ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಝ್ಝಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹಿಂದೆ ಸರಿದ ಜಮ್ಮು & ಕಾಶ್ಮೀರ

Jammu & Kashmir to withdraw from Vizzy Trophy

ಜಮ್ಮು, ಆಗಸ್ಟ್ 20: ವಿಶಾಖಪಟ್ಟಣದಲ್ಲಿ ಆಗಸ್ಟ್ 22ರಿಂದ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ವಿಝ್ಝಿ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಜಮ್ಮು ಮತ್ತು ಕಾಶ್ಮೀರ ಹಿಂದೆ ಸರಿದಿದೆ. ಆಟಗಾರರನ್ನು ಸಂಪರ್ಕಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ನ ವೈಫಲ್ಯ ಮತ್ತು ತಾಣದಲ್ಲಿ ಭದ್ರತೆ ಒದಗಿಸುವ ಬಗ್ಗೆ ಸ್ಪಷ್ಟತೆ ಇಲ್ಲದ್ದರಿಂದ ಜಮ್ಮು ಮತ್ತು ಕಾಶ್ಮೀರ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕರ್ನಾಟಕ ರಣಜಿ ತಂಡಕ್ಕೆ ಗುಡ್‌ಬೈ ಹೇಳಿದ ದಾವಣಗೆರೆ ಎಕ್ಸ್‌ಪ್ರೆಸ್‌!ಕರ್ನಾಟಕ ರಣಜಿ ತಂಡಕ್ಕೆ ಗುಡ್‌ಬೈ ಹೇಳಿದ ದಾವಣಗೆರೆ ಎಕ್ಸ್‌ಪ್ರೆಸ್‌!

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಸಾಹ ಬುಖಾರಿ ಮಾತನಾಡಿ, ತಮಗೆ ರಾಜ್ಯಪಾಲ ಪಾಲ್ ಮಲ್ಲಿಕ್ ಕಚೇರಿಯಿಂದ ಈ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅಲ್ಲದೆ ತಮಗೆ ಮಲ್ಲಿಕ್ ಮತ್ತು ಚೀಫ್ ಸೆಲೆಕ್ಟರ್ ಎಂಎಸ್‌ಕೆ ಪ್ರಸಾದ್ ಮಧ್ಯೆ ಏನು ಮಾತುಕತೆಗಳಾಗಿವೆ ಎಂಬುದೂ ಗೊತ್ತಿಲ್ಲ ಎಂದಿದ್ದಾರೆ.

'ಕಾಫೀ ವಿತ್ ಕರಣ್' ವಿವಾದದ ಬಗ್ಗೆ ಮತ್ತೆ ತುಟಿ ಬಿಚ್ಚಿದ ಕೆಎಲ್ ರಾಹುಲ್'ಕಾಫೀ ವಿತ್ ಕರಣ್' ವಿವಾದದ ಬಗ್ಗೆ ಮತ್ತೆ ತುಟಿ ಬಿಚ್ಚಿದ ಕೆಎಲ್ ರಾಹುಲ್

'ವಿಝ್ಝಿ ಟ್ರೋಫಿ ಟೂರ್ನಿ ಆಡಲು ನಾವು ಹೋಗುತ್ತಿಲ್ಲ. ಆಟಗಾರರನ್ನು ಸಂಪರ್ಕಿಸೋದು ನಮಗೆ ದೊಡ್ಡ ಅಡಚಣೆಯಾಗಿತ್ತು. ಅಸೋಸಿಯೇಶನ್ ಆಫೀಸಿನಲ್ಲಿ ಎಲ್ಲಾ ಆಟಗಾರರ ಮೊಬೈಲ್ ಸಂಖ್ಯೆ ಇತ್ತು. ಆದರೆ ಅವರ್ಯಾರೂ ಅವರ ಲ್ಯಾಂಡ್‌ಲೈನ್‌ ನಂಬರ್ ಕೊಟ್ಟಿರಲಿಲ್ಲ,' ಬುಖಾರಿ ಹೇಳಿದರು.

ಸೇನಾ ಸೇವೆ ಮುಗಿಸಿ ಕುಟುಂಬ ಸೇರಿದ ಮಾಜಿ ನಾಯಕ ಎಂಎಸ್ ಧೋನಿಸೇನಾ ಸೇವೆ ಮುಗಿಸಿ ಕುಟುಂಬ ಸೇರಿದ ಮಾಜಿ ನಾಯಕ ಎಂಎಸ್ ಧೋನಿ

'ಈ ದಿನಗಳಲ್ಲಿ ಜನ ಲ್ಯಾಂಡ್‌ಲೈನ್ ಫೋನ್ ಬಳಸುತ್ತಿಲ್ಲ. ಎಲ್ಲರೂ ಸೆಲ್‌ಫೋನ್ ನೆಚ್ಚಿಕೊಂಡಿದ್ದಾರೆ. ನಾವು ಕೆಲ ಆಟಗಾರರ ಜೊತೆ ಮಾತನಾಡಿದೆವು. ಆದರೆ ಕಣಿವೆ ಭಾಗದಲ್ಲಿ ವಾಸವಿದ್ದ ಆಟಗಾರರ ಮೊಬೈಲ್ ಫೋನ್ ಕೆಲಸ ಮಾಡುತ್ತಿಲ್ಲದ್ದರಿಂದ ಅವರನ್ನು ಸಂಪರ್ಕಿಸಲಾಗಿಲ್ಲ. ಜೆ&ಕೆ ನಾಯಕ ಪರ್ವೇಝ್ ರಸೂಲ್ ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ,' ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಹೇಳಿಕೊಂಡಿದ್ದಾರೆ.

Story first published: Tuesday, August 20, 2019, 10:37 [IST]
Other articles published on Aug 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X