟಿ ಪೆನೆಸರ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾಂಟಿ ಪೆನೆಸರ್ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆಯೂ ಮಾತನಾಡಿದರು. ಪಾಕಿಸ್ತಾನ ಕ್ರಿಕೆಟ್ ತಂಡ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವುದನ್ನು ತಿಳಿದುಕೊಳ್ಳಲು ಅತ್ಯಂತ ಯುವ ತಂಡವಾಗಿದೆ. ತಮ್ಮ ತಂಡವನ್ನು ಗೆಲುವಿನತ್ತ ತೆಗೆದುಹೋಗುವುದನ್ನು ಸಾಧಿಸಬೇಕಿದೆ ಎಂದು ಮಾಂಟಿ ಪೆನೆಸರ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವಿಶಿಷ್ಠ ದಾಖಲೆಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವಿಶಿಷ್ಠ ದಾಖಲೆ

ಇನ್ನು ಇದೇ ಸಂದರ್ಭದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಡ್ರಾ ಮಾಡಿಕೊಳ್ಳು ಯಶಸ್ವಿಯಾದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 583 ರನ್‌ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 273 ರನ್‌ಗೆ ಆಲೌಟ್ ಆಗಿ ಫಾಲೋಆನ್‌ಗೆ ತುತ್ತಾಯಿತು. ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್ ನಡೆಸಲು ಆರಂಭಿಸಿದ ಬಳಿಕ ಪಾಖಿಸ್ತಾ ತಂಡಕ್ಕೆ ಮಳೆ ಸಾಥ್ ನೀಡಿತು. ಅಂತಿಮವಾಗಿ ಫಲಿತಾಂಶ ಕಾಣದೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

Story first published: Thursday, August 27, 2020, 23:29 [IST]
Other articles published on Aug 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X