ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಸರಣಿಯಲ್ಲಿ ಕೊಹ್ಲಿಗೆ ಸವಾಲೆಸೆಯಲು ಜೇಮ್ಸ್ ಆಂಡರ್ಸನ್ ಕಾತುರ

James Anderson Waiting To Challenge Virat Kohli

ಇಂಗ್ಲೆಂಡ್ ತಂಡದ ಅನುಭವಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಕೆಲವೇ ದಿನಗಳ ಹಿಂದೆ ಬರೆದುಕೊಂಡರು. ಈ ಮೂಲಕ ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಈ ಮಧ್ಯೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಸರಣಿಯತ್ತ ಜೇಮ್ಸ್ ಆಂಡರ್ಸನ್ ದೃಷ್ಠಿ ನೆಟ್ಟಿದ್ದು ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸವಾಲೆಸೆಯಲು ಕಾತುರನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಹಾಗೂ ಜೇಮ್ಸ್ ಆಂಡರ್ಸನ್ ಮಧ್ಯೆ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ವರ್ಷಗಳಿಂದ ಜಿದ್ದಾಜಿದ್ದಿನ ಪೈಪೋಟ ನಡೆಯುತ್ತಿದೆ.

ಐಪಿಎಲ್ 2020: ಮುಂಬೈ ಇಂಡಿಯನ್ಸ್‌ಗೆ ಸವಾಲಾಗಲಿರುವ ಸಂಗತಿ ಹೇಳಿದ ಬ್ರಾಡ್ ಹಾಗ್ಐಪಿಎಲ್ 2020: ಮುಂಬೈ ಇಂಡಿಯನ್ಸ್‌ಗೆ ಸವಾಲಾಗಲಿರುವ ಸಂಗತಿ ಹೇಳಿದ ಬ್ರಾಡ್ ಹಾಗ್

ವಿರಾಟ್ ಕೊಹ್ಲಿ ರೀತಿಯ ಉತ್ಕೃಷ್ಠ ಗುಣಮಟ್ಟದ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿರುವ ಆಟಗಾರರಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣ. ಅದೊಂದು ತುಂಬಾ ಕಠಿಣವಾದ ಹೋರಾಟ. ಆದರೆ ನಾನು ಅದನ್ನು ತುಂಬಾ ಅನುಭವಿಸುತ್ತೇನೆ. ಅತ್ಯುತ್ತಮ ಬ್ಯಾಟ್ಸ್‌ಮನ್‌ನ ವಿಕೆಟ್ ಪಡೆಯಲು ನೀವು ಯಾವಾಗಲು ಬಯಸುತ್ತಿರಬೇಕು ಎಂದು ಜೇಮ್ಸ್ ಆಂಡರ್‌ಸನ್ ಹೇಳಿದ್ದಾರೆ.

2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿಯನ್ನು 4 ಬಾರಿ ಔಟ್ ಮಾಡಿದ್ದರು. ಆ ಪ್ರವಾಸದಲ್ಲಿ 10 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 134 ರನ್ ಮಾತ್ರ. ವಿರಾಟ್ ವೃತ್ತಿ ಜೀವನದ ಅತ್ಯಂತ ಕಳಪೆ ಸರಣಿಯಲ್ಲಿ ಇದು ಒಂದಾಗಿದೆ.

ಯುಎಇ ಐಪಿಎಲ್‌ನ ಇತಿಹಾಸ : ಮುಂಬೈ ಇಂಡಿಯನ್ಸ್ ತಂಡದ ಕರಾಳ ನೆನಪು

ಆದರೆ ವಿರಾಟ್ ಕೊಹ್ಲಿ ಮುಂದಿನ ಇಂಗ್ಲೆಂಡ್ ಸರಣಿ 2018ರಲಲ್ಲಿ ನಡೆದಾಗ ಸಂಪೂರ್ಣ ವಿಭಿನ್ನ ಆಟಗಾರನಾಗಿದ್ದರು. ಆಗ ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು ಕೋಹ್ಲಿ. ಎರಡು ಶತಕ ಮೂರು ಅರ್ಧ ಶತಕಗಳ ಸಹಿತ ಆ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು ವಿರಾಟ್ ಕೊಹ್ಲಿ. ಹೀಗಾಗಿ ಮುಂದಿನ ಸರಣಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಅಭಿಮಾನಿಗಳಿಗೂ ಕುತೂಹಲ ಹೆಚ್ಚಿಸಿದೆ.

Story first published: Monday, August 31, 2020, 10:09 [IST]
Other articles published on Aug 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X