ನಿವೃತ್ತಿ ಘೋಷಿಸಲಿದ್ದಾರಾ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್?

ಲಂಡನ್, ಆಗಸ್ಟ್ 10: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆ್ಯಂಡರ್ಸನ್ ನಿವೃತ್ತಿ ಘೋಷಿಸುತ್ತಿರುವುದಾಗಿ ಗಾಳಿಸುದ್ದಿ ಹಬ್ಬಿರುವುದರಿಂದ ಇದಕ್ಕೆ ಜೇಮ್ಸ್ ಸ್ಪಷ್ಟನೆ ನೀಡಲಿದ್ದಾರೆ.

ಐಪಿಎಲ್ 2020: ಕಪ್‌ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿ

ಟೆಸ್ಟ್ ಕ್ರಿಕೆಟ್‌ನಲ್ಲಿ ಆ್ಯಂಡರ್ಸನ್ 600 ವಿಕೆಟ್ ದಾಖಲೆಯ ಸಮೀಪದಲ್ಲಿದ್ದಾರೆ. ಆದರೆ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಜೇಮ್ಸ್ ಬರೀ 6 ವಿಕೆಟ್ ಪಡೆದಿದ್ದರು. ಸದ್ಯ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದ ಆ್ಯಂಡರ್ಸನ್ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ಆ್ಯಂಡರ್ಸನ್ ನಿವೃತ್ತಿ ವಿಚಾರ ಹುಟ್ಟಿಕೊಂಡಿತ್ತು.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಆಗಸ್ಟ್ 13ರ ಗುರುವಾಗ ಏಜಸ್ ಬೌಲ್‌ನಲ್ಲಿ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಸಸೆಸ್ ವೇಗಿ ಆಲ್ಲಿ ರಾಬಿನ್ಸನ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕರೆ ನೀಡಿದೆ. ಪಾಕ್ ವಿರುದ್ಧ ರಾಬಿನ್ಸನ್ ಪಾದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್‌ ತಂಡದಲ್ಲಿನ ಈ ಬೆಳವಣಿಗೆ ಆ್ಯಂಡರ್ಸನ್ ನಿವೃತ್ತಿ ಗಾಳಿ ಸುದ್ದಿ ಹಬ್ಬುವಂತೆ ಮಾಡಿದೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕೂಡ ಪಾಕ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅನಾರೋಗ್ಯದ ಕಾರಣ ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್, ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪಾಕ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಸ್ಟೋಕ್ಸ್ ದೂರ ಉಳಿಯುವ ನಿರ್ಧಾರ ತಾಳಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲೀಗ ಇಂಗ್ಲೆಂಡ್ 1-0ಯ ಮುನ್ನಡೆಯಲ್ಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 10, 2020, 12:58 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X